ಭಾರತ ವಿರುದ್ಧದ ಟೆಸ್ಟ್‌ಗೆ ಆಂಗ್ಲ ವೇಗಿ ಎಮಿಲಿ ಅರ್ಲಾಟ್‌ಗೆ ಚೊಚ್ಚಲ ಕರೆ

ಲಂಡನ್: ಜೂನ್ 16ರಿಂದ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್ ಮಹಿಳೆಯರ ಏಕಮಾತ್ರ ಟೆಸ್ಟ್‌ ಪಂದ್ಯಕ್ಕಾಗಿ ಇಂಗ್ಲೆಂಡ್ ವೇಗಿ ಎಮಿಲಿ ಅರ್ಲಾಟ್‌ಗೆ ಚೊಚ್ಚಲ ಕರೆ ನೀಡಲಾಗಿದೆ. ಇಂಗ್ಲೆಂಡ್‌ನಲ್ಲಿರುವ ಭಾರತೀಯ ವನಿತೆಯರ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ತಂಡದಲ್ಲಿ ಅರ್ಲಾಟ್‌ ಕಾಣಿಸಿಕೊಂಡಿದ್ದಾರೆ.

ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿ ಹಿಂದಿಕ್ಕಿದ ಸುನಿಲ್ ಛೆಟ್ರಿ!ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿ ಹಿಂದಿಕ್ಕಿದ ಸುನಿಲ್ ಛೆಟ್ರಿ!

ಜೂನ್‌ 16ರಿಂದ 19ರ ವರೆಗೆ ಇಂಗ್ಲೆಂಡ್‌ನ ಬ್ರಿಸ್ಟಲ್ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ವನಿತಾ ಟೆಸ್ಟ್‌ ಪಂದ್ಯ ನಡೆಯಲಿದೆ. ಇದಕ್ಕಾಗಿ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ 17 ಜನರ ತಂಡ ಪ್ರಕಟಿಸಿದೆ. ರಾಚೆಲ್ ಹೆಹೋ ಫ್ಲಿಂಟ್ ಟ್ರೋಫಿ (ಆರ್‌ಎಚ್‌ಎಫ್‌ಟಿ)ಗಾಗಿ ಪ್ರಕಟಿಸಿದ ತಂಡದಲ್ಲಿ ಅರ್ಲಾಟ್‌ ಇದ್ದಾರೆ.

ಇತ್ತೀಚೆಗಷ್ಟೇ ನಡೆದ ಆರ್‌ಎಚ್‌ಎಫ್‌ಟಿ ಪಂದ್ಯವೊಂದರಲ್ಲಿ ಅರ್ಲಾಟ್‌ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಅಲ್ಲದೆ, ನ್ಯಾಟ್ ಸ್ಕಿವರ್ ಅವರನ್ನು ಆಂಗ್ಲ ತಂಡದ ನೂತನ ಉಪನಾಯಕಿಯನ್ನಾಗಿ ಹೆಸರಿಸಲಾಗಿದೆ. ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದ ಬಳಿಕ ಇತ್ತಂಡಗಳ ಮಧ್ಯೆ 3 ಟಿ20ಐ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳು ನಡೆಯಲಿವೆ.

ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!

ಭಾರತ ವಿರುದ್ಧದ ಟೆಸ್ಟ್‌ಗೆ ಇಂಗ್ಲೆಂಡ್ ವನಿತಾ ತಂಡ
ಹೀದರ್ ನೈಟ್ (ಸಿ), ಎಮಿಲಿ ಅರ್ಲಾಟ್, ಟಮ್ಮಿ ಬ್ಯೂಮಾಂಟ್, ಕ್ಯಾಥರೀನ್ ಬ್ರಂಟ್, ಕೇಟ್ ಕ್ರಾಸ್, ಫ್ರೇಯಾ ಡೇವಿಸ್, ಸೋಫಿಯಾ ಡಂಕ್ಲೆ, ಸೋಫಿ ಎಕ್ಲೆಸ್ಟೋನ್, ಜಾರ್ಜಿಯಾ ಎಲ್ವಿಸ್, ಟ್ಯಾಶ್ ಫಾರಂಟ್, ಸಾರಾ ಗ್ಲೆನ್, ಆಮಿ ಜೋನ್ಸ್, ನ್ಯಾಟ್ ಸ್ಕಿವರ್ (ವಿಸಿ), ಅನ್ಯಾ ಶ್ರಬ್ಸೋಲ್, ಮ್ಯಾಡಿ ವಿಲಿಯರ್ಸ್ , ಫ್ರಾನ್ ವಿಲ್ಸನ್, ಲಾರೆನ್ ವಿನ್‌ಫೀಲ್ಡ್-ಹಿಲ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, June 9, 2021, 19:57 [IST]
Other articles published on Jun 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X