Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವದಾಖಲೆ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವದಾಖಲೆ
England set new mens cricket ODI world record score v Australia

ಲಂಡನ್, ಜೂ. 20: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ 481 ರನ್ ಪೇರಿಸಿ ಸರಣಿ ಜಯದೊಂದಿಗೆ ಪುರುಷರ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಸಾಧಿಸಿದ ತಂಡವಾಗಿ ವಿಶ್ವದಾಖಲೆ ನಿರ್ಮಿಸಿದೆ.

ಸ್ಕೋರ್ ಕಾರ್ಡ್

ಮಂಗಳವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಜಾನಿ ಬೇರ್ಸ್ಟೋವ್ ಮತ್ತು ಅಲೆಕ್ಸ್ ಹೇಲ್ಸ್ ಆಕರ್ಷಕ ಶತಕದ ನೆರವಿನೊಂದಿಗೆ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 481 ರನ್ ಪೇರಿಸಿ ಆಸ್ಟ್ರೇಲಿಯಾಕ್ಕೆ 482 ರನ್ ಗುರಿ ನೀಡಿತ್ತು.

ಚೇಸಿಂಗ್ ಗೆ ಇಳಿದ ಆಸ್ಟ್ರೇಲಿಯ 37 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು ಕೇವಲ 239ರನ್ ಪೇರಿಸಿ 242ರನ್ ಗಳಿಂದ ಇಂಗ್ಲೆಂಡ್ ಎದುರು ತಲೆಬಾಗಿತು. ಈ ಸೋಲಿನೊಂದಿಗೆ ಆಸ್ಟ್ರೇಲಿಯಾ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಮೂರೂ ಪಂದ್ಯಗಳನ್ನು ಸೊತು ಸರಣಿ ಸೋಲಿನ ಮುಖಭಂಗಕ್ಕೀಡಾಗಿದೆ.

ಏಕದಿನ ಕ್ರಿಕೆಟ್ ನಲ್ಲಿ ಈ ಹಿಂದಿನ ಗರಿಷ್ಠ ರನ್ ದಾಖಲೆಯೂ ಇಂಗ್ಲೆಂಡ್ ಹೆಸರಿನಲ್ಲೇ ಇತ್ತು. 2016ರಂದು ಇಂಗ್ಲೆಂಡ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ 3 ವಿಕೆಟ್ ನಷ್ಟಕ್ಕೆ 444 ರನ್ ಸಾಧನೆ ಮಾಡಿತ್ತು. ಮಂಗಳವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಾನಿ ಬೇರ್ಸ್ಟೋವ್ 139 (92) ಮತ್ತು ಅಲೆಕ್ಸ್ ಹೇಲ್ಸ್ 147 (92) ರನ್ ನೆರವಿನೊಂದಿಗೆ ಇಂಗ್ಲೆಂಡ್ ಈ ದಾಖಲೆ ಮೆರೆದಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಜಾನಿ ಬೇರ್ಸ್ಟೋವ್ ಮತ್ತು ಅಲೆಕ್ಸ್ ಹೇಲ್ಸ್ ಆಕರ್ಷಕ ಶತಕದ ನೆರವಿನೊಂದಿಗೆ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 481 ರನ್ ಪೇರಿಸಿತು. ಜೊತೆಗೆ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ 21 ಎಸೆತಗಳಲ್ಲಿ 50 ರನ್ ಸಿಡಿಸಿ ಇಂಗ್ಲೆಂಡ್ ನ ಅತಿ ವೇಗದ ಅರ್ಧಶತಕ ಸಾಧಕನೆಂಬ ದಾಖಲೆಗೂ ಪಾತ್ರರಾದರು.

ಈ ಬಾರಿಯೂ ಇಂಗ್ಲೆಂಡ್ ನ ಟ್ರೆಂಡ್ ಬ್ರಿಡ್ಜ್ ನಲ್ಲೇ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಈ ಸಾಧನೆ ಮೆರೆದಿರುವುದು ವಿಶೇಷ. ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ದಾಖಲೆ ಹೊಂದಿರುವ ಮೂರನೇ ತಂಡವಾಗಿ ಶ್ರೀಲಂಕಾ ಗುರುತಿಸಿಕೊಂಡಿದೆ. ಶ್ರೀಲಂಕಾ 2006ರಲ್ಲಿ ಆಮ್ ಸ್ಟೆಲ್ವೀನ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 9 ವಿಕೆಟ್ ನಷ್ಟಕ್ಕೆ 443ರನ್ ಸಿಡಿಸಿತ್ತು.

ಏಕದಿನ ಪಂದ್ಯದಲ್ಲಿ ಗರಿಷ್ಠ ರನ್ ದಾಖಲೆಯ ಯಾದಿಯಲ್ಲಿ ಕ್ರಮವಾಗಿ 4, 5, 6ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾವಿದೆ (439/2-2015, 438/9-2006, 438/4-2015). 7ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ (434/4-2006), 8ನೇ ಸ್ಥಾನದಲ್ಲಿ ಭಾರತ (418/5-2011 ವೆಸ್ಟ್ ಇಂಡೀಸ್ ವಿರುದ್ಧ), 9ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (418/5-2006) ಮತ್ತು 10ನೇ ಸ್ಥಾನದಲ್ಲಿ ಆಸ್ಟ್ರೇಲಿಯಾವಿದೆ (417/6-2015).

Story first published: Wednesday, June 20, 2018, 2:02 [IST]
Other articles published on Jun 20, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+