For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು ಬರೆದ ಜೋಸ್ ಬಟ್ಲರ್

England vs Australia, 2nd T20I - Live Score

ಸೌತಾಂಪ್ಟನ್: ಜೋಸ್ ಬಟ್ಲರ್ ಚತುರ ಬ್ಯಾಟಿಂಗ್ ನೆರವಿನೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ 6 ವಿಕೆಟ್ ಗೆಲುವು ದಾಖಲಿಸಿದೆ. ಸೌತಾಂಪ್ಟನ್‌ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಜಯಗೊಂದಿಗೆ ಮೂರು ಪಂದ್ಯಗಳ ಟಿ20 ಸರಣಿ 2-೦ಯಿಂದ ಆಂಗ್ಲರ ವಶವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಆ್ಯರನ್ ಫಿಂಚ್ 40, ಸ್ಟೀವ್ ಸ್ಮಿತ್ 10, ಮಾರ್ಕಸ್ ಸ್ಟೋಯ್ನಿಸ್ 35, ಗ್ಲೆನ್ ಮ್ಯಾಕ್ಸ್‌ವೆಲ್ 26, ಆ್ಯಷ್ಟನ್ ಅಗರ್ 23, ಪ್ಯಾಟ್ ಕಮಿನ್ಸ್ 13 ರನ್‌ನೊಂದಿಗೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದು 157 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಆರಂಭಿಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ 77 (54 ಎಸೆತ), ಜಾನಿ ಬೇರ್ಸ್ಟೋವ್ 9, ಡೇವಿಡ್ ಮಲನ್ 42 (32), ಇಯಾನ್ ಮಾರ್ಗನ್ 7 ರನ್‌ ಸೇರ್ಪಡೆಯೊಂದಿಗೆ 18.5 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 158 ರನ್ ಮಾಡಿತು. ಜೋಸ್ ಬಟ್ಲರ್ ಪಂದ್ಯಶ್ರೇಷ್ಠರೆನಿಸಿದರು.

ಇಂಗ್ಲೆಂಡ್ vs ಆಸೀಸ್, 3ನೇ ಟಿ20ಐ, ಸ್ಕೋರ್‌ಕಾರ್ಡ್

1
49132

ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ವಿಕೆ), ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಟಾಮ್ ಬ್ಯಾಂಟನ್, ಇಯಾನ್ ಮೋರ್ಗಾನ್ (ಸಿ), ಮೊಯೀನ್ ಅಲಿ, ಟಾಮ್ ಕರನ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್.

ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋನಿಸ್, ಅಲೆಕ್ಸ್ ಕ್ಯಾರಿ (ವಿಕೆ), ಆ್ಯಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಆ್ಯಡಮ್ ಜಂಪಾ.

Story first published: Monday, September 7, 2020, 10:05 [IST]
Other articles published on Sep 7, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+