ಶ್ರೀಲಂಕಾಕ್ಕೆ ಇಂಗ್ಲೆಂಡ್ ಪ್ರವಾಸ ಸರಣಿಯ ವೇಳಾಪಟ್ಟಿ ಬದಲು

ಕೊಲಂಬೋ, ಮೇ 2: ಟೆಸ್ಟ್ ಸರಣಿಗೋಸ್ಕರ ಇಂಗ್ಲೆಂಡ್ ಕ್ರಿಕೆಟ್ ತಂಡ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಿತ್ತು, ಈ ಪ್ರವಾಸ ಸರಣಿಯ ವೇಳಾಪಟ್ಟಿ ಬದಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಶ್ಲೇ ಡಿ ಸಿಲ್ವಾ ಹೇಳಿದ್ದಾರೆ. ಸರಣಿಯ ವೇಳಾಪಟ್ಟಿ ಮುಂದಿನ ವರ್ಷ ಜನವರಿಗೆ ಬದಲಾಗಿದೆ.
ಕಳೆದ ಮಾರ್ಚ್‌ನಲ್ಲಿ ಶ್ರೀಲಂಕಾಕ್ಕೆ ಪ್ರಯಾಣಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ ಅಲ್ಲಿ 10 ದಿನಗಳ ಕಾಲ ತಂಗಿತ್ತು. ಕೇವಲ ವಾರ್ಮ್ ಅಪ್ ಪಂದ್ಯವನ್ನಷ್ಟೇ ಆಡಿತ್ತು. ಇನ್ನು ಟೆಸ್ಟ್ ಸರಣಿ ಆರಂಭವಾಗುತ್ತದೆ ಅನ್ನುವಷ್ಟರಲ್ಲಿ ಕೊರೊನಾವೈರಸ್ ಕಾರಣ ಪ್ರವಾಸ ಅರ್ಧಕ್ಕೇ ರದ್ದಾಗಿತ್ತು.
'ಮುಂದೂಡಲ್ಪಟ್ಟಿರುವ ಪ್ರವಾಸ ಸರಣಿಗೆ ವೇಳಾಪಟ್ಟಿ ಹೊಂದಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇಂಗ್ಲೆಂಡ್ ಈಗಾಗಲೇ ಈ ಸರಣಿಗಾಗಿ ಮುಂದಿನ ವರ್ಷ ಜನವರಿಗೆ ದಿನಾಂಕ ನಿಗದಿ ಮಾಡಿದೆ. ಹಾಗಂತ ಈ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ,' ಎಂದು ಡೆ ಸಿಲ್ವಾ ಡೈಲಿ ನ್ಯೂಸ್ ಜೊತೆ ಹೇಳಿಕೊಂಡಿದ್ದಾರೆ.
'ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳುವುದಕ್ಕೂ ಇಂಗ್ಲೆಂಡ್ ವೇಳಾಪಟ್ಟಿ ಬದಲಿಸಿಕೊಂಡಿದೆ. ಆದರೆ ಬದಲಾದ ವೇಳಾಪಟ್ಟಿಯಂತೆ ಸರಣಿ ನಡೆಸಲು ಹೇಗೆ ಸಾಧ್ಯವಾಗುತ್ತದೆ ಎಂದು ನೋಡಬೇಕಾಗುತ್ತದೆ,' ಎಂದು ಡಿ ಸಿಲ್ವಾ ವಿವರಿಸಿದ್ದಾರೆ. ಅಂದ್ಹಾಗೆ, ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ಲಂಕಾಕ್ಕೆ ಇಂಗ್ಲೆಂಡ್ ಪ್ರವಾಸ ಸರಣಿ ಎರಡು ಪಂದ್ಯಗಳನ್ನು ಹೊಂದಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications