5ನೇ ಆ್ಯಷಸ್ ಟೆಸ್ಟ್: ಇಂಗ್ಲೆಂಡ್‌ಗೆ 135 ರನ್ ಜಯ, ಸರಣಿ ಸಮಬಲ

ಲಂಡನ್, ಸೆಪ್ಟೆಂಬರ್ 15: ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ 5ನೇ ಆ್ಯಷಸ್ ಟೆಸ್ಟ್ ನಲ್ಲಿ ಇಂಗ್ಲೆಂಡ್ 135 ರನ್‌ಗಳ ಗೆಲುವನ್ನಾಚರಿಸಿದೆ. ಈ ಪಂದ್ಯದೊಂದಿಗೆ ಇತ್ತಂಡಗಳ ಟೆಸ್ಟ್ ಸರಣಿ (1 ಪಂದ್ಯ ಡ್ರಾ ಸೇರಿ) 2-2ರಿಂದ ಸಮಬಲಗೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 47, ನಾಯಕ ಜೋ ರೂಟ್ 57, ಜೋಸ್ ಬಟ್ಲರ್ 70 ರನ್‌ನೊಂದಿಗೆ 87.1 ಓವರ್‌ಗೆ 294 ರನ್ ಮಾಡಿತು. ಈ ವೇಳೆ ಆಸೀಸ್ ವೇಗಿ ಮಿಚೆಲ್ ಮಾರ್ಷ್ 5 ವಿಕೆಟ್ ಪಡೆದು ಗಮನ ಸೆಳೆದರು.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಮಾರ್ನಸ್ ಲ್ಯಾಬುಸ್ಚಾಗ್ನೆ 48, ಸ್ಟೀವ್ ಸ್ಮಿತ್ 80 ರನ್‌ನೊಂದಿಗೆ 68.5 ಓವರ್‌ಗೆ 225 ರನ್ ಗಳಿಸಿತು. ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ 6, ಸ್ಯಾಮ್ ಕರನ್ 3 ವಿಕೆಟ್ ಪಡೆದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಜೋ ಡೆನ್ಲಿ 94, ಜೋಸ್ ಬಟ್ಲರ್ 47 ರನ್‌ನೊಂದಿಗೆ 329 ರನ್ ಸಿತ್ತು. ಆಸೀಸ್ 77 ಓವರ್‌ಗೆ 263 ರನ್ ಮಾಡಿ ಸೋಲೊಪ್ಪಿಕೊಂಡಿತು.
ಇಂಗ್ಲೆಂಡ್ vs ಆಸ್ಟ್ರೇಲಿಯಾ, 5ನೇ ಆ್ಯಷಸ್ ಟೆಸ್ಟ್, Live ಸ್ಕೋರ್
ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಜೋ ಡೆನ್ಲಿ, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋವ್ (ವಿಕೆ), ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್.
ಆಸ್ಟ್ರೇಲಿಯಾ ತಂಡ: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್, ಟಿಮ್ ಪೈನ್ (ಸಿ & ವಿಕೆ), ಪ್ಯಾಟ್ ಕಮ್ಮಿನ್ಸ್, ಪೀಟರ್ ಸಿಡಲ್, ನಾಥನ್ ಲಿಯಾನ್, ಜೋಶ್ ಹ್ಯಾಝಲ್‌ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications