Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಎಲ್ಟಿ20ಗಾಗಿ ತಂಡವನ್ನು ಪ್ರಕಟಿಸಿದ ಇಂಗ್ಲೆಂಡ್

ಲಂಡನ್, ಏಪ್ರಿಲ್ 25: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ಕ್ಕೆ ಅತಿಥೇಯ ತಂಡ ಇಂಗ್ಲೆಂಡ್ 15 ಮಂದಿ ಸದಸ್ಯರ ತಂಡವನ್ನು ಪ್ರಕಟಿಸಿದೆ. ಇಯಾನ್ ಮಾರ್ಗನ್ ನಾಯಕರಾಗಿದ್ದಾರೆ.

ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ಈ ಪಂದ್ಯಗಳು ನಡೆಯಲಿವೆ. ಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು /ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ. [#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]

England name 15-man squad for ICC Champions Trophy 2017

ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ. ಆದರೆ, ಆರ್ಥಿಕ ವ್ಯವಹಾರ ಕುದುರದ ಕಾರಣ ಐಸಿಸಿ ಆಯೋಜನೆಯ ಈ ಟೂರ್ನಿಯಲ್ಲಿ ಬಿಸಿಸಿಐಯ ಟೀಂ ಇಂಡಿಯಾ ತಂಡ ಪಾಲ್ಗೊಳ್ಳುವುದು ಅನುಮಾನವಾಗಿದೆ.

ಆಸ್ಟ್ರೇಲಿಯಾ, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳಿರುವ ಎ ಗುಂಪಿನಲ್ಲಿ ಇಂಗ್ಲೆಂಡ್ ಕೂಡಾ ಇದೆ. ಇಂಗ್ಲೆಂಡ್ ತನ್ನ ಮೊದಲ ಪಂದ್ಯವನ್ನು ದಿ ಓವಲ್ ನಲ್ಲಿ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ.

ಚಾಂಪಿಯನ್ಸ್ ಟ್ರೋಫಿಗಾಗಿ ಇಂಗ್ಲೆಂಡ್ ತಂಡ:
1. ಇಯಾನ್ ಮಾರ್ಗನ್ (ಮಿಡ್ಲ್ ಸೆಕ್ಸ್, ನಾಯಕ)
2. ಮೋಯಿನ್ ಅಲಿ(ವೊರ್ಸೆಸ್ಟರ್ ಶೈರ್)
3. ಜಾನಿ ಬೈರ್ಸ್ಟೋ (ಯಾರ್ಕ್ ಶೈರ್)
4. ಜಾಕ್ ಬಾಲ್ (ನ್ಯಾಟಿಂಗ್ ಹ್ಯಾಮ್ ಶೈರ್)
5. ಸ್ಯಾಮ್ ಬಿಲ್ಲಿಂಗ್ಸ್ (ಕೆಂಟ್)
6. ಜೋಸ್ ಬಟ್ಲರ್ (ಲಂಕಾಶೈರ್, ವಿಕೆಟ್ ಕೀಪರ್)
7. ಅಲೆಕ್ಸ್ ಹೇಲ್ಸ್ ( ನ್ಯಾಟಿಂಗ್ ಹ್ಯಾಮ್ ಶೈರ್)
8. ಲಿಯಾಮ್ ಪ್ಲುಮ್ಕೆಟ್ ( ಯಾರ್ಕ್ ಶೈರ್)
9. ಜೋ ರೂಟ್ (ಯಾರ್ಕ್ ಶೈರ್)
10. ಅದಿಲ್ ರಶಿದ್ (ಯಾಕ್ ಶೈರ್)
11. ಜಾಸ್ ರಾಯ್ (ಸರೆ)
12. ಬೆನ್ ಸ್ಟೋಕ್ಸ್ (ಡರ್ ಹ್ಯಾಮ್)
13. ಡೇವಿಡ್ ಇಲ್ಲಿ (ಯಾರ್ಕ್ ಶೈರ್)
14. ಕ್ರಿಸ್ ವೋಕ್ಸ್ (ವಾರ್ವಿಕ್ ಶೈರ್)
15. ಮಾರ್ಕ್ ವುಡ್ (ಡರ್ ಹ್ಯಾಮ್)
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+