ಭಾರತ ವಿರುದ್ಧ ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಬದಲಾವಣೆ

ಲಂಡನ್, ಆಗಸ್ಟ್ 06: ಭಾರತದ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಆಗುತ್ತಿದೆ.
ಮೊದಲ ಟೆಸ್ಟ್ ಆಡಿದ್ದ ಬೆನ್ ಸ್ಟೋಕ್ಸ್ ಹಾಗೂ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಅವರನ್ನು ಕೈಬಿಟ್ಟಿರುವ ಇಂಗ್ಲೆಂಡ್ ತಂಡ ಬದಲಿ ಆಟಗಾರರನ್ನು ತಂಡಕ್ಕೆ ಸ್ವಾಗತಿಸಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ವೇಗದ ಬೌಲರ್ ಬೆನ್ ಸ್ಟೋಕ್ಸ್ ಅವರು ಕೊನೆಯ ದಿನದ ಆಟದಲ್ಲಿ ಮೂರು ವಿಕೆಟ್ ಪಡೆದು ಮಿಂಚಿದ್ದರು. ಅದರಲ್ಲಿಯೂ ಅವರು ಪ್ರಮುಖವಾದ ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದರು.
ಬೆನ್ ಸ್ಟೋಕ್ಸ್ ಅವರು ಕ್ರಿಮಿನಲ್ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುತ್ತಿರುವ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಕ್ರಿಸ್ ವೋಕ್ಸ್ ಸ್ಥಾನ ಪಡೆದಿದ್ದಾರೆ.
ಮೊದಲ ಟೆಸ್ಟ್ ಸೇರಿ ಈ ಹಿಂದಿನ 5 ಟೆಸ್ಟ್ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿರುವ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಅವರನ್ನು ತಂಡದಿಂದ ಕೈಬಿಟ್ಟು ಓಲಿ ಪೋಪ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಮಲನ್ ಅವರು ಕಳೆದ 5 ಟೆಸ್ಟ್‌ನಲ್ಲಿ ಗಳಿಸಿರುವುದು ಕೇವಲ 74 ರನ್‌ಗಳಷ್ಟೆ.
ಮೊದಲ ಟೆಸ್ಟ್‌ನಲ್ಲಿ ಮಲನ್, ಕೊಹ್ಲಿಯ ಎರಡು ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದ್ದರು. ಆ ನಂತರವೇ ಕೊಹ್ಲಿ ಸೆಂಚುರಿ ಭಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications