For Quick Alerts
ALLOW NOTIFICATIONS  
For Daily Alerts
 

IPL 2024: ಆರ್‌ಸಿಬಿಗೆ ಎದುರಾಯ್ತು ಸಂಕಷ್ಟ; ಐಪಿಎಲ್‌ಯಿಂದ ಹಿಂದೆ ಸರಿಯಲಿರುವ ಇಂಗ್ಲೆಂಡ್‌ ಪ್ಲೇಯರ್ಸ್‌

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ 2024ರ ಐಪಿಎಲ್‌ ಟೂರ್ನಿಗೆ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ಐಪಿಎಲ್‌ನಲ್ಲಿ ದಿನದಿಂದ ದಿನಕ್ಕೆ ದಾಖಲೆಗಳು ಸೃಷ್ಟಿಯಾಗುತ್ತಿವೆ. ಆದರೆ ಕಳೆದ ಎರಡು ದಿನಗಳಿಂದ ಕ್ರಿಕೆಟ್‌ ಅಭಿಮಾನಿಗಳು ಐಪಿಎಲ್‌ ಬಿಟ್ಟು 2024ರ ಟಿ20 ವಿಶ್ವಕಪ್ ಟೂರ್ನಿ ಕಡೆ ಗಮನ ಹರಿಸಿರುವುದು ಕುತೂಹಲ ಉಂಟು ಮಾಡಿದೆ.

ಜೂನ್‌ 1 ರಿಂದ 29 ರವರೆಗೆ ನಡೆಯಲಿರುವ 2024ರ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ತಮ್ಮ 15 ಆಟಗಾರರ ಹೆಸರನ್ನು ಪ್ರಕಟಿಸಿವೆ. ಈ ತಂಡಗಳಿಂದ ಹಲವು ಸ್ಟಾರ್ ಆಟಗಾರರನ್ನು ಕೈ ಬಿಟ್ಟಿರುವುದು ಅಭಿಮಾನಿಗಳಲ್ಲಿ ಅಚ್ಚರಿ ತಂದಿದೆ.

England players to walk out of IPL 2024

ಆದರೆ ಇದೀಗ ಟಿ20 ವಿಶ್ವಕಪ್‌ಗಾಗಿ ಇಂಗ್ಲೆಂಡ್‌ ಆಟಗಾರರು 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ಯಿಂದ ದೂರ ಸರಿಯುವ ಬಗ್ಗೆ ಸೂಚನೆ ನೀಡಿದ್ದಾರೆ. ಇದು ಐಪಿಎಲ್‌ ಫ್ರಾಂಚೈಸಿ ತಂಡಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಜೊತೆಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡಕ್ಕೂ ಸಂಕಷ್ಟ ಎದುರಾಗಿದೆ.

ಈ ಋತುವಿನಲ್ಲಿ ಅಬ್ಬರಿಸುತ್ತಿರುವ ಇಂಗ್ಲೆಂಡ್‌ ಆಟಗಾರು ಐಪಿಎಲ್‌ ಪ್ಲೇ ಆಪ್‌ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಅಂದರೆ ಯಾವ 4 ತಂಡಗಳು ಐಪಿಎಲ್‌ ಪ್ಲೇ ಆಪ್‌ ಪ್ರವೇಶಿಸುತ್ತವೆಯೋ ಆ ತಂಡಗಳಲ್ಲಿ ಆಡುತ್ತಿರುವ ಆಂಗ್ಲ ಕ್ರಿಕೆಟಿಗರು ಟೂರ್ನಿಯಿಂದ ಹೊರ ನಡೆಯಲಿದ್ದಾರೆ.

ಏಕೆಂದರೆ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ತವರಿನಲ್ಲಿ ಮೇ 22 ರಿಂದ ಪ್ರಾರಂಭವಾಗುತ್ತಿರುವ 4 ಟಿ20 ಪಂದ್ಯಗಳ ಸರಣಿಯನ್ನು ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ ಆಡಲಿದೆ. ಇದಕ್ಕಾಗಿ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರು ಪಾಕಿಸ್ತಾನ ವಿರುದ್ಧದ ಸರಣಿಗೆ ಲಭ್ಯವಿರಬೇಕು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿದೆ. ಹೀಗಾಗಿ ಆಟಗಾರರು ಶ್ರೀಮಂತ ಲೀಗ್‌ ತೊರೆಯುವ ನಿರ್ಧಾರದಲ್ಲಿದ್ದಾರೆ. ಇದರ ಬಗ್ಗೆ ಇಸಿಬಿ ಸಹ ಈಗಾಗಲೇ ಅಧಿಕೃತವಾಗಿ ಮಾಹಿತಿ ನೀಡಿದೆ.

ಐಪಿಎಲ್‌ನಿಂದ ಔಟ್‌ ಆಗುವ ಇಂಗ್ಲೆಂಡ್‌ ಆಟಗಾರರ ಪಟ್ಟಿ :

ಐಪಿಎಲ್‌ ಟೂರ್ನಿಯಿಂದೆ ಹಿಂದೆ ಸರಿಯಲಿರುವ ಇಂಗ್ಲೆಂಡ್‌ ಆಟಗಾರರು ಹೆಚ್ಚಾಗಿ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿದ್ದು, ಜಾನಿ ಬೇರ್ಸ್ಟೋವ್, ಸ್ಯಾಮ್ ಕರನ್​ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಹೊರ ನಡೆಯಲಿದ್ದಾರೆ. ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ವಿಲ್‌ ಜ್ಯಾಕ್ಸ್‌ ಮತ್ತು ರೀಸ್‌ ಟೋಪ್ಲೆ ಆಡುತ್ತಿದ್ದು, ಇವರ ಕೂಡ ಔಟ್‌ ಆಗಲಿದ್ದಾರೆ.

ಇನ್ನುಳಿದಂತೆ ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್), ಮೊಯಿನ್ ಅಲಿ (ಚೆನ್ನೈ ಸೂಪರ್ ಕಿಂಗ್ಸ್) ಮತ್ತು ಫಿಲ್ ಸಾಲ್ಟ್ (ಕೋಲ್ಕತ್ತಾ ನೈಟ್ ರೈಡರ್ಸ್) ಟಿ20 ವಿಶ್ವಕಪ್‌ ಇಂಗ್ಲೆಂಡ್‌ ತಂಡದ ಭಾಗವಾಗಿದ್ದಾರೆ.

Story first published: Wednesday, May 1, 2024, 13:01 [IST]
Other articles published on May 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+