ಮಾಡೆಲ್ ವರಿಸಿದ ಇಂಗ್ಲೆಂಡ್ ಏಕದಿನ ತಂಡದ ನಾಯಕ ಇಯಾನ್ ಮಾರ್ಗನ್

ಲಂಡನ್, ನವೆಂಬರ್ 4: ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ಶನಿವಾರ (ನವೆಂಬರ್ 3) ಅವರು ತನ್ನ ಬಹುಕಾಲದ ಗೆಳತಿ ತಾರಾ ರಿಗ್ವೆ ಅವರನ್ನು ವರಿಸುವ ಮೂಲಕ ಗೃಹಸ್ಥ ಜೀವನದ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಮಾರ್ಗನ್ ಮದುವೆ ಇಂಗ್ಲೆಂಡ್ ನ ಐತಿಹಾಸಿಕ ಬಾಬಿಂಗ್ಟನ್ ಹೌಸ್‌ನಲ್ಲಿ ನಡೆಯಿತು. ಸುಮಾರು 130 ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸೇರಿದ್ದ ಸ್ಟಾರ್ ಗಳಲ್ಲಿ ಪ್ರಮುಖಾಕರ್ಷಣೆಯಾಗಿದ್ದು, ನ್ಯೂಜಿಲ್ಯಾಂಡ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್.
'ತನ್ಯ ಪೊವೆಲ್'ನೊಂದಿಗೆ ಪಾರ್ಟ್ ಟೈಮ್ ಮಾಡೆಲ್ ಆಗಿರುವ ತಾರಾ, ಅಡಿಲೇಡ್ ನಲ್ಲಿ 2010ರ ಕ್ರಿಸ್‌ಮಸ್‌ಗೂ ಮುನ್ನ ಇಯಾನ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಅಂದಿನಿಂದಲೂ ಇಬ್ಬರೂ ಪ್ರೀತಿಯಲ್ಲಿದ್ದರು.
ಮದುವೆಯಲ್ಲಿ ಪಾಲ್ಗೊಂಡಿದ್ದ ಮಾರ್ಗನ್ ಆತ್ಮೀಯ ಸ್ನೇಹಿತ ಮೆಕಲಮ್ ಜೊತೆ ಇಂಗ್ಲೆಂಡ್ ಕ್ರಿಕೆಟರ್ ಜೇಸನ್ ರಾಯ್, ಸ್ಟೀವ್ ಫಿನ್ ಇದ್ದರು. ಜೊತೆಗೆ ಇತ್ತೀಚೆಗೆ ಭಾರತ ವಿರುದ್ಧದ ಟೆಸ್ಟ್ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಅಲಾಸ್ಟೇರ್ ಕುಕ್ ಕೂಡ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications