ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ದಿಗ್ಗಜ ವೇಗಿ ಸ್ಟುವರ್ಟ್ ಬ್ರಾಡ್: ಆಶಸ್ ಸರಣಿಯೇ ಅಂತಿಮ
ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆಶಸ್ ಟೆಸ್ಟ್ ಸರಣಿಯ ಮೂರನೇ ದಿನದಾಟದ ಬಳಿಕ ಸ್ಟುವರ್ಟ್ ಬ್ರಾಡ್ ಈ ಬಗ್ಗೆ ನಿರ್ಧಾರವನ್ನು ಬಹಿರಂಗಪಡಿಸಿದ್ದು ಪ್ರಸ್ತುತ ನಡೆಯುತ್ತಿರುವ ಓವಲ್ ಟೆಸ್ಟ್ ಪಂದ್ಯವೇ ತನ್ನ ಅಂತಿಮ ಟೆಸ್ಟ್ ಎಂದು ಘೋಷಣೆ ಮಾಡಿದ್ದಾರೆ.
ಸ್ಕೈ ಕ್ರಿಕೆಟ್‌ಗೆ ನೀಡಿರುವ ಸಂದರ್ಶನದಲ್ಲಿ ಸ್ಟುವರ್ಟ್ ಬ್ರಾಡ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ನಾಳೆ(ಭಾನುವಾರ) ಹಾಗೂ ಸೋಮವಾರ ನಾನು ಕೊನೆಯ ಬಾರಿಗೆ ಆಡಲಿದ್ದೇನೆ. ಇದೊಂದು ಬಹಳ ಅದ್ಭುತವಾದ ಪ್ರಯಾಣವಾಗಿತ್ತು. ನಾಟಿಂಗ್‌ಹ್ಯಾಮ್‌ಶೈರ್ ಮತ್ತು ಇಂಗ್ಲೆಂಡ್ ತಂಡವನ್ನು ನನ್ನಿಂದ ಸಾಧ್ಯವಾದಷ್ಟು ಸಮಯ ಪ್ರತಿನಿಧಿಸುವ ಅಕಾಶ ದೊರೆತಿರುವುದಕ್ಕೆ ನಾನು ಋಣಿ. ಎಂದುನಂತೆಯೇ ನಾನು ಕ್ರಿಕೆಟನ್ನು ಸಾಕಷ್ಟು ಪ್ರೀತಿಸುತ್ತೇನೆ" ಎಂದಿದ್ದಾರೆ.

ಮುಂದುವರಿದು ಬ್ರಾಡ್ "ನಾನು ಇಷ್ಟು ಅದ್ಭುತವಾದ ಸರಣಿಯಲ್ಲಿ ಭಾಗಿಯಾಗಿರುವುದು ಅದ್ಭುತವಾದ ಅನುಭವ. ನಾನು ಯಾವಾಗಲೂ ಅತ್ಯುನ್ನತ ಮಟ್ಟದಲ್ಲಿದ್ದಾಗಲೇ ವೃತ್ತಿಜೀವನ ಕೊನೆಯಗೊಳಿಸಲಯ ಬಯಸಿದ್ದೆ. ಈ ಸರಣಿ ನಾನು ಬಹಳಷ್ಟು ಆನಂದಿಸಿದ ಆನಂದಿಸಿದ ಸರಣಿಗಳಲ್ಲಿ ಒಂದಾಗಿದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.
"ಕಳೆದ ರಾತ್ರಿ 8:30ರ ಸಮತದಲ್ಲಿ ನಾನು ಈ ಬಗ್ಗೆ ನಿರ್ಧಾರ ಮಾಡಿದೆ. ಕಳೆದ ಕೆಲ ವಾರಗಳಿಂದೂ ನಾನು ಈ ಬಗ್ಗೆ ಆಲೋಚಿಸುತ್ತಿದ್ದೆ. ಆದರೆ ಇಂಗ್ಲೆಂಡ್ vs ಆಸ್ಟ್ರೇಲಿಯಾ ಸರಣಿ ಯಾವಾಘಲೂ ನನಗೆ ಅತ್ಯುನ್ನತವಾದ ಸರಣಿಯಾಗಿದೆ. ವೈಯಕ್ತಿಕವಾಗಿ ಹಾಗೂ ತಂಡವಾಗಿ ಆಸ್ಟ್ರೇಲಿಯಾ ವಿರುದ್ಧ ಆಡುವುದು ಎಂದರೆ ನನಗೆ ಬಹಳ ಇಷ್ಟ" ಎಂದಿದ್ದಾರೆ ಸ್ಟುವರ್ಟ್ ಬ್ರಾಡ್.
2007ರ ಡಿಸಂಬರ್‌ನಲ್ಲಿ ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡಿದ ಸ್ಟುವರ್ಟ್ ಬ್ರಾಡ್ 167 ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತಿತ ನಡೆಯುತ್ತಿರುವ ಆಶಸ್ ಸರನಿಯ ಮೂಲಕವೇ ಅವರು ಟೆಸ್ಟ್ ಮಾದರಿಯಲ್ಲಿ 600 ವಿಕೆಟ್ ಪಡೆದ ದೊಡ್ಡ ಮೈಲಿಗಲ್ಲನ್ನು ಕೂಡ ದಾಟಿದ್ದರು. ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಸ್ಟುವರ್ಟ್ ಬ್ರಾಡ್ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಕೇವಲ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಸುದೀರ್ಘ ಕಾಲದ ಜೊತೆಗಾರ ಜೇಮ್ಸ್ ಆಂಡರ್ಸನ್ ಇದ್ದಾರೆ.
ಇನ್ನು ಇಂಗ್ಲೆಂಡ್‌ನ ಈ ದಿಗ್ಗಜ ವೇಗದ ಬೌಲರ್ ಟೆಸ್ಟ್‌ಬಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿದ್ದರೂ ವೈಟ್‌ವಾಲ್ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. 121 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಬ್ರಾಡ್ 178 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇನ್ನು 56 ಟಿ20 ಪಂದ್ಯಗಳಲ್ಲಿಯೂ ಆಡಿರುವ ಬ್ರಾಡ್ 65 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications