ಇಂಗ್ಲೆಂಡ್ ಕ್ರಿಕೆಟರ್ ಸ್ಯಾಮ್ ಕರನ್‌ಗೆ ಕೊರೊನಾವೈರಸ್ ನೆಗೆಟಿವ್

ಲಂಡನ್, ಜುಲೈ 4: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಸ್ಯಾಮ್ ಅವರ ಕೊರೊನಾವೈರಸ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿದೆ. ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಶುಕ್ರವಾರ ಈ ವಿಚಾರ ತಿಳಿಸಿದೆ. ಕರನ್ ಸದ್ಯ ಸೌತಾಂಪ್ಟನ್‌ನ ಏಜಸ್ ಬೌಲ್‌ನಲ್ಲಿರುವ ಹೋಟೆಲ್‌ನಲ್ಲಿ ಸೆಲ್ಫ್ ಐಸೊಲೇಶನ್‌ನಲ್ಲಿದ್ದಾರೆ.
ಜುಲೈ 8ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಿಯ ಭಾಗವಾಗಿ ಟೀಮ್ ಸ್ಟೋಕ್ಸ್ vs ಟೀಮ್ ಬಟ್ಲರ್ ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ಸ್ಯಾಮ್ ಭಾಗವಹಿಸಿದ್ದರು. ಈ ವೇಳೆ ಕರನ್‌ಗೆ ಅನಾರೋಗ್ಯ ಕಾಡಿದ್ದರಿಂದ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
'ದ ಸರ್ರೆ ತಂಡದ ಆಲ್ ರೌಂಡರ್ ಸ್ಯಾಮ್ ಕರನ್ ಅವರು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾರೆ. ಆದರೆ ಇವತ್ತು ಕೊನೆಗೊಂಡ 3 ದಿನಗಳ ಇಂಗ್ಲೆಂಡ್ ತಂಡದ ಆಂತರಿಕ ಅಭ್ಯಾಸ ಪಂದ್ಯವನ್ನು ಕರನ್ ತಪ್ಪಿಸಿಕೊಂಡಿದ್ದಾರೆ. ಈಗ ಸ್ಯಾಮ್ ಏಜಸ್ ಬೌಲ್‌ನಲ್ಲಿ ತನ್ನ ಹೋಟೆಲ್‌ನಲ್ಲಿ ಐಸೊಲೇಶನ್‌ನಲ್ಲಿದ್ದಾರೆ,' ಎಂದು ಇಸಿಬಿ ತಿಳಿಸಿದೆ.
'ಕರನ್ ಮುಂದಿನ 24-48 ಗಂಟೆಗಳಲ್ಲಿ ಮತ್ತೆ ಅಭ್ಯಾಸಕ್ಕೆ ಮರಳಲಿದ್ದಾರೆ. ವೈದ್ಯಾಧಿಕಾರಿಗಳು ಅವರನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ,' ಎಂದು ಇಸಿಬಿ ಮಾಹಿತಿ ನೀಡಿದೆ. 22ರ ಹರೆಯದ ಕರನ್ ಮತ್ತು ಇನ್ನುಳಿದ ಎಲ್ಲಾ ಆಟಗಾರರು, ಸಿಬ್ಬಂದಿ ಭಾನುವಾರ (ಜುಲೈ 5) ಮತ್ತೊಂದು ಬಾರಿ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications