For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಆಸ್ಟ್ರೇಲಿಯಾ ಟಿ20 ಇಂದು ಆರಂಭ: ಪಂದ್ಯದ ಸಂಪೂರ್ಣ ಮಾಹಿತಿ

England Vs Australia, 2020: 1st T20i Details

ಪಾಕಿಸ್ತಾನದ ವಿರುದ್ಧದ ಟೆಸ್ಟ್ ಹಾಗೂ ಟಿ20 ಸರಣಿಯನ್ನು ಮುಗಿಸಿರುವ ಇಂಗ್ಲೆಂಡ್ ಇಂದಿನಿಂದ ಮತ್ತೊಂದು ಪ್ರಮುಖ ಸರಣಿಗೆ ಸಿದ್ಧವಾಗಿದೆ. ಈ ಬಾರಿ ಇಂಗ್ಲೆಂಡ್‌ಗೆ ಎದುರಾಳಿಯಾಗಿರುವುದು ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ನಡುವೆ ಇಂದು ಮೊದಲ ಟಿ20 ಪಂದ್ಯ ನಡೆಯಲಿದೆ.

ಈ ಸರಣಿಯ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಯಾರಿಯನ್ನು ಆರಂಭಿಸಲಿದೆ. ಇಂಗ್ಲೆಂಡ್‌ಗೆ ತೆರಳಿರುವ 21 ಆಟಗಾರರ ತಂಡದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶವನ್ನು ಆಸ್ಟ್ರೇಲಿಯಾ ನೀಡಿದ್ದು ಹೆಚ್ಚಿನ ಆಟಗಾರರು ಅವಕಾಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಮೂಲಕ ಸುದೀರ್ಘ ಕಾಲದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯಯ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯುತ್ತಿದೆ.

ಮತ್ತೊಂದು ಸರಣಿಗೆ ಇಂಗ್ಲೆಂಡ್ ಸಜ್ಜು

ಮತ್ತೊಂದು ಸರಣಿಗೆ ಇಂಗ್ಲೆಂಡ್ ಸಜ್ಜು

ಇಂಗ್ಲೆಂಡ್ ಕ್ರಿಕೆಟ್ ಪುನಾರಂಭವಾದ ಬಳಿಕ ನಿರಂತರವಾಗಿ ಸರಣಿಯಲ್ಲಿ ಪಾಲ್ಗೊಳ್ಳುತ್ತಲೇ ಇದೆ. ಪಾಕಿಸ್ತಾನದ ವಿರುದ್ಧದ ಟಿ20 ಸರಣಿಯಲ್ಲಿ ಸಾಕಷ್ಟು ಪೈಪೋಟಿಯನ್ನು ನೆರಡೂ ತಂಡಗಳು ನಡೆಸಿ ಸರಣಿಯನ್ನು ಸಮಬಲಗೊಳಿಸಿತ್ತು, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡದಲ್ಲಿ ಅನುಭವಿ ಆಟಗಾರರು ಸೇರಿಕೊಂಡಿದ್ದು ತಂಡ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಹೀಗಾಗಿ ಚುಟುಕು ಕ್ರಿಕೆಟ್‌ನಲ್ಲಿ ನಂಬರ್ 1 ತಂಡವಾಗಿರುವ ಆಸ್ಟ್ರೇಲಿಯಾಗೆ ಎದುರೇಟು ನೀಡಲು ಇಂಗ್ಲೆಂಡ್ ಸಜ್ಜಾಗಿದೆ.

ಸಮಯ ಹಾಗೂ ನೇರಪ್ರಸಾರ

ಸಮಯ ಹಾಗೂ ನೇರಪ್ರಸಾರ

3 ಪಂದ್ಯಗಳ ಟಿ20 ಸರಣಿ ಸೌಥಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಆರಂಭವಾಗಲಿದೆ. ಭಾರತದಲ್ಲಿ ಈ ಪಂದ್ಯದವನ್ನು ಸೋನಿ ಸಿಕ್ಸ್ ಹಾಗೂ ಸೋನಿ ಸಿಕ್ಸ್ ಹೆಚ್‌ಡಿನಲ್ಲಿ ವೀಕ್ಷಿಸಬಹುದು. ಜೊತೆಗೆ ಸೋನಿ ಲೈವ್ ಆ್ಯಪ್‌ನಲ್ಲೂ ಪಂದ್ಯದ ನೇರಪ್ರಸಾರವಾಗಲಿದೆ.

ಆಸ್ಟ್ರೇಲಿಯಾ ಸಂಭಾವ್ಯ ತಂಡ

ಆಸ್ಟ್ರೇಲಿಯಾ ಸಂಭಾವ್ಯ ತಂಡ

ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶೈನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಜಂಪಾ.

ಇಂಗ್ಲೆಂಡ್ ಸಂಭಾವ್ಯ ತಂಡ

ಇಂಗ್ಲೆಂಡ್ ಸಂಭಾವ್ಯ ತಂಡ

ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಜೋಸ್ ಬಟ್ಲರ್, ಟಾಮ್ ಬ್ಯಾಂಟನ್, ಡೇವಿಡ್ ಮಲನ್, ಇಯೊನ್ ಮೋರ್ಗಾನ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್, ಟಾಮ್ ಕರ್ರನ್.

Story first published: Friday, September 4, 2020, 15:20 [IST]
Other articles published on Sep 4, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+