ಭಾರತ ಮಹಿಳಾ ತಂಡ ಒಳಗೊಂಡ ತ್ರಿಕೋನ ಸರಣಿ ಆಯೋಜನೆಗೆ ಇಂಗ್ಲೆಂಡ್ ಒಲವು

ಕೊರೊನಾ ವೈರಸ್‌ನಿಂದಾಗ ಕ್ರಿಕೆಟ್ ಸ್ಥಗಿತಗೊಂಡ ಬಳಿಕ ಮತ್ತೆ ಕ್ರಿಕೆಟ್ ಆಟಕ್ಕೆ ಸಿದ್ದತೆಗಳು ನಡೆಯುತ್ತಿದೆ. ಇದರಲ್ಲಿ ಇಂಗ್ಲೆಂಡ್ ಮುಂಚೂಣಿಯಲ್ಲಿದೆ. ವಿಂಡೀಸ್ ವಿರುದ್ಧದ ಸರಣಿಗೆ ದಿನಗಣನೆ ಆರಂಭವಾಗಿದೆ. ಮತ್ತೊಂದೆಡೆ ಪಾಕಿಸ್ತಾನ ಕೂಡ ತಮ್ಮ ತಂಡವನ್ನು ಇಂಗ್ಲೆಂಡ್‌ಗೆ ಕಳುಹಿಸಲು ಸಿದ್ದವಾಗುತ್ತಿದೆ.
ಈ ಮಧ್ಯೆ ಭಾರತ ಮಹಿಳಾ ತಂಡವನ್ನೂ ಒಳಗೊಂಡ ಮಹಿಳಾ ಕ್ರಿಕೆಟ್ ತ್ರಿಕೋನ ಸರಣಿ ಆಯೋಜನೆಗೆ ಇಂಗ್ಲೆಂಡ್ ಉತ್ಸುಕವಾಗಿದೆ. ಭಾರತ, ದಕ್ಷಿಣ ಆಫ್ರಿಕಾ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿ ಆಯೋಜನೆ ಮಾಡಲು ಇಂಗ್ಲೆಂಡ್ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಬಿಸಿಸಿಐ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ.
ಪುರುಷರ ಕ್ರಿಕೆಟ್‌ಗೆ ಜುಲೈ ತಿಂಗಳಿನಲ್ಲಿ ಚಾಲನೆ ದೊರೆಯುತ್ತಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಯೋಜನೆ ಮಾಡಲು ಇಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಮ್ ಹಾರಿಸನ್ ಗಮನಹರಿಸಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕನ ಮೈಕಲ್ ವಾನ್ ಜೊತೆಗೆ ಪಾಡ್ ಕಾಸ್ಟ್‌ನಲ್ಲಿ ಪಾಲ್ಗೊಂಡಿದ್ದ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.
ನಾವು ಅಂತಾರಾಷ್ಟ್ರೀಯ ಕ್ರಿಕೆಟನ್ನು ಪಡೆದುಕೊಳ್ಳಲಿದ್ದೇವೆ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಈ ಬೇಸಿಗೆಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಗಳಿಸಿಕೊಳ್ಳಲು ಸಿದ್ದತೆಗಳು ಆಗುತ್ತಿದೆ. ಬಿಸಿಸಿಐ ಮತ್ತು ಕ್ರಿಕೆಟ್ ಸೌತ್ ಆಫ್ರಿಕಾ ಜೊತೆಗೆ ಮಾತುಕತೆಯನ್ನು ನಡೆಸಲಾಗುತ್ತಿದ್ದು ತ್ರಿಕೋನ ಸರಣಿಗಾಗಿ ಚರ್ಚೆಗಳು ನಡೆಯುತ್ತಿದೆ ಎಂದು ಟಾಮ್ ಹಾರಿಸನ್ ಹೇಳಿಕೊಂಡಿದ್ದಾರೆ.
ಈ ಸರಣಿಯ ಆಯೋಜನೆ ಕೊರೊನಾ ವೈರಸ್‌ನಿಂದ ಉಂಟಾಗಿರುವ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಭಾರತದಲ್ಲಿ ಕೊರೊನಾ ವೈರಸ್‌ನ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications