ಫಿಂಚ್-ಮಾರ್ಷ್ ಸಾಹಸ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಗೆಲುವು

ಸೌತಾಂಪ್ಟನ್: ನಾಯಕ ಆ್ಯರನ್ ಫಿಂಚ್ ಮತ್ತು ಮಿಚೆಲ್ ಮಾರ್ಚ್ ಎಚ್ಚರಿಕೆ ಆಟದಿಂದಾಗಿ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಕೊನೇಯ ಟಿ20ಐ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 5 ವಿಕೆಟ್ ಗೆಲುವನ್ನಾಚರಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20ಐ ಸರಣಿ 2-1ರಿಂದ ಆಂಗ್ಲರ ವಶವಾಗಿದೆ.
ಸೌತಾಂಪ್ಟನ್‌ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್, ಜಾನಿ ಬೇರ್ಸ್ಟೋವ್ 55 (44 ಎಸೆತ), ಡೇವಿಡ್ ಮಲನ್ 21, ನಾಯಕ ಮೊಯೀನ್ ಅಲಿ 23, ಜೋ ಡೆನ್ಲಿ 29 ರನ್ ಸೇರ್ಪಡೆಯೊಂದಿಗೆ 20 ಓವರ್ ಮುಕ್ತಾಯಕ್ಕೆ 145 ರನ್ ಕಲೆ ಹಾಕಿತು.
ಗುರಿ ಬೆನ್ನಟ್ಟಿದ ಅಸ್ಟ್ರೇಲಿಯಾದಿಂದ ಮ್ಯಾಥ್ಯೂ ವೇಡ್ 14, ಆ್ಯರನ್ ಫಿಂಚ್ 39 (26), ಮಾರ್ಕಸ್ ಸ್ಟೋಯ್ನಿಸ್ 26, ಮಿಚೆಲ್ ಮಾರ್ಷ್ ಅಜೇಯ 39 (36), ಆ್ಯಷ್ಟನ್ ಅಗರ್ ಅಜೇಯ 16 ರನ್ ಸೇರಿಸಿದರು. ಆಸೀಸ್ 19.3ನೇ ಓವರ್‌ಗೆ 5 ವಿಕೆಟ್ ಕಳೆದು 146 ರನ್ ಗಳಿಸಿತು.
ಇಂಗ್ಲೆಂಡ್ ಓವರ್‌ನಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಮ್ ಜಂಪಾ 2 ವಿಕೆಟ್‌ನಿಂದ ಗಮನ ಸೆಳೆದರೆ, ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಆದಿಲ್ ರಶೀದ್ 3 ವಿಕೆಟ್ ಪಡೆದರು. ಮಿಚೆಲ್ ಮಾರ್ಷ್ ಪಂದ್ಯಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications