ಸಹ ಆಟಗಾರರ ಹೊಟ್ಟೆಕಿಚ್ಚಿಗೆ ಕಾರಣವಾಯ್ತು ಪೀಟರ್‌ಸನ್ ಯಶಸ್ಸು: ಮೈಕಲ್ ವಾನ್

ಇಂಗ್ಲೆಂಡ್ ಕ್ರಿಕೆಟ್‌ನ ಮಾಜಿ ಆಟಗಾರ ಕೆವಿನ್ ಪೀಟರ್‌ಸನ್ ಸದ್ಯ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಗ್ಲೆಂಡ್ ಕಂಡ ಅತ್ಯಂತ ಪ್ರತಿಭಾನ್ವಿತ ಆಟಗಾರನಾಗಿದ್ದ ಪೀಟರ್‌ಸನ್ ಅದೇಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಪ್ರತಿಷ್ಟೆಯ ಆಶಸ್ ಸರಣಿಯಲ್ಲೂ ಪೀಟರ್‌ಸನ್ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
ಇಂತಾ ಆಟಗಾರನ ಮೇಲೆ ಇಂಗ್ಲೆಂಡ್‌ನ ಇತರ ಆಟಗಾರರು ಹೊಟ್ಟೆಕಿಚ್ಚು ಪಟ್ಟಿದ್ದರು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ. ಈಗ ಆ ಆಟಗಾರರು ನನ್ನ ಮಾತನ್ನು ನಿರಾಕರಿಸಬಹುದು ಆದರೆ ಆ ಸಂದರ್ಭದಲ್ಲಿ ಪೀಟರ್‌ಸನ್ ಮೇಲೆ ಇಂಗ್ಲೆಂಡ್‌ನ ಪ್ರಮುಖ ಆಟಗಾರರು ಖಂಡಿತಾ ಹೊಟ್ಟೆಕಿಜ್ಜು ಪಟ್ಟಿದ್ದರು ಎಂದು ವಾನ್ ಹೇಳಿದ್ದಾರೆ.
ಪೀಟರ್‌ಸನ್ ಬಗ್ಗೆ ಇಂಗ್ಲೆಂಡ್ ಆಟಗಾರರು ಹೊಟ್ಟೆಕಿಚ್ಚುಪಡಲು ಕಾರಣವನ್ನೂ ವಾನ್ ಹೇಳಿದ್ದಾರೆ. ಐಪಿಎಲ್‌ನಲ್ಲಿ ಬೃಹತ್ ಮೊತ್ತಕ್ಕೆ ಬಿಕರಿಯಾಗಿದ್ದ ಕಾರಣಕ್ಕೆ ಇಂಗ್ಲೆಂಡ್‌ನ ಘಟಾನುಘಟಿ ಆಟಗಾರರು ಹೊಟ್ಟೆ ಕಿಚ್ಚು ಪಡುವ ಸಂದರ್ಭವುಂಟಾಗಿತ್ತು ಎಂದಿದ್ದಾರೆ. ಆರ್‌ಸಿಬಿ ಪೀಟರ್‌ಸನ್ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದ ಸಂದರ್ಭವನ್ನು ವಾನ್ ಉಲ್ಲೇಖಿಸಿದ್ದಾರೆ.
2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೃಹತ್ ಬಿಡ್ ಅನ್ನು ಕೆವಿನ್ ಪೇಟರ್‌ಸನ್ ಮೇಲೆ ಮಾಡಿತ್ತು. ಪೀಟರ್‌ಸನ್ ಅವರನ್ನು 1.55 ಮಿಲಿಯನ್ ಕೊಟ್ಟು ಅಂದರೆ ಸುಮಾರು 7.5 ಕೋಟಿ ರೂಪಾಯಿ ಕೊಟ್ಟು ಖರೀದಿಸಿತ್ತು. ಇದು ಆಗಿನ ಅತ್ಯಂತ ದೊಡ್ಡ ಬಿಡ್ ಆಗಿತ್ತು. ಆರಂಭಿಕ ಆವೃತ್ತಿಯಲ್ಲಿ ಧೋನಿ ಅತಿ ಹೆಚ್ಚು ಮೊತ್ತವನ್ನು ಪಡೆದ ದಾಖಲೆಯನ್ನು ಪೀಟರ್‌ಸನ್ ಅಳಿಸಿ ಹಾಕಿದ್ದರು.
ಇದು ತಂಡದಲ್ಲಿ ಗುಂಪುಗಾರಿಕೆಗೂ ಕಾರಣವಾಯಿತು, ಗ್ರೇಮ್ ಸ್ವಾನ್, ಟಿಮ್ ಬ್ರೆಸ್ನಾನ್, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಮತ್ತು ಮ್ಯಾಟ್ ಪ್ರಿಯರ್ ರಂತಾ ಆಟಗಾರರು ಪೀಟರ್‌ಸನ್ ಅವರನ್ನು ದೂರವಿಟ್ಟರು ಎಂದು ವಾನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications