Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮತ್ತೆ ಗಾಯದ ಸಮಸ್ಯೆಗೆ ತುತ್ತಾದ ಜೋಫ್ರಾ ಆರ್ಚರ್: ಆಶಸ್ ಸೇರಿ ಸಂಪೂರ್ಣ ಇಂಗ್ಲೀಷ್ ಋತುವಿಗೆ ಅಲಭ್ಯ!

ಇಂಗ್ಲೆಂಡ್ ಆಟಗಾರ ಜೋಫ್ರಾ ಆರ್ಚರ್ ಮತ್ತೊಂದು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಮುಂಬೈ ಇಂಡಿಯನ್ಸ ಹಾಗೂ ಇಂಗ್ಲೆಂಡ್ ತಂಡದ ಪ್ರಮುಖ ವೇಗದ ಬೌಲರ್ ಎನಿಸಿಕೊಂಡಿರುವ ಅರ್ಚರ್ ಇದೀಗ ಸಂಪೂರ್ಣ ಇಂಗ್ಲೀಷ್ ಬೇಸಿಗೆ ಋತುವಿನಿಂದ ಹೊರಬಿದ್ದಿದ್ದಾರೆ. ಈ ಬಗ್ಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಅಧಿಕೃತ ಹೇಳಿಕೆ ನೀಡಿದೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದ ಜೋಫ್ರಾ ಆರ್ಚರ್ ಕಳೆದ ವಾರ ಗಾಯದ ಕಾರಣದಿಂದಾಗಿ ಮುಂಬೈ ಶಿಬಿರವನ್ನು ತೊರೆದಿದ್ದರು. ಮೊಣಕೈ ಗಾಯದ ಕಾರಣದಿಂದಾಗ ಆರ್ಚರ್ ಅವರನ್ನು ಇಸಿಬಿ ತವರಿಗೆ ಕರೆಸಿಕೊಂಡಿತ್ತು. 2023ರ ಆವೃತ್ತಿಯ ಆಶಸ್ ಸರಣಿಯಲ್ಲಿ ಭಾಗಿಯಾಗುವ ಕಾರಣದಿಂದಾಗಿ ಆರ್ಚರ್ ಫಿಟ್‌ನೆಸ್ ಬಗ್ಗೆ ಇಸಿಬಿ ಹೆಚ್ಚಿನ ಗಮನಹರಿಸಿತ್ತು. ಈಗ ಜೋಫ್ರಾ ಆರ್ಚರ್ ಮೊಣಕೈಗೆ ಒತ್ತಡದ ಗಾಯ ಉಂಟಾಗಿರುವುದು ಸ್ಪಷ್ಟವಾಗಿದೆ. ಹೀಗಾಗಿ ಸಸೆಕ್ಸ್ ಹಾಗೂ ಇಂಗ್ಲೆಂಡ್ ವೈದ್ಯಕೀಯ ತಂಡದೊಂದಿಗೆ ರಿಹ್ಯಾಬ್ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

England pacer Jofra Archer out of Ashes series and complete English summer

"ಇದು ಜೋಫ್ರಾ ಆರ್ಚರ್ ಅವರಿಗೆ ತೀವ್ರ ಹತಾಶೆ ಹಾಗೂ ಬೇಸರ ಮೂಡಿಸುವಂತಾ ಅವಧಿ. ಅವರು ಮೊಣಕೈ ಗಾಯದಿಂದ ಚೇತರಿಕೆ ಕಂಡಿದ್ದರು. ಇದೀಗ ಮತ್ತೆ ಅವರು ಅದೇ ಸಮಸ್ಯೆಗೆ ಒಳಗಾಗಿದ್ದಾರೆ. ಅವ ಚೇತರಿಕೆಗಾಗಿ ನಾವು ಶುಭಹಾರೈಸುತ್ತೇವೆ. ಜೋಫ್ರಾ ಆರ್ಚರ್ ಅವರನ್ನು ಮತ್ತಷ್ಟು ಬಲಿಷ್ಠವಾಗಿ ವಾಪಾಸಾಗಿ ತಂಡವನ್ನು ಗೆಲ್ಲಿಸಿಕೊಡುವುದನ್ನು ನೋಡಲು ಬಯಸುತ್ತಿದ್ದೇವೆ" ಎಂದಿದ್ದಾರೆ ಜೋಫ್ರಾ ಆರ್ಚರ್.

ಜೋಫ್ರಾ ಆರ್ಚರ್ ಮುಂಬರುವ ಆಶಸ್ ಸರಣಿಯಿಂದ ಹೊರಗುಳಿಯುವುದು ಖಚಿತವಾಗಿದೆ. ಇನ್ನು ಅಕ್ಟೋಬರ್ - ನವೆಂಬರ್ ತಿಂಗಳಿನಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದ್ದ ಈ ಟೂರ್ನಿಯಲ್ಲಿ ಆರ್ಚರ್ ಭಾಗವಹಿಸಲು ಸಿದ್ಧವಾಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಕಳೆದ ಬಾರಿಯೂ ಅವರು ಇಸೇ ಗಾಯದ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು.

ಇನ್ನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಜೋಫ್ರಾ ಆರ್ಚರ್ ಈ ಬಾರಿ ಕೆಲಕವೇ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ ಆರ್ಚರ್ ಪರಿಣಾಮಕಾರಿ ಎನಿಸಿಕೊಂಡಿರಲಿಲ್ಲ. ಅಲ್ಲದೆ ಹೆಚ್ಚಿನ ಅವಧಿಯನ್ನು ಬೆಂಚ್‌ನಲ್ಲಿ ಕಳೆದಿದ್ದ ಆರ್ಚರ್ ನಂತರ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆದಿದ್ದರು. ಆರ್ಚರ್ ಬದಲಿಗ ಮುಂಬೈ ಇಂಡಿಯನ್ಸ್ ತಂಡ ಕ್ರಿಸ್ ಜೋರ್ಡನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.

Story first published: Tuesday, May 16, 2023, 16:12 [IST]
Other articles published on May 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+