For Quick Alerts
ALLOW NOTIFICATIONS  
For Daily Alerts
 

ಮತ್ತೊಂದು ಐಸಿಸಿ ಟೂರ್ನಿ ಗೆಲ್ಲಲು ಇಂಗ್ಲೆಂಡ್‌ ಸಿದ್ಧವಾಗಿದೆ: ಇಯಾನ್ ಮಾರ್ಗನ್

England set to win another ICC tournament says Eoin Morgan

ಬೆಂಗಳೂರು, ಆಗಸ್ಟ್ 20: ಟಿ20 ವಿಶ್ವಕಪ್‌ನ ಆರಂಭಕ್ಕೆ ಇನ್ನು ಎರಡು ತಿಂಗಳಿಗೂ ಕಡಿಮೆ ಸಮಯವಿದೆ. ಯಾವ ತಂಡ ಗೆಲ್ಲಲಿದೆ ಎಂಬ ಕುತೂಹಲ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ ಹೆಚ್ಚಾಗುತ್ತಿದೆ. ಪ್ರತಿ ತಂಡಗಳು ಕೂಡ ತಮ್ಮ ಬಲಿಷ್ಠ ತಂಡದ ಆಯ್ಕೆಯಲ್ಲಿ ತೊಡಗಿದ್ದು ಟಿ20 ಮಹಾ ಸಮರಕ್ಕೆ ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಮಡದ ಸೀಮಿತ ಓವರ್‌ಗಳ ನಾಯಕ ಇಯಾನ್ ಮಾರ್ಗನ್ ಪ್ರತಿಕ್ರಿಯಿಸಿದ್ದು ಟಿ20 ವಿಶ್ವಕಪ್‌ನ ದೃಷ್ಟಿಯಿಂದ ಕಳೆದ ಎರಡು ವರ್ಷಗಳಲ್ಲಿ ಇಂಗ್ಲೆಂಡ್ ತಂಡ ನೀಡಿದ ಪ್ರದರ್ಶನವನ್ನು ಮುಂದುವರಿಸುವ ಅಗತ್ಯವಿದೆ ಎಂದಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುವ ಮೂಲಕ ಟೂರ್ನಿಯನ್ನು ಆರಂಭಿಸಲಿದೆ. ಅಬುದಾಬಿ ಸ್ಟೇಡಿಯಂನಲ್ಲಿ ಈ ಪಂದ್ಯ ಅಕ್ಟೋಬರ್ 23ರಂದು ನಡೆಯಲಿದೆ. ಈ ಬಾರಿಯ ಟಿ20 ವಿಶ್ವಕಪ್‌ನ ಪಂದ್ಯಗಳು ಭಾರತದಲ್ಲಿ ನಡೆಯಬೇಕಾಗಿತ್ತು. ಆದರೆ ಭಾರತದಲ್ಲಿ ಕೊರೊನಾವೈರಸ್‌ನ ಆತಂಕ ಹೆಚ್ಚಿರುವ ಕಾರಣದಿಂದಾಗಿ ಒಮಾನ್ ಹಾಗೂ ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ತೆಗೆದುಕೊಂಡಿದೆ.

"ನನ್ನ ಪ್ರಕಾರ ನಮ್ಮ ಅತ್ಯಂತ ದೊಡ್ಡ ಸಾಮರ್ಥ್ಯವೆಂದರೆ ನಮ್ಮಲ್ಲಿನ ಸ್ಥಿರತೆ. ಕಳೆದ ಎರಡು ವರ್ಷಗಳಲ್ಲಿ ನಾವು ಅತ್ಯಂತ ಸ್ಥಿರವಾದ ಪ್ರದರ್ಶನ ನೀಡಿಕೊಂಡು ಬಂದಿದ್ದೇವೆ. ಆಟದ ಶೈಲಿಯ ಕಾರಣದಿಂದಾಗಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಆಟ ಬದಲಾವಣೆಯಾಗಬಹುದು. ಇನ್ನು ವಿಶ್ವಕಪ್‌ನಲ್ಲಿ ನಮ್ಮ ಗುಂಪಿನಲ್ಲಿ ಸಾಕಷ್ಟು ಪ್ರತಿಭಾವಂತ ತಂಡಗಳು ಇದೆ. ಹೀಗಾಗಿ ಪ್ರತಿ ಪಮದ್ಯಗಳು ಕೂಡ ನಮಗೆ ಅತ್ಯಂತ ಮುಖ್ಯವಾಗುತ್ತದೆ" ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಇಯಾನ್ ಮಾರ್ಗನ್ ಯುಎಇನಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆದಷ್ಟು ಶೀಘ್ರವಾಗಿ ತಮ್ಮ ಪರವಾಗಿರುವಂತೆ ಮಾಡಿಕೊಳ್ಳುವ ಅಗತ್ಯವನ್ನು ಅವರು ವಿವರಿಸಿದರು. ಈ ಮೂಲಕ ಇದೇ ಮೊದಲ ಬಾರಿಗೆ ಟಿ20 ಹಾಗೂ ಏಕದಿನ ವಿಶ್ವಕಪ್‌ನ ಚಾಂಪಿಯನ್ ತಂಡವಾಗುವ ಗುರಿಯನ್ನು ಹೊಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. "ನನ್ನ ಪ್ರಕಾರ ನಾವು ಸುಲಲಿತವಾಗಿ ನಮ್ಮ ಪರವಾಗಿ ಫಲಿತಾಂಶಗಳನ್ನು ಪಡೆಯಬಲ್ಲೆವು. ನಮ್ಮ ದೃಷ್ಟಿಕೋನದಿಂದ ಪ್ರಮುಖ ಅಂಶವೆಂದರೆ ನಾವು ತಂಡವಾಗಿ ನಿರಂತರವಾಗಿ ಬಲಿಷ್ಠಗೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಾವು ಮುಂದುವರಿಯುತ್ತಿದ್ದಂತೆ ಕಲಿಯುತ್ತಿದ್ದೇವೆ. ಈ ಬಾರಿಯ ಟಿ20 ವಿಶ್ವಕಪ್‌ನ ಮೂಲಕ ಮತ್ತೊಂದು ಐಸಿಸಿ ಟೂರ್ನಿಯನ್ನು ಗೆದ್ದುಕೊಳ್ಳಲು ಇಂಗ್ಲೆಂಡ್ ತಂಡ ಸಂಪೂರ್ಣವಾಗಿ ಸಜ್ಜಾಗಿದೆ" ಎಂದಿದ್ದಾರೆ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್.

ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಗೆದ್ದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. 2019ರಲ್ಲಿ ತವರಿನಲ್ಲಿ ನಡೆದ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಗೆದ್ದು ಬೀಗಿತ್ತು. ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ಕೂಡ ಟೈ ಆದ ಬಳಿಕ ಬೌಂಡರಿಗಳ ಆಧಾರದಲ್ಲಿ ವಿಶ್ವಚಾಂಪಿಯನ್ ತಂಡವಾಗಿ ಇಂಗ್ಲೆಂಡ್ ತಂಡವನ್ನು ಘೋಷಿಸಲಾಗಿತ್ತು. ಈಗ ಮಾರ್ಗನ್ ಬಳಗ ಚುಟುಕು ಮಾದರಿಯ ಕ್ರಿಕೆಟ್‌ನ ವಿಶ್ವಕಪ್‌ ಮೇಲೆಯೂ ಕಣ್ಣಿಟ್ಟಿದೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವಿರುದ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸೂಪರ್ 12 ಹಂತದಲ್ಲಿವೆ. ಅರ್ಹತಾ ಸುತ್ತಿನಲ್ಲಿ ಭಾಗವಹಿಸುವ ತಂಡಗಳ ಪೈಕಿ ಎರಡು ತಂಡಗಳು ಈ ತಂಡಕ್ಕೆ ಪಂದ್ಯಾವಳಿಯ ಆರಂಭದ ಬಳಿಕ ಸೇರಿಕೊಳ್ಳಲಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ತನ್ನ ಬದ್ಧ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಕ್ಟೋಬರ್ 30ರಂದು ಎದುರಿಸಲಿದೆ. ನಂತರ ನವೆಂಬರ್ 6ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಸವಾಲನ್ನು ಸ್ವೀಕರಿಸಲಿದೆ.

Story first published: Friday, August 20, 2021, 23:00 [IST]
Other articles published on Aug 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+