ವಿಶ್ವಕಪ್ ಟೂರ್ನಿಗೆ ನಾವು ನ್ಯಾಯ ಒದಗಿಸಿಲ್ಲ: ಇಂಗ್ಲೆಂಡ್ ನಾಯಕನ ಬೇಸರದ ಮಾತು
ವಿಶ್ವಕಪ್ ಟೂರ್ನಿಯ 29ನೇ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಸಂದರ್ಭದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ತಂಡದ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡ ಸೂಕ್ತವಾದ ನ್ಯಾಯ ಒದಗಿಸುವಂಥಾ ಪ್ರದರ್ಶನ ನೀಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಹಾಲಿ ಚಾಂಪಿಯನ್ ತಂಡವಾಗಿ ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿತ್ತು. ಆದರೆ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವ್ನು ಪಡೆದುಕೊಂಡಿದೆ. ಹೀಗಾಗಿ ಸಾಕಷ್ಟು ಟೀಕೆಗಳು ಇಂಗ್ಲೆಂಡ್ ತಂಡದ ವಿರುದ್ಧ ಕೇಳಿ ಬಂದಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಸೋಳು ಅನುಭವಿಸಿರುವ ಇಂಗ್ಲೆಂಡ್ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ 6ನೇ ಪಂದ್ಯವನ್ನು ಭಾರತದ ವಿರುದ್ಧ ಆಡುತ್ತಿದೆ. ಈ ಪಂದ್ಯದ ಟಾಸ್ ಸಂದರ್ಭದಲ್ಲಿ ತಂಡದ ನಾಯಕ ಜೋಸ್ ಬಟ್ಲರ್ ಪ್ರತಿಕ್ರಿಯೆ ನೀಡಿದ್ದಾರೆ.

"ಇಂದು ನಾವು ಮೊದಲಿಗೆ ಬೌಲಿಂಗ್ ಮಾಡುತ್ತೇವೆ. ಇದಕ್ಕೆ ನಿಖರವಾದ ಕಾರಣಗಳಿಲ್ಲ. ಇದೊಂದು ಕಠಿಣವಾದ ನಿರ್ಧಾರ. ಇದು ಶ್ರೇಷ್ಠವಾದ ಪಂದ್ಯವಾಗಿದ್ದು ಇಂದು ನಮ್ಮಿಂದ ಅತ್ಯುತ್ತಮ ಪ್ರದರ್ಶನ ಹೊರಬರಲಿದೆ. ನಾವೆಲ್ಲರೂ ಇಂದು ಉತ್ತಮವಾದ ಆಟವನ್ನು ಪರದರ್ಶಿಸಲು ಬಯಸುತ್ತಿದ್ದೇವೆ. ನಾವೆಲ್ಲರು ನಮ್ಮ ಶ್ರೇಷ್ಠ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದೇನೆ" ಎಂದಿದ್ದಾರೆ ರೋಹಿತ್ ಶರ್ಮಾ.
ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲಿನೊಂದಿಗೆ ಇಂಗ್ಲೆಂಡ್ ಈ ಬಾರಿ ತನ್ನ ಅಭಿಯಾನ ಆರಂಭಿಸಿತು. ಇನ್ನು ಆಂಗ್ಲರ ಏಕೈಕ ಗೆಲುವು ಬಾಂಗ್ಲಾದೇಶದ ವಿರುದ್ಧ ಬಂದಿತು. ಅಲ್ಲಿ ಡೇವಿಡ್ ಮಲಾನ್ ಅವರ 140 ರನ್‌ಗಳು ಕೊಡುಗೆಯಿಂದಾಗಿ ಒಟ್ಟು 364/9 ಅನ್ನು ಹಾಕಲು ಸಹಾಯ ಮಾಡಿತು. ಆದಾಗ್ಯೂ, ಈ ಯಶಸ್ಸು ಅಲ್ಪಕಾಲಿಕವಾಗಿತ್ತು ಏಕೆಂದರೆ ಇಂಗ್ಲೆಂಡ್ ತನ್ನ ನಂತರದ ಮೂರು ಪಂದ್ಯಗಳಲ್ಲಿ 215 ರನ್‌ಗಳ ಗಡಿಯನ್ನು ದಾಟಲು ವಿಫಲವಾಯಿತು, ಇದರಿಂದಾಗಿ ಹೀನಾಯ ಸೋಲುಗಳು ಸಂಭವಿಸಿದವು.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್
ಇಂಗ್ಲೆಂಡ್: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್
ಬೆಂಚ್: ಸ್ಯಾಮ್ ಕುರ್ರಾನ್, ಬ್ರೈಡನ್ ಕಾರ್ಸೆ, ಹ್ಯಾರಿ ಬ್ರೂಕ್, ಗಸ್ ಅಟ್ಕಿನ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications