For Quick Alerts
ALLOW NOTIFICATIONS  
For Daily Alerts
 

Lord's Test: ಮೂರನೇ ಟೆಸ್ಟ್‌ ಗೆಲುವಿಗೆ ಭಾರತಕ್ಕೆ 193 ರನ್‌ ಗುರಿ ನೀಡಿದ ಇಂಗ್ಲೆಂಡ್‌

ಭರವಸೆಯ ಸ್ಪಿನ್ ಬೌಲರ್‌ ವಾಷಿಂಗ್ಟನ್‌ ಸುಂದರ್‌ (22ಕ್ಕೆ 4) ಸ್ಪಿನ್ ಮೋಡಿ ಹಾಗೂ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್‌ ಬುಮ್ರಾ ಅವರ ಮಾರಕ ದಾಳಿಗೆ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಕಂಗಾಲಾಯಿತು. ಭಾನುವಾರ ಎರಡನೇ ಇನಿಂಗ್ಸ್‌ ಆರಂಭಿಸಿದ ಆತಿಥೇಯ ತಂಡವನ್ನು ಟೀಮ್ ಇಂಡಿಯಾದ ಬೌಲರ್‌ಗಳು ಕಾಡಿದರು. ಮೂರನೇ ಟೆಸ್ಟ್‌ ಗೆಲುವಿಗೆ ಇಂಗ್ಲೆಂಡ್‌ 193 ರನ್‌ಗಳ ಗುರಿಯನ್ನು ಭಾರತ ತಂಡಕ್ಕೆ ನೀಡಿದೆ.

ಭಾನುವಾರ ಎರಡನೇ ಇನಿಂಗ್ಸ್‌ನ್ನು ಇಂಗ್ಲೆಂಡ್‌ ವಿಕೆಟ್‌ ನಷ್ಟವಿಲ್ಲದೆ 2 ವಿಕೆಟ್‌ಗಳಿಂದ ಆಟ ಮುಂದುವರಿಸಿತು. ಈ ವೇಳೆ ಟೀಮ್ ಇಂಡಿಯಾದ ವೇಗಿಗಳ ಕರಾರುವಕ್ ದಾಳಿಗೆ ಇಂಗ್ಲೆಂಡ್‌ ಬ್ಯಾಟರ್‌ಗಳು ಕಂಗಾಲಾದರು. ಭರ್ಜರಿ ಫಾರ್ಮ್‌ನಲ್ಲಿದ್ದ ಬೆನ್‌ ಡೆಕೆಟ್‌ 12 ರನ್‌ ಬಾರಿಸಿದ್ದಾಗ ಮೊಹಮ್ಮದ್ ಸಿರಾಜ್‌ ಎಸೆತದಲ್ಲಿ ಬುಮ್ರಾ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಓಲಿ ಪೋಪ್‌ ಜವಾಬ್ದಾರಿ ಮರೆತರು. ಇವರು ಮೊಹಮ್ಮದ್‌ ಸಿರಾಜ್‌ ಎಸೆತದಲ್ಲಿ ಔಟ್‌ ಆದರು. ಇನ್ನು ಆರಂಭಿಕ ಜಾಕ್‌ ಕ್ರಾಲಿ (22) ಇಲ್ಲದ ಹೊಡೆತಕ್ಕೆ ಮುಂದಾಗಿ ನಿತೀಶ್‌ ಕುಮಾರ್‌ ರೆಡ್ಡಿ ಎಸೆತದಲ್ಲಿ, ಯಶಸ್ವಿ ಜೈಸ್ವಾಲ್‌ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು.

England Set a Competitive Target for India After Gritty Fightback in Second Innings

ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್‌ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ನೈಜ್ಯ ಆಟವನ್ನು ಆಡಿ 19 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 23 ರನ್‌ ಬಾರಿಸಿದ್ದಾಗ, ಆಕಾಶ್‌ ದೀಪ್‌ ಎಸೆದ ಉತ್ತಮ ಎಸೆತಕ್ಕೆ ಬಲಿಯಾದರು. ಇಂಗ್ಲೆಂಡ್‌ ಭೋಜನ ವಿರಾಮದ ವೇಳೆಗೆ 4 ವಿಕೆಟ್‌ಗೆ 98 ರನ್‌ ಕಲೆ ಹಾಕಿತ್ತು.

ಸುಂದರ ದಾಳಿ

ಐದನೆ ವಿಕೆಟ್‌ಗೆ ಜೋ ರೂಟ್‌ ಹಾಗೂ ಬೆನ್‌ ಸ್ಟೋಕ್ಸ್‌ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾಯಿತು. ಈ ವೇಳೆ ಜೋ ರೂಟ್‌ 40 ರನ್‌ ಬಾರಿಸಿದ್ದಾಗ ವಾಷಿಂಗ್ಟನ್‌ ಸುಂದರ್‌ ಎಸೆದ ಸ್ಪಿನ್‌ ಮೋಡಿಗೆ ಬಲಿಯಾದರು. ವಿಕೆಟ್‌ ಕೀಪರ್ ಬ್ಯಾಟರ್‌ ಜೇಮಿ ಸ್ಮಿತ್‌ (8) ಸಹ ವಾಷಿಂಗ್ಟನ್‌ ತೋಡಿದ ಖೆಡ್ಡಾಗೆ ಬಲಿಯಾದರು. ಬೆನ್‌ ಸ್ಟೋಕ್ಸ್‌ 3 ಬೌಂಡರಿ ನೆರವಿನಿಂದ 33 ರನ್‌ ಬಾರಿಸಿದ್ದಾಗ ವಾಷಿಂಗ್ಟನ್‌ ಸುಂದರ್‌ ಎಸೆದ ಅಮೋಘ ಸ್ಪಿನ್‌ ಎಸೆತಕ್ಕೆ ಔಟ್ ಆದರು.

ಬೂಮ್ರಾ ಅಬ್ಬರ

ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್‌ ಜಸ್ಪೀತ್ ಬುಮ್ರಾ ಅಬ್ಬರಿಸಿದರು. ಬುಮ್ರಾ 10 ರನ್ ಬಾರಿಸಿದ್ದ ಕ್ರಿಸ್‌ ವೋಕ್ಸ್‌ ಅವರಿಗೆ ಖೆಡ್ಡಾ ತೋಡಿದರು. ಇನ್ನು ಇಂಗ್ಲೆಂಡ್ ತಂಡದ ಶೋಯೆಬ್ ಬಶೀರ್ ಅವರಿಗೆ ವಾಷಿಂಗ್ಟನ್‌ ಸುಂದರ್‌ ಖೆಡ್ಡ ತೋಡಿದರು. ಈ ಮೂಲಕ ಟೀಮ್ ಇಂಡಿಯಾ 192 ರನ್‌ಗಳಿಗೆ ಇಂಗ್ಲೆಂಡ್‌ ತಂಡವನ್ನು ಕಟ್ಟಿ ಹಾಕಿತು. ಭಾರತದ ಪರ ಸ್ಪಿನ್ ಬೌಲರ್‌ ವಾಷಿಂಗ್ಟನ್‌ ಸುಂದರ್‌ 4, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್‌ ತಲಾ 2 ವಿಕೆಟ್‌ ಕಬಳಿಸಿದರು.

Story first published: Sunday, July 13, 2025, 21:11 [IST]
Other articles published on Jul 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+