ಆಸ್ಟ್ರೇಲಿಯಾ ತಂಡದಿಂದ 'ಗಾರ್ಡ್ ಆಫ್ ಹಾನರ್' ಸ್ವೀಕರಿಸಿದ ಸ್ಟುವರ್ಟ್ ಬ್ರಾಡ್
ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ನಿವೃತ್ತಿ ಘೊಷಣೆ ಮಾಡಿದ್ದು ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದಾರೆ. ಭಾನುವಾರ ಓವಲ್‌ನಲ್ಲಿ ಈ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಇಂಗ್ಲೆಂಡ್ ದಿಗ್ಗಜ ಆಟಗಾರನಿಗೆ 'ಗಾರ್ಡ್ ಆಫ್ ಹಾನರ್' ಗೌರವ ನೀಡಿದ್ದಾರೆ.
ಆತಿಥೇಯರು ಇಂಗ್ಲೆಂಡ್ ತಂಡ ಈ ಬಾರಿಯ ಆಶಸ್ ಸರಣಿಯನ್ನು ಸಮಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ಪಂದ್ಯ ಇಂಗ್ಲೆಂಡ್ ಅನುಭವಿ ಆಟಗಾರ ಸ್ಟುವರ್ಟ್ ಬ್ರಾಡ್ ಅವರ ಕೊನೆಯ ಪಂದ್ಯವೂ ಆಗಿದೆ. ಈ ಸರಣಿಯನ್ನು ಸಮಬಲಗೊಳಿಸಲು ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯ ಪ್ರಮುಖವಾಗಿದ್ದು ಈ ಪಂದ್ಯದಲ್ಲಿ ಗೆಲುವಿನ ಮೂಲಕ ವೃತ್ತಿ ಜೀವನವನ್ನು ಕೊನೆಯಗೊಳಿಸಿವುದು ಸ್ಟುವರ್ಟ್ ಬ್ರಾಡ್ ಅವರ ಕನಸು ಕೂಡ ಆಗಿದೆ.

ಇನ್ನು ಕೊನೆಯ ದಿನದಾಟದಲ್ಲಿ ಬ್ರಾಡ್ ತಮ್ಮ ಜೊತೆಗಾರ ಜೇಮ್ಸ್ ಆಂಡರ್ಸನ್ ಜೊತೆಗೆ ಆರಂಬದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ಗಾರ್ಡ್ ಆಫ್ ಹಾನರ್ ಮೂಲಕ ಸ್ವಾಗತಿಸಿದ್ದಾರೆ. ಇನ್ನು ಮತ್ತೊಂದೆಡೆ ಈ ಪಂದ್ಯವನ್ನು ವೀಕ್ಷಿಸಲು ಬಂದಿರುವ ಕ್ರಿಕೆಟ್ ಅಭಿಮಾನಿಗಳು ಕೂಡ ಎದ್ದುನಿಂತು ಬ್ರಾಡ್‌ಗೆ ಗೌರವ ಸಲ್ಲಿದ್ದಾರೆ. ಇಡೀ ಸ್ಟೇಡಿಯಂನ ಪ್ರೇಕ್ಷಕರು ಎದ್ದುನಿಂತುಗೌರವ ನೀಡಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ 12 ರನ್‌ಗಳ ಹಿನ್ನಡೆ ಅನುಭವಿಸಿದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಜಾಕ್ ಕ್ರಾವ್ಲೆ, ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಭರ್ಜರಿ ಅರ್ಧ ಶತಕಗಳ ಕೊಡುಗೆ ನೀಡುವ ಮೂಲಕ ಮಿಂಚಿದ್ದಾರೆ. ಜೋ ರೂಟ್ ಈ ಪಂದ್ಯದಲ್ಲಿ 91 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡಿದ್ದು ಕ್ರಾವ್ಲೆ 73 ರನ್‌ಗಳನ್ನು ಗಳಿಸಿದ್ದರೆ ಜಾನಿ ಬೈರ್‌ಸ್ಟೊವ್ 78 ರನ್‌ಗಳನ್ನು ಗಳಿಸಿದರು.
ಇದೀಗ ಆಸ್ಟ್ರೇಲಿಯಾ ತಂಡ ಈ ಮೊತ್ತವನ್ನು ಬೆನ್ನಟ್ಟುವ ಸವಾಲು ಪಡೆದುಕೊಂಡಿದೆ. ಉತ್ತಮ ಆರಂಭವನ್ನು ಪಡೆದುಕೊಂಡಿರುವ ಆಸ್ಟ್ರೇಲಿಯಾ ಇಂಗ್ಲೆಂಡ್ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸುವ ಸೂಚನೆ ನೀಡಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳು ಸಾಧ್ಯವಾದಷ್ಟು ಬೇಗ ಆಸ್ಟ್ರೇಲಿಯಾ ತಂಡವನ್ನು ಆಲ್‌ಔಟ್ ಮಾಡುವತ್ತ ಚಿತ್ತ ನೆಟ್ಟಿದೆ.
ಈ ಸರಣಿಯ ನಾಲ್ಕು ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದ್ದು ಇದು ಸರಣಿಯ ಕೊನೆಯ ಪಂದ್ಯವಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿ ಮುನ್ನಡೆಯಲ್ಲಿದ್ದರೆ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತು. ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಸನಿಹದಲ್ಲಿದ್ದರೂ ಗೆಲುವು ಸಾಧ್ಯವಾಗಿರಲಿಲ್ಲ. ಇದೀಗ ಕೊನೆಯ ಪಂದ್ಯ ಇಂಗ್ಲೆಂಡ್ ಪಾಲಿಗೆ ಸರಣಿಯನ್ನು ಸಮಬಲಗೊಳಿಸಲು ಮಹತ್ವದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications