IND vs ENG: ವಿರಾಟ್ ಅಹಂಕಾರಕ್ಕೆ ಪೆಟ್ಟು ನೀಡಲು ಸಿದ್ಧ ಎಂದ ಇಂಗ್ಲೆಂಡ್ ವೇಗಿ
ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಟಿ20 ಸರಣಿ ಮುಗಿದಿದೆ. ಈಗ ಭಾರತ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲು ಸಿದ್ಧತೆ ನಡೆಸಿದೆ. ಈಗಾಗಲೇ ಇಂಗ್ಲೆಂಡ್ ಆಟಗಾರರು ಇಲ್ಲಿನ ಪಿಚ್ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಈಗ ಆಂಗ್ಲರ ಪಡೆಯ ವೇಗಿ ಓಲಿ ರಾಬಿನ್ಸನ್ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಕೆದಕಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ಇಂಗ್ಲೆಂಡ್ ಕಣ್ಣು ನೆಟ್ಟಿರುತ್ತದೆ. ವಿರಾಟ್ ಅವರನ್ನು ಒಮ್ಮೆ ಆಡಲು ಬಿಟ್ಟರೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಇಂಗ್ಲೆಂಡ್ ತಂಡಕ್ಕೆ ತಿಳಿದಿದೆ. ಎಲ್ಲ ಸರಣಿಗಳು ಆರಂಭಕ್ಕೆ ಮುನ್ನ, ಎದುರಾಳಿ ತಂಡದ ಬೌಲರ್‌ಗಳು ವಿರಾಟ್ ಕೊಹ್ಲಿ ಅವರನ್ನು ಕಟ್ಟಿ ಹಾಕುತ್ತೇವೆ ಎಂದು ಅಬ್ಬರಿಸುತ್ತಾರೆ. ಅದೆ ರೀತಿ ಓಲಿ ರಾಬಿನ್ಸನ್ ಕನಸು ಕಾಣುತ್ತಿದ್ದಾರೆ. ಸರಣಿಯಲ್ಲಿ ವಿರಾಟ್ ಕೊಹ್ಲಿ ವಿರುದ್ಧ ರಾಬಿನ್ಸನ್ ಯೋಜನೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಪ್ರತಿ ಸೋಲಿನಲ್ಲೂ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸುತ್ತೇನೆ ಎನ್ನುತ್ತಾರೆ ರಾಬಿನ್ಸನ್.

ಆದಾಗ್ಯೂ, ರಾಬಿನ್ಸನ್ ವಿರಾಟ್ ಕೊಹ್ಲಿಯನ್ನು ಅತ್ಯುತ್ತಮ ಕ್ರಿಕೆಟಿಗ ಎಂದು ಹೇಳಿದ್ದಾರೆ. ನೀವು ಯಾವಾಗಲೂ ಅತ್ಯುತ್ತಮ ಕ್ರಿಕೆಟಿಗನ ವಿರುದ್ಧ ಆಡಲು ಬಯಸುತ್ತೀರಿ. ಅದೇ ರೀತಿ ನನಗೂ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್‌ನನ್ನು ಕಟ್ಟಿ ಹಾಕ ಬಹುದು ಎಂಬ ಯೋಜನೆಯನ್ನು ಹಾಕಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ವಿರಾಟ್‌ಗೆ ಅಹಂ ಇದೆ
ವಿರಾಟ್ ಕೊಹ್ಲಿಗೆ ದೊಡ್ಡ ಅಹಂ ಇದೆ. ನಾನು ವಿರಾಟ್ ಕೊಹ್ಲಿ ಅವರ ಅಹಂನೊಂದಿಗೆ ಆಡಲು ಯೋಜಿಸಿದ್ದೇನೆ. ಭಾರತದಲ್ಲಿ ವಿರಾಟ್ ಕೊಹ್ಲಿಯ ಅಹಂಕಾರದೊಂದಿಗೆ ಆಟವಾಡುವುದು ಹೆಚ್ಚು ಆಸಕ್ತಿಕರವಾಗಿರುತ್ತದೆ. ವಿರಾಟ್ ಕೊಹ್ಲಿ ಭಾರತದಲ್ಲಿ ಆಡುತ್ತಿದ್ದು, ಇಲ್ಲಿ ಅವರು ರನ್ ಗಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಈ ಹಿಂದೆಯೂ ಇಂತಹ ಜಗಳ ನಡೆದಿತ್ತು. ನಾನು ಇದಕ್ಕೆ ಸಿದ್ಧನಿದ್ದೇನೆ ಎಂದು ನುಡಿದಿದ್ದಾರೆ.

ಈ ಇಂಗ್ಲೆಂಡ್ ವೇಗದ ಬೌಲರ್ ಭಾರತದ ವಿರುದ್ಧ ಇಂಗ್ಲೆಂಡ್ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರು ಭಾರತೀಯ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡುವುದು ಇದೇ ಮೊದಲು. ಈ 30 ವರ್ಷದ ವೇಗದ ಬೌಲರ್ ಭಾರತದ ಈ ಪ್ರವಾಸವನ್ನು ಯಶಸ್ವಿ ಗೊಳಿಸುವ ವಿಶ್ವಾಸವನ್ನು ಹೊಂದಿದ್ದಾರೆ. ನಾನು ಭಾರತದಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವ ಇರಾದೆ ಇದೆ. ಆದ್ದರಿಂದ ಇದು ನನ್ನ ವೃತ್ತಿ ಜೀವನಕ್ಕೂ ಸಹಾಯವಾಗುತ್ತದೆ. ಉತ್ತಮ ಪ್ರದರ್ಶನ ನೀಡಿದರೆ ತಂಡದಲ್ಲಿ ನನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬಹುದು ಎಂದಿದ್ದಾರೆ.
ಭಾರತ ವಿರುದ್ಧದ ಸರಣಿಯನ್ನು ಗೆಲ್ಲಲು ಇಂಗ್ಲೆಂಡ್ ತನ್ನ ಬೇಸ್‌ಬಾಲ್ ತಂತ್ರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಹೋಗುವುದಿಲ್ಲ. ಕಳೆದ ಎರಡು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ಸನ್ನು ತಂದುಕೊಟ್ಟ ಏಕೈಕ ವಿಧಾನವೆಂದರೆ ಬೇಸ್‌ಬಾಲ್ ಎಂದು ಇಂಗ್ಲೆಂಡ್ ತಿಳಿದು ಕೊಂಡಿದೆ. ಭಾರತ ವಿರುದ್ಧದ ಸರಣಿ ಗೆಲ್ಲಲು ಇದೇ ದಾರಿಯಾಗಬಹುದು.
ಇಂಗ್ಲೆಂಡ್ ತಂಡ ಕೊನೆಯದಾಗಿ 2012ರಲ್ಲಿ ಭಾರತ ವಿರುದ್ಧ ಸರಣಿ ಗೆದ್ದುಕೊಂಡಿತ್ತು. 2021 ರಲ್ಲಿ ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ಮೊದಲ ಟೆಸ್ಟ್ ಗೆದ್ದಿತ್ತು. ಆದರೆ ಸರಣಿಯನ್ನು 1-3ರಿಂದ ಕಳೆದುಕೊಂಡಿತ್ತು.

ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ರವೀಂದ್ರ ಜಡೇಜಾ ಅಕ್ಷರ್ ಪಟೇಲ್., ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ಮತ್ತು ಅವೇಶ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications