World Test Championship: ಟೀಮ್ ಇಂಡಿಯಾದ ದಾಖಲೆ ಅಳಿಸಿದ ಇಂಗ್ಲೆಂಡ್
ಕ್ರಿಕೆಟ್ ಅಂಗಳದಲ್ಲಿ ಪ್ರತಿ ದಿನವೂ ಒಂದೊಂದು ಹೊಸ ದಾಖಲೆಗಳು ನಿರ್ಮಾಣ ಆಗುತ್ತಲೇ ಇರುತ್ತವೆ. ಪ್ರತಿ ದಿನ ದಾಖಲೆಯ ಪುಸ್ತಕಕ್ಕೆ ಸ್ಟಾರ್ ಆಟಗಾರರು ಹಾಗೂ ತಂಡಗಳು ಕೆಲಸ ನೀಡುತ್ತಲೇ ಇರುತ್ತಾರೆ. ಒಂದು ಪಂದ್ಯದ ಸೋಲು ಹಾಗೂ ಗೆಲುವು ಹಲವು ದಾಖಲೆಗಳನ್ನು ನಿರ್ಮಿಸುತ್ತದೆ. ಈಗಲೂ ಇಂತಹದ್ದೇ ಒಂದು ಅಪರೂಪದ ದಾಖಲೆಯನ್ನು ಇಂಗ್ಲೆಂಡ್ ನಿರ್ಮಿಸಿದ್ದು, ಟೀಮ್ ಇಂಡಿಯಾದ ದಾಖಲೆ ಮೀರಿ ನಿಂತಿದೆ.
ಆಡಿಲೇಡ್‌ನಲ್ಲಿ ನಡೆದ ಡೇ ಆಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡದೇ ಇರುವುದು ಎಲ್ಲರಿಗೂ ತಿಳಿದಿರುವ ಸಮಾಚಾರ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್‌ಗಳ ಸೋಲು ಕಂಡಿತ್ತು. ಇನ್ನೊಂದೆಡೆ, ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ 323 ರನ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಕಿವೀಸ್ ವಿರುದ್ಧ ಇಂಗ್ಲೆಂಡ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಕಿವೀಸ್ ತಂಡವನ್ನು ಮಣಿಸುತ್ತಿದ್ದಂತೆ ಇಂಗ್ಲೆಂಡ್ ಅಮೋಘ ದಾಖಲೆಯನ್ನು ಬರೆದಿದೆ.

ಭಾರತದ ಯಾವ ದಾಖಲೆ ಅಳಿಸಿದೆ ಇಂಗ್ಲೆಂಡ್?
ನ್ಯೂಜಿಲೆಂಡ್ ಪ್ರವಾಸದಲ್ಲಿ ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದೊಡ್ಡ ಸಾಧನೆ ಮಾಡಿದೆ. ಇಂಗ್ಲೆಂಡ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಗೆಲುವಿನ ಲೆಕ್ಕಚಾರದಲ್ಲಿ ಟೀಮ್ ಇಂಡಿಯಾ ಸಾಧನೆಯನ್ನು ಮೀರಿ ನಿಂತಿದೆ. ಒಟ್ಟಾರೆ ಡಬ್ಲ್ಯುಟಿಸಿಯಲ್ಲಿ ಇಂಗ್ಲೆಂಡ್ ಇದುವರೆಗೆ ಒಟ್ಟು 32 ಪಂದ್ಯಗಳನ್ನು ಗೆದ್ದು ಬೀಗಿದೆ. ಇದಕ್ಕೂ ಮೊದಲು ಈ ದಾಖಲೆ ಭಾರತದ ಹೆಸರನಲ್ಲಿತ್ತು. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ 31 ಜಯ ದಾಖಲಿಸಿತ್ತು. ಈಗ ಈ ದಾಖಲೆ ಇಂಗ್ಲೆಂಡ್ ಪಾಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಕೀರ್ತಿ ಇಂಗ್ಲೆಂಡ್‌ಗೆ ಸಲ್ಲುತ್ತದೆ.
ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳು ಯಾವವು?
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಇಂಗ್ಲೆಂಡ್ ಇದುವರೆಗೆ ಒಟ್ಟು 64 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 32ರಲ್ಲಿ ಗೆದ್ದು 24ರಲ್ಲಿ ಸೋತಿದೆ. 8 ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ. ಪ್ರಸಕ್ತ ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್ ಗೆಲುವಿನ ಶೆಕಡಾ ವಾರು 45.24 ಗಳೊಂದಿಗೆ ಐದನೇ ಸ್ಥಾನದಲ್ಲಿದ್ದು, ಫೈನಲ್ ರೇಸ್‌ನಿಂದ ದೂರ ಉಳಿದಿದೆ.
ಡಬ್ಲ್ಯುಟಿಸಿ ಟೂರ್ನಿಯಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ಪಟ್ಟಿಯಲ್ಲಿ ಆಸೀಸ್‌ಗೂ ಸ್ಥಾನವಿದೆ. ಈ ತಂಡ 29 ಗೆಲುವು ದಾಖಲಿಸಿದೆ. ಮಾಜಿ ಡಬ್ಲ್ಯುಟಿಸಿ ಚಾಂಪಿಯನ್ ನ್ಯೂಜಿಲೆಂಡ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು 18 ಪಂದ್ಯಗಳನ್ನು ಗೆದ್ದಿದೆ. ಇಷ್ಟೇ ಪಂದ್ಯಗಳನ್ನು ಗೆದ್ದ ದಕ್ಷಿಣ ಆಫ್ರಿಕಾ ಐದನೇ ಸ್ಥಾನದಲ್ಲಿದೆ.

ನ್ಯೂಜಿಲೆಂಡ್ ಪ್ರವಾಸದಲ್ಲಿ ಇಂಗ್ಲೆಂಡ್ ಮೂರನೇ ಪಂದ್ಯದಲ್ಲಿ ಹೆಮ್ಲಿಟನ್‌ನಲ್ಲಿ ಡಿಸೆಂಬರ್ 14 ರಿಂದ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications