Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೀರೇಂದ್ರ ಸೆಹ್ವಾಗ್ ದಾಖಲೆ ಪುಡಿಗಟ್ಟಿದ ಬೆನ್ ಸ್ಟೋಕ್ಸ್

ಕೇಪ್ ​ಟೌನ್, ಜನವರಿ, 04: ಭಾರತದ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನು ಇಂಗ್ಲೆಂಡ್​ನ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಪುಡಿ ಪುಡಿ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 163 ಎಸೆತ ಎದುರಿಸಿ ದ್ವಿಶತಕ ದಾಖಲಿಸಿ ಟೆಸ್ಟ್ ಪಂದ್ಯದ ಎರಡನೇ ಅತಿ ವೇಗದ ದ್ವಿಶತಕ ಸಿಡಿಸಿದ ರ್ಕಿತಿಗೆ ಭಾಜನರಾದರು.

2009ರಲ್ಲಿ ಮುಂಬೈಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೆಹ್ವಾಗ್ 168 ಎಸೆತಕ್ಕೆ ದ್ವಿಶತಕ ಸಿಡಿಸಿದ್ದರು. 2002ರಲ್ಲಿ ನ್ಯೂಜಿಲ್ಯಾಂಡ್​ನ ನಥಾನ್ ಆಸ್ಟ್ಲೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 153 ಎಸೆತಕ್ಕೆ ದ್ವಿಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಂತ ವೇಗದ ದ್ವಿಶತಕ ಸರದಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.[ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಗ್ಗೆ ಎಬಿಡಿ ಹೇಳಿದ್ದೇನು?]

England Stokes Betters Sehwag, Second-Fastest Double Ton in Tests

ಮೂಲತಃ ನ್ಯೂಜಿಲೆಂಡ್ ನ ಕ್ಯಾಂಟರ್‌ಬರಿಯ ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ಬೆನ್‌ ಸ್ಟೋಕ್ಸ್‌ ಹರಿಣಗಳ ದಾಳಿಯನ್ನು ಚಿಂದಿ ಮಾಡಿ ಬರೀ 198 ಎಸೆತಗಳಿಂದ 258 ರನ್‌ ಸಿಡಿಸಿದರು. 11 ಸಿಕ್ಸರ್‌, 30 ಬೌಂಡರಿ ಬಾರಿಸಿ ಆಫ್ರಿಕಾ ಬೌಲರ್‌ ಗಳನ್ನು ಸ್ಟೋಕ್ಸ್ ಬೆವರಿಳಿಸಿದರು.

ವಿಶ್ವದಾಖಲೆ ಆಟ
ಇದು ಟೆಸ್ಟ್ ಕ್ರಿಕೆಟ್ ಇತಿಹಾಸದ 17ನೇ ಹಾಗೂ ಇಂಗ್ಲೆಂಡಿನ 2ನೇ ಅತಿ ದೊಡ್ಡ ಜತೆಯಾಟ. 6ನೇ ವಿಕೆಟಿನ ನೂತನ ವಿಶ್ವದಾಖಲೆ. ಇಂಗ್ಲೆಂಡ್ ಆಟಗಾರು ಹೊಡಿ ಬಡಿ ಆಟವನ್ನು ಟೆಸ್ಟ್ ಕ್ರಿಕೆಟ್ ಗೂ ಅಳವಡಿಸಿಕೊಂಡಿದ್ದು ಪಂದ್ಯದ ವಿಶೇಷ.[ಎಬಿಡಿಗೆ ದಕ್ಕದ ದಾಖಲೆ ಮೆಕಲಮ್ ಪಾಲಾಯ್ತು!]

ಟೆಸ್ಟ್ ಕ್ರಿಕೆಟ್ ಅತಿ ವೇಗದ ದ್ವಿಶತಕಗಳು
* 153 ಬಾಲ್- ನ್ಯೂಜಿಲ್ಯಾಂಡ್​ನ ನಥಾನ್ ಆಸ್ಟ್ಲೆ
* 163 ಬಾಲ್- ಇಂಗ್ಲೆಂಡ್​ನ ಬೆನ್ ಸ್ಟೋಕ್ಸ್
* 168 ಬಾಲ್- ಭಾರತದ ವಿರೇಂದ್ರ ಸೆಹ್ವಾಗ್
* 182 ಬಾಲ್- ಭಾರತದ ವಿರೇಂದ್ರ ಸೆಹ್ವಾಗ್
* 186 ಬಾಲ್- ನ್ಯೂಜಿಲ್ಯಾಂಡ್​ನ ಬ್ರೆಂಡನ್ ಮೆಕಲಮ್

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+