For Quick Alerts
ALLOW NOTIFICATIONS  
For Daily Alerts
 

ಮಲನ್ ಅರ್ಧ ಶತಕ, ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ

England vs Australia, 1st T20I - Live Score

ಸೌತಾಂಪ್ಟನ್: ಸೌತಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ vs ಆಸ್ಟ್ರೇಲಿಯಾ ನಡುವಿನ ಮೊದಲನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ರೋಚಕ 2 ರನ್ ಜಯ ಸಾಧಿಸಿದೆ. ಡೇವಿಡ್ ಮಲನ್ ಮತ್ತು ಜೋಸ್ ಬಟ್ಲರ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಇಯಾನ್ ಮಾರ್ಗನ್ ಬಳಗ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0ಯ ಮುನ್ನಡೆ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್‌, ಜೋಸ್ ಬಟ್ಲರ್ 44 (29 ಎಸೆತ), ಡೇವಿಡ್ ಮಲನ್ 66 (43), ಕ್ರಿಸ್ ಜೋರ್ಡನ್ 14, ಜಾನಿ ಬೇರ್ಸ್ಟೋವ್ 8, ಟಾಮ್ ಬ್ಯಾಂಟನ್ 8 ರನ್ ಸೇರ್ಪಡೆಯೊಂದಿಗೆ 20 ಓವರ್‌ ಮುಕ್ತಾಯಕ್ಕೆ 7 ವಿಕೆಟ್ ಕಳೆದು 162 ರನ್ ಕಲೆ ಹಾಕಿತು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ 58 (47), ಆ್ಯರನ್ ಫಿಂಚ್ 46 (32), ಸ್ಟೀವ್ ಸ್ಮಿತ್ 18, ಮಾರ್ಕಸ್ ಸ್ಟೋಯ್ನಿಸ್ 23, ಆ್ಯಸ್ಟನ್ ಅಗರ್ 4 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 160 ರನ್ ಬಾರಿಸಿ ಶರಣಾಯಿತು.

ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಆ್ಯಾಷ್ಟನ್ ಅಗರ್ 2, ಕೇನ್ ರಿಚರ್ಡ್ಸನ್ 2, ಗ್ಲೆನ್ ಮ್ಯಾಕ್ಸ್‌ವೆಲ್ 2 ವಿಕೆಟ್ ಪಡೆದರೆ, ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಜೋಫ್ರಾ ಆರ್ಚರ್ 2, ಆದಿಲ್ ರಶೀದ್ 2 ವಿಕೆಟ್‌ನೊಂದಿಗೆ ಗಮನ ಸೆಳೆದರು. ಡೇವಿಡ್ ಮಲನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

Story first published: Saturday, September 5, 2020, 10:33 [IST]
Other articles published on Sep 5, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+