England Crikcet: ಇಂಗ್ಲೆಂಡ್‌ನ ಏಕದಿನ-ಟಿ20 ತಂಡದ ಕೋಚ್ ರಾಜೀನಾಮೆ; ಈ ಅನುಭವಿ ಆಟಗಾರನಿಗೆ ಪಟ್ಟ!
ಜುಲೈ 30 ಮಂಗಳವಾರ, 2024ರ ಟಿ20 ವಿಶ್ವಕಪ್‌ನಲ್ಲಿ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಆನೇಕ ಬದಲಾವಣೆಗಳು ನಡೆದಿವೆ. ಇಂಗ್ಲೆಂಡ್ ತಂಡದ ಕಳಪೆ ಪ್ರದರ್ಶನಕ್ಕಾಗಿ ಕೋಚ್ ಮ್ಯಾಥ್ಯೂ ಮೋಟ್ ಟೀಕೆಗೆ ಗುರಿಯಾಗಿದ್ದಾರೆ.
ಇದರ ಬೆನ್ನಲ್ಲೇ ಮ್ಯಾಥ್ಯ ಮೋಟ್ ಅವರು ತಮ್ಮ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೋಟ್ ಏಕದಿನ ಮತ್ತು ಟಿ20ಯಲ್ಲಿ ತಂಡದ ಕೋಚ್ ಆಗಿದ್ದು, 4 ವರ್ಷಗಳ ಗುತ್ತಿಗೆ ಪಡೆದಿದ್ದರು.

ಮ್ಯಾಥ್ಯ ಮೋಟ್ ಅವರ ಕೋಚಿಂಗ್ ಅವಧಿಯಲ್ಲಿ ಇಂಗ್ಲೆಂಡ್ ತಂಡವು 2022ರ ಟಿ20 ವಿಶ್ವಕಪ್ ಗೆದ್ದಿತ್ತು. ಆದರೆ, ಮೋಟ್ ಅವರ ತಂಡವು ಈ ಬಾರಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕೇವಲ ಟಿ20 ವಿಶ್ವಕಪ್ ಮಾತ್ರವಲ್ಲ, ಮ್ಯಾಥ್ಯೂ ಮೋಟ್ ಅವರು 2019ರಲ್ಲಿ ಗೆದ್ದ ಏಕದಿನ ವಿಶ್ವಕಪ್ ಟ್ರೋಫಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಕಳೆದ ವರ್ಷ 2023ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ 9 ಪಂದ್ಯಗಳಲ್ಲಿ 3 ರಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು.
ಭಾನುವಾರ, ಮೋಟ್ ಇಂಗ್ಲೆಂಡ್ ಪುರುಷರ ಕ್ರಿಕೆಟ್‌ನ ಇಸಿಬಿ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಅವರನ್ನು ಭೇಟಿಯಾಗಿದ್ದರು. ಅವರೊಂದಿಗೆ ಚರ್ಚಿಸಿದ ನಂತರ ಮ್ಯಾಥ್ಯೂ ಮೋಟ್ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.
ನೂತನ ಕೋಚ್ ಯಾರು?
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಹಿರಿಯ ಆಟಗಾರ ಮಾರ್ಕಸ್ ಟ್ರೆಸ್ಕೋಥಿಕ್ ಅವರನ್ನು ಮೊಟ್ ಬದಲಿಗೆ ಹಂಗಾಮಿ ಕೋಚ್ ಆಗಿ ನೇಮಿಸಿದೆ. ಮಾರ್ಕಸ್ ಟ್ರೆಸ್ಕೋಥಿಕ್ ತಂಡದ ಸಹಾಯಕ ಕೋಚ್ ಆಗಿದ್ದರು.
ಈಗ ಮಾರ್ಕಸ್ ಟ್ರೆಸ್ಕೋಥಿಕ್ ಮೇಲ್ವಿಚಾರಣೆಯಲ್ಲಿ ತಂಡವು ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಮತ್ತು ಐದು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಹಿಂದೆ ಮ್ಯಾಥ್ಯೂ ಮೋಟ್ ಅವರ ಅವಧಿಯಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನದ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಇಂಗ್ಲೆಂಡ್ ಗೆದ್ದು ಬೀಗಿದೆ.
ಮ್ಯಾಥ್ಯೂ ಮೋಟ್ ಹೇಳಿದ್ದೇನು?
ಇಂಗ್ಲೆಂಡ್ ಪುರುಷರ ತಂಡದ ಕೋಚ್ ಆಗಿರುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ ಎಂದು ಮೋಟ್ ಹೇಳಿದ್ದಾರೆ. ಅದೊಂದು ಗೌರವ. ಕಳೆದ ಎರಡು ವರ್ಷಗಳಲ್ಲಿ ಯಶಸ್ಸನ್ನು ಸಾಧಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ.
2022 ರಲ್ಲಿ ಅದ್ಭುತವಾದ ಟಿ20 ವಿಶ್ವಕಪ್ ಗೆಲುವು ಸೇರಿದಂತೆ ಈ ಅವಧಿಯಲ್ಲಿ ತಂಡವು ತೋರಿದ ಪಾತ್ರ ಮತ್ತು ಉತ್ಸಾಹದ ಬಗ್ಗೆ ನಾನು ತುಂಬಾ ಹೆಮ್ಮೆಪಡುತ್ತೇನೆ. ಬೆಂಬಲ ಮತ್ತು ಕಠಿಣ ಪರಿಶ್ರಮಕ್ಕಾಗಿ ಆಟಗಾರರು, ಮ್ಯಾನೇಜ್‌ಮೆಂಟ್ ಮತ್ತು ಇಸಿಬಿಯಲ್ಲಿರುವ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಅನೇಕ ಉತ್ತಮ ಸ್ನೇಹ ಮತ್ತು ಅದ್ಭುತ ನೆನಪುಗಳೊಂದಿಗೆ ಹೊರಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications