WTC ಅಂಕ ಹಂಚಿಕೆ ಬಗ್ಗೆ ಪ್ರಶ್ನೆ ಮಾಡಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್

ಐಸಿಸಿ ಚೊಚ್ಚಲ ಬಾರಿಗೆ ಆಯೋಜನೆ ಮಾಡಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಈಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಈ ಚೊಚ್ಚಲ ಟೂರ್ನಮೆಂಟ್‌ನ ಫೈನಲ್ ಹಂತಕ್ಕೇರಿದೆ. ಆದರೆ ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ವೇಗಿ ಐಸಿಸಿ ಅಂಕ ಕ್ರಮದ ಮಾನದಂಡದ ಬಗ್ಗೆ ಪ್ರಶ್ನೆಯನ್ನು ಮಾಡಿದ್ದಾರೆ.

"ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಜಕ್ಕೂ ಅತ್ಯುತ್ತಮ ಪರಿಕಲ್ಪನೆಯಾಗಿದೆ. ಆದರೆ ಇದು ಇನ್ನೂ ಸರಿಯಾಗಿ ನಡೆದಿದೆ ಎಂದು ನನಗೆ ಅನಿಸುತ್ತಿಲ್ಲ. ಇದು ಪ್ರಥಮ ಪ್ರಯತ್ನವಾಗಿದೆ" ಎಂದು ಸ್ಟುವರ್ಟ್ ಬ್ರಾಡ್ ಪ್ರಸ್ ಅಸೋಸಿಯೇಟ್ ಜೊತೆಗೆ ಮಾತನಾಡುತ್ತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಈ ಸಂದರ್ಭದಲ್ಲಿ ಬ್ರಾಡ್ ಅಂಕ ಹಂಚಿಕೆಯ ಬಗ್ಗೆ ಬ್ರಾಡ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. "ಭಾರತ ಬಾಂಗ್ಲಾದೇಶದ ವಿರುದ್ಧ ಆಡಿದ ಎರಡು ಪಂದ್ಯಗಳ ಸರಣಿಗೆ ಆ್ಯಶಸ್ ಸರಣಿಯ ಐದು ಪಂದ್ಯಗಳು ಹೇಗೆ ಸಮನಾಗಬಲ್ಲದು ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ" ಎಂದು ಬ್ರಾಡ್ ಹೇಳಿದ್ದಾರೆ.

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ತಂಡವಾಗಿದೆ. ಇಂಗ್ಲೆಂಡ್ ಒಟ್ಟು 21 ಪಂದ್ಯಗಳಲ್ಲಿ ಭಾಗಿಯಾಗಿದೆ. ಎರಡನೇ ಸ್ಥಾನದಲ್ಲಿ ಟೀಮ್ ಇಂಡಿಯಾ ಇದ್ದು 17 ಟೆಸ್ಟ್ ಪಂದ್ಯಗಳನ್ನು ಆಡಿದೆ. ಅತ್ಯಂತ ಕಡಿಮೆ ಆಡಿರುವ ತಂಡವಾಗಿ ಬಾಂಗ್ಲಾದೇಶ ಗುರುತಿಸಿಕೊಂಡಿದ್ದು ಕೇವಲ 7 ಟೆಸ್ಟ್ ಪಂದ್ಯಗಳಲ್ಲಷ್ಟೇ ಭಾಗಿಯಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, May 14, 2021, 14:35 [IST]
Other articles published on May 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X