ಕ್ರಿಕೆಟ್ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ವೇಗಿ ಹ್ಯಾರಿ ಗರ್ನಿ

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಧ್ಯಮ ವೇಗಿ ಹ್ಯಾರಿ ಗರ್ನಿ ಮೇ 14ರ ಶುಕ್ರವಾರ ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. 34ರ ಹರೆಯದ ಹ್ಯಾರಿ ಎಡಗೈ ಮಧ್ಯಮ ವೇಗದ ಬೌಲಿಂಗ್ ಮಾಡುತ್ತಿದ್ದರು. 2019ರ ಬಳಿಕ ಗರ್ನಿ ಪ್ರಮುಖ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಆಡಿರಲಿಲ್ಲ.
ಇಂಗ್ಲೆಂಡ್ ತಂಡದ ಪ್ರತಿಭಾವಂತ ಟಿ20 ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಹ್ಯಾರಿ ಗರ್ನಿ, 10 ಟೆಸ್ಟ್ ಪಂದ್ಯಗಳಲ್ಲಿ 11 ವಿಕೆಟ್, 2 ಟಿ20ಐ ಪಂದ್ಯಗಳಲ್ಲಿ 3 ವಿಕೆಟ್, 8 ಐಪಿಎಲ್ ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದರು. ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಹ್ಯಾರಿಗೆ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ.
2014ರಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಏಕದಿನ ಪಂದ್ಯದೊಂದಿಗೆ ಹ್ಯಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2019 ಮೇ 5ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾರಿ ಕಡೇಯ ಐಪಿಎಲ್ ಪಂದ್ಯ ಆಡಿದ್ದರು.
ಇಂಗ್ಲೆಂಡ್ ತಂಡವಲ್ಲದೆ ಲೀಸೆಸ್ಟರ್‌ಶೈರ್, ನಾಟಿಂಗ್ಹ್ಯಾಮ್‌ಶೈರ್, ನಾದರ್ನ್ ವಾರಿಯರ್ಸ್, ಕೋಲ್ಕತಾ ನೈಟ್ ರೈಡರ್ಸ್, ಮೆಲ್ಬೋರ್ನ್ ರೆನೆಗೇಡ್ಸ್, ಕ್ವೆಟ್ಟಾ ಗ್ಲಾಡಿಯೇಟರ್ಸ್, ಡಬ್ಲಿನ್ ಚೀಫ್ಸ್, ಬಾರ್ಬಡೋಸ್ ಟ್ರೈಡೆಂಟ್ಸ್ ಮೊದಲಾದ ತಂಡಗಳಿಗೆ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications