ಆಶಸ್ ಸರಣಿ: ಒಂದು ಪಂದ್ಯವನ್ನು ಗೆಲ್ಲಲೂ ಇಂಗ್ಲೆಂಡ್ ಅರ್ಹವಲ್ಲ ಎಂದ ಇಂಗ್ಲೆಂಡ್ ಮಾಜಿ ನಾಯಕ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆ್ಯಶಸ್ ಸರಣಿಯ ಎರಡು ಪಂದ್ಯಗಳು ಮುಕ್ತಾಯವಾಗಿದ್ದು ಎರಡು ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನೀರಸ ಪ್ರದರ್ಶನ ಸಹಜವಾಗಿಯೇ ಇಂಗ್ಲೆಂಡ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇನ್ನು ಇಂಗ್ಲೆಂಡ್ ತಮಡದ ಈ ಪ್ರದರ್ಶನದಿಂದಾಗಿ ತಂಡದ ಮಾಜಿ ನಾಯಕ ಕೆವಿನ್ ಪಿಟರ್ಸನ್ ಬೇಸತ್ತು ಹೋಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಸೋಲಿನ ಬಳಿಕ ತಮ್ಮ ಬ್ಲಾಗ್‌ನಲ್ಲಿ ಕೇವಿನ್ ಪೀಟರ್ಸನ್ ಬರೆದುಕೊಂಡಿದ್ದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದು ಇಂಗ್ಲೆಂಡ್ ತಂಡ ಈ ಆಶಸ್ ಸರಣಿಯಲ್ಲಿ ಒಂದು ಪಂದ್ಯವನ್ನು ಗೆಲ್ಲಲು ಕೂಡ ಅರ್ಹವಾಗಿಲ್ಲ ಎಂದಿದ್ದಾರೆ. ಈ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಪ್ರದರ್ಶನ ನೊಡಿದ ಬಳಿಕ ತಂಡ ತಿರುಗೇಟು ನೀಡುವ ಯಾವ ಸಾಧ್ಯತೆಯೂ ಇಲ್ಲ ಎಂದಿದ್ದಾರೆ ಪೀಟರ್ಸನ್.

ಸರಣಿಯಲ್ಲಿ ಹಿಡಿತ ಸಾಧಿಸುವುದು ಸಾಧ್ಯವಿಲ್ಲ
"ದುರದೃಷ್ಟವಶಾತ್ ನನಗೆ ಅನುಭವದಿಂದ ತಿಳಿದಿದೆ. ಆಶಸ್ ಸರಣಿ ತವರಿನಿಂದ ಆಚೆಗೆ ನಡೆಯುತ್ತಿರುವ ಸಂದರ್ಭದಲ್ಲಿ 2-0 ಅಂತರದ ಹಿನ್ನೆಡೆಯನ್ನು ನೀವು ಅನುಭವಿಸುತ್ತಿದ್ದರೆ ಮತ್ತೆ ಸರಣಿಯನ್ನು ಮತ್ತೆ ಹಿಡಿತಕ್ಕೆ ಪಡೆಯುವ ಬಗ್ಗೆ ನನಗೆ ನಂಬಿಕೆಯಿಲ್ಲ. ಈ ಹಿಂದೆ ನಾವು ವಾಕಾಗೆ ತೆರಳಲಿದ್ದೆವು. ಅಲ್ಲಿ ಇಂಗ್ಲೆಂಡ್ ಪ್ರತಿ ಬಾರಿಯೂ ಸೋಲುತ್ತಲೇ ಬಂದಿದೆ. ಆದರೆ ಈ ಬಾರಿ ನೇರವಾಗಿ ಮೇಲ್ಬೋರ್ನ್‌ಗೆ ತೆರಳುತ್ತಿದ್ದೇವೆ. ಆದರೆ ಈ ಪ್ರದರ್ಶನವನ್ನು ನೋಡಿದಾಗ ಈ ಸರಣಿಯಲ್ಲಿ ಇಂಗ್ಲೆಂಡ್ ಒಂದು ಪಂದ್ಯವನ್ನು ಕೂಡ ಗೆಲ್ಲುವ ಅರ್ಹತೆಯನ್ನು ಹೊಂದಿದೆ ಎನಿಸುತ್ತಿಲ್ಲ" ಎಂದು ಕೆವಿನ್ ಪೀಟರ್ಸ್ನ್ ಹೇಳಿದ್ದಾರೆ.

ಕಳಪೆ ಪ್ರದರ್ಶನ ಮುಂದುವರಿದಿದೆ
ಮುಂದುವರಿದು ಕೆವಿನ್ ಪೀಟರ್ಸನ್ "ಪ್ರತಿ ಬಾರಿಯೂ ಇಂಗ್ಲೆಂಡ್ ತಂಡ ಉತ್ತಮ ಇನ್ನಿಂಗ್ಸ್ ನೀಡುವ ವಿಶ್ವಾಸವನ್ನು ಮೂಡಿಸುತ್ತಿದ್ದಂತೆಯೇ ಮತ್ತೊಂದು ಭಯಾನಕವಾದ ಸೆಶನ್ ಎದುರಿಸುತ್ತದೆ. ಅವರಿಂದ ಕೆಲ ಉತ್ತಮವಾದ ಸೆಶನ್‌ಗಳನ್ನು ಹಾಗೂ ಉತ್ತಮ ದಿನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ" ಎಂದು ಬರೆದುಕೊಂಡಿದ್ದಾರೆ.

ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್ ಬಗ್ಗೆ ಪೀಟರ್ಸನ್ ಬೇಸರ
ಇನ್ನು ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ನೀಡುತ್ತಿರುವ ಕಳಪೆ ಪ್ರದರ್ಶನದಲ್ಲಿ ಬ್ಯಾಟಿಂಗ್ ವಿಭಾಗದ ವೈಫಲ್ಯವನ್ನು ಪೀಟರ್ಸನ್ ಬೊಟ್ಟು ಮಾಡಿದ್ದಾರೆ. ಸರಣಿಯಲ್ಲಿ ಬ್ಯಾಟಿಂಗ್ ವಿಭಾಗ ಪದೇ ಪದೆ ವೈಫಲ್ಯವನನ್ಉ ಅನುಭವಿಸುತ್ತಿರುವುದು ತಂಡದ ಈ ಹಿನ್ನೆಡೆಗೆ ಕಾರಣವಾಗಿದೆ ಎಂದಿದ್ದಾರೆ. ಇನ್ನು 200 ರನ್‌ಗಳ ಆಸುಪಾಸಿನಲ್ಲಿ ಆಲೌಟ್ ಆದರೆ ಆಶಸ್‌ನಂತಾ ಸರಣಿಯನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಹೆಚ್ಚು ರನ್‌ಗಳನ್ನು ಗಳಿಸಿದಾಗ ಬೌಲರ್‌ಗಳಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದು ಪೀಟರ್ಸನ್ ಹೇಳಿದ್ದಾರೆ. ಡೇವಿಡ್ ಮಲನ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಬೆನ್ ಸ್ಟೋಕ್ಸ್ ವೈಫಲ್ಯಕ್ಕೆ ಬೇಸರಿಸಿದ್ದಾರೆ.

ಕೌಂಟಿ ಕ್ರಿಕೆಟ್ ಬಗ್ಗೆ ಪೀಟರ್ಸನ್ ಅಸಮಾಧಾನ
ಇನ್ನು ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗದ ವೈಫಲ್ಯಕ್ಕೆ ಪೀಟರ್ಸನ್ ಇಂಗ್ಲೆಂಡ್ ಕ್ರಿಕೆಟ್ ವ್ಯವಸ್ಥೆಯ ಬಗ್ಗೆ ಕಿಡಿ ಕಾರಿರುವ ಪೀಟರ್ಸನ್ ಕೌಂಟಿ ಕ್ರಿಕೆಟ್ ಸಂಪೂರ್ಣವಾಗಿ ಕಳಪೆಯಾಗಿದೆ ಎಂದಿದ್ದಾರೆ. ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ ವ್ಯವಸ್ಥೆ ಉತ್ತಮವಾದ ಬ್ಯಾಟ್ಸ್‌ಮನ್ ಅಥವಾ ಬೌಲರ್‌ಗಳನ್ನು ತಂಡಕ್ಕೆ ನೀಡುತ್ತಿಲ್ಲ. ದೇಶ ಇನ್ನು ಕೂಡ ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನೇ ನೆಚ್ಚಿಕೊಂಡಿದೆ. ಇಸಿಬಿ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಬದಲಾವಣೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಈ ದುರಂತಗಳು ನಡೆಯುತ್ತಲೇ ಇರುತ್ತದೆ" ಎಂದು ಪೀಟರ್ಸನ್ ಎಚ್ಚರಿಕೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications