ಕ್ರಿಕೆಟ್ ವಾಪಸ್ಸಾತಿಗೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಸಿದ್ಧತೆ

ಲಂಡನ್: ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳಿಗೆ ಮರಳಲು ಇಂಗ್ಲೆಂಡ್ ವೇಗಿ ಜೋಫ್ರಾ ಅರ್ಚರ್ ಸಿದ್ಧರಾಗಿದ್ದಾರೆ. ಗುರುವಾರ (ಮೇ 13) ಕೌಂಟಿ ಚಾಂಪಿಯನ್‌ಶಿಪ್‌ಗಾಗಿ ಸಸೆಕ್ಸ್ ಪ್ರಕಟಿಸಿದ 13 ಜನರ ತಂಡದಲ್ಲಿ ಆರ್ಚರ್ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆರ್ಚರ್ ಶೀಘ್ರ ಮೈದಾನಕ್ಕಿಳಿಯಲಿದ್ದಾರೆ.
ಗಾಯಕ್ಕೀಡಾಗಿದ್ದ ಜೋಫ್ರಾ ಆರ್ಚರ್ ಸುಮಾರು ಒಂದೂವರೆ ತಿಂಗಳ ಕಾಲ ಮೈದಾನದಿಂದ ಹೊರಗಿದ್ದರು. ಭಾರತ-ಇಂಗ್ಲೆಂಡ್ ನಡುವಿನ ಐದನೇ ಟಿ20ಐ ಪಂದ್ಯದಲ್ಲಿ ಆರ್ಚರ್ ಕಡೇಯ ಸಾರಿ ಸ್ಪರ್ಧಾತ್ಮಕ ಪಂದ್ಯದಲ್ಲಿ ಆಡಿದ್ದರು. ಕಳೆದ ಜನವರಿಯಲ್ಲಿ ಆರ್ಚರ್ ಕೈಗೆ ಗಾಯವಾಗಿತ್ತು.
ತನ್ನ ಮನೆಯಲ್ಲಿ ಫಿಶ್ ಟ್ಯಾಂಕ್ ಸ್ವಚ್ಛ ಮಾಡುವಾಗ ಆರ್ಚರ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಅವರ ಬಲಗೈಯೊಳಗೆ ಗ್ಲಾಸಿನ ತುಣುಕು ನುಗ್ಗಿದ್ದು ಸ್ಕ್ಯಾನ್ ವೇಳೆ ಕಂಡು ಬಂದಿತ್ತು ಹೀಗಾಗಿ ಆರ್ಚರ್ ಶಸ್ತ್ರ ಚಿಕಿತ್ಸೆಗಾಗಿ ತೆರಳಿದ್ದರು.
ಗಾಯಕ್ಕೀಡಾಗಿದ್ದರಿಂದ ಈ ಬಾರಿ ಐಪಿಎಲ್‌ನಲ್ಲಿ ಆರ್ಚರ್ ರಾಜಸ್ಥಾನ್ ರಾಯಲ್ಸ್ ಪರ ಆಡಿರಲಿಲ್ಲ. ಆ ಬಳಿಕ ಐಪಿಎಲ್ ಕೋವಿಡ್-19 ಕಾರಣ ಮುಂದೂಡಲ್ಪಟ್ಟಿತು. 'ವಿಶ್ವದಲ್ಲಿರುವ ಯಾವುದೇ ತಂಡಕ್ಕೆ ಆರ್ಚರ್ ಅವರಂತ ಆಟಗಾರರನ್ನು ಹೊಂದಲು ಖುಷಿಯಾಗುತ್ತದೆ. ಯಾಕೆಂದರೆ ಅವರ ಪ್ರತಿಭೆ ಅಂಥದ್ದು,' ಎಂದು ಸಸೆಕ್ಸ್ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications