Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಇಂಗ್ಲೆಂಡ್‌ನ ಪಾರ್ಕಿನ್ಸನ್ ಹೊರಕ್ಕೆ

England’s Matt Parkinson will miss ODI series against Ireland

ಲಂಡನ್, ಜುಲೈ 22: ಐರ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಇಂಗ್ಲೆಂಡ್ ಲೆಗ್ ಸ್ಪಿನ್ನರ್ ಮ್ಯಾಟ್ ಪಾರ್ಕಿನ್ಸನ್ ಹೊರ ಬಿದ್ದಿದ್ದಾರೆ. ಪಾದದ ಗಾಯಕ್ಕೆ (ಆ್ಯಂಕಲ್ ಇಂಜುರಿ) ಒಳಗಾಗಿರುವ ಪಾರ್ಕಿನ್ಸನ್ ಮುಂಬರಲಿರುವ ಸರಣಿಯಲ್ಲಿ ಆಡುತ್ತಿಲ್ಲ.

ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ 23ರ ಹರೆಯದ ಲ್ಯಾನ್ಸೆಶೈರ್ ಬೌಲರ್ ಮ್ಯಾಟ್ ಪಾರ್ಕಿನ್ಸನ್, ಸೋಮವಾರ (ಜುಲೈ 20) ಫೀಲ್ಡಿಂಗ್ ಅಭ್ಯಾಸ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಬರಲಿರುವ ಐರ್ಲೆಂಡ್‌ ತಂಡ ವೀಕ್ಷಕರಿಲ್ಲದ ಸೌತಾಂಪ್ಟನ್‌ನ ಏಜಸ್ ಬೌಲ್‌ ಸ್ಟೇಡಿಯಂನಲ್ಲಿ ಮೊದಲ ಪಂದ್ಯವನ್ನಾಡಲಿದೆ. ಇತ್ತಂಡಗಳ ಏಕದಿನ ಸರಣಿ ಜುಲೈ 30ರಿಂದ ಆರಂಭಗೊಳ್ಳಲಿದೆ.

'ಕಾಲು ನೋವಿನ ಕಾರಣ ಐರ್ಲೆಂಡ್‌ ಜೊತೆಗಿನ ರಾಯಲ್ ಲಂಡನ್ ಏಕದಿನ ಸರಣಿಯಿಂದ ಮ್ಯಾಟ್ ಪಾರ್ಕಿನ್ಸನ್ ಹೊರ ಬಿದ್ದಿದ್ದಾರೆ,' ಎಂದು ಇಂಗ್ಲೆಂಡ್ ಆ್ಯಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಟ್ವಿಟರ್ ಮೂಲಕ ತಿಳಿಸಿದೆ. ಪಾರ್ಕಿನ್ಸನ್‌ಗೆ ಬದಲಿ ಆಟಗಾರನನ್ನು ಇಂಗ್ಲೆಂಡ್ ಇನ್ನೂ ಹೆಸರಿಸಿಲ್ಲ.

Story first published: Thursday, July 23, 2020, 9:44 [IST]
Other articles published on Jul 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+