ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ: ತಂಡಕ್ಕೆ ಮರಳಿದ ಸ್ಟಾರ್ ಆಟಗಾರ

ಟಿ20 ವಿಶ್ವಕಪ್ ಮುಕ್ತಾಯವಾದ ಬಳಿಕ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರದ್ಧ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಮುಂದಿನ ತಿಂಗಳು ನಡೆಯಲಿರುವ 3 ಏಕದಿನ ಸರಣಿಗೆ ಇಂಗ್ಲೆಂಡ್ ತಂಡವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಮಂಗಳವಾರ ಪ್ರಕಟಿಸಲಾದ 15 ಆಟಗಾರರ ಬಳಗದಲ್ಲಿ ಕಳಪೆ ಫಾರ್ಮ್‌ನಿಂದಾಗಿ ಇತ್ತೀಚೆಗೆ ಟಿ20 ಸೆಟಪ್‌ನಿಂದ ಹೊರಗುಳಿದ ಜೇಸನ್ ರಾಯ್ ಕೂಡ ಕಾಣಿಸಿಕೊಂಡಿದ್ದಾರೆ.
ನವೆಂಬರ್ 17 ರಂದು ಅಡಿಲೇಡ್‌ನಲ್ಲಿ ಈ ಏಕದಿನ ಸರಣಿ ಆರಂಭವಾಗಲಿದ್ದು ಉಳಿದ ಎರಡು ಏಕದಿನ ಪಂದ್ಯಗಳು ನವೆಂಬರ್ 19 ರಂದು ಸಿಡ್ನಿಯಲ್ಲಿ ಮತ್ತು ನವೆಂಬರ್ 22 ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಇನ್ನು ಈ ಸರಣಿ ಏಕದಿನ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿಲ್ಲ.

ಮಾರ್ಕ್‌ವುಡ್‌ಗೆ ವಿಶ್ರಾಂತಿ
ವೇಗಿ ಮಾರ್ಕ್ ವುಡ್‌ಗೆ ಈ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗಿರುವ ಬಹುತೇಕ ಆಟಗಾರರೇ ಈ ತಂಡದಲ್ಲಿಯೂ ಇರುವ ಕಾರಣ ಇಂಗ್ಲೆಂಡ್ ತಂಡ ಬಲಿಷ್ಟವಾಗಿ ಕಾಣಿಸುತ್ತಿದೆ. ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಯಾಗುವ ಆಟಗಾರರಲ್ಲಿ ವಿನ್ಸ್ ಹಾಗೂ ಬಿಲ್ಲಿಂಗ್ಸ್ ಪ್ರಮುಖವಾಗಿದ್ದಾರೆ. ಈ ಇಬ್ಬರು ಕೂಡ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಕೊನೆಯದಾಗಿ ಪ್ರತಿನಿಧಿಸಿದ್ದರು.

ಸುದೀರ್ಘ ಕಾಲದ ಬಳಿಕ ಕಮ್‌ಬ್ಯಾಕ್ ಮಾಡಿದ ಆಟಗಾರರು
ಇನ್ನು ಇಂಗ್ಲೆಂಡ್ ತಂಡಕ್ಕೆ ಈ ಸರಣಿಯಲ್ಲಿ ವೇಗಿ ಓಲಿ ಸ್ಟೋನ್ ಮತ್ತು ಕ್ರಿಸ್ ಜೋರ್ಡಾನ್ ಕೂಡ ಸೇರಿಕೊಳ್ಳಲಿದ್ದಾರೆ. ಸ್ಟೋನ್ ಅಕ್ಟೋಬರ್ 2018ರಲ್ಲಿ ಕೊನೆಯ ಬಾರಿಗೆ ಏಕದಿನ ಮಾದರಿಯಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. ಇತ್ತ ಕ್ರಿಸ್ ಜೋರ್ಡಾನ್ ಕೂಡ ಎರಡು ವರ್ಷಗಳಿಗೂ ಅಧಿಕ ಕಾಲದಿಂದ ಏಕದಿನ ಮಾದರಿಯಲ್ಲಿ ಕಾಣಿಸಿಕೊಂಡಿಲ್ಲ. ಟಿ20 ಸ್ಪೆಶಲಿಸ್ಟ್ ಆಗಿ ಕಣಕ್ಕಿಳಿಯುತ್ತಿದ್ದರು. ಇದೀಗ ಏಕದಿನ ಮಾದರಿಯಲ್ಲಿ ಮತ್ತೆ ಮಿಂಚುವ ಅವಕಾಶ ಗಿಟ್ಟಿಸಿಕೊಂಡಿದ್ದಾ.
ಇನ್ನು ಲ್ಯೂಕ್ ವುಡ್ ತಂಡದಲ್ಲಿರುವ ಏಕೈಕ ಅನ್‌ಕ್ಯಾಪ್‌ಡ್ ಆಟಗಾರ. ಕಳೆದ ಜೂನ್‌ನಲ್ಲಿ ನೆದರ್‌ಲ್ಯಾಂಡ್‌ಗೆ ತೆರಳಿದ್ದ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು ಕೂಡ ಆಡುವ ಅವಕಾಶ ದೊರೆತಿರಲಿಲ್ಲ. ಇನ್ನು ವಿಶ್ವಕಪ್‌ನಲ್ಲಿ ರೀಸ್ ಟೋಪ್ಲಿಯ ಬದಲಿಗೆ ಟೈಮಲ್ ಮಿಲ್ಸ್ ಸೇರ್ಪಡೆಯಾದ ನಂತರ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದು ಈ ವಾರ ಆಸ್ಟ್ರೇಲಿಯಾದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇಂಗ್ಲೆಂಡ್ ಆಡುವ ಬಳಗ
ಜೋಸ್ ಬಟ್ಲರ್(ನಾಯಕ), ಮೊಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಕ್ರಿಸ್ ಜೋರ್ಡಾನ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಫಿಲ್ ಸಾಲ್ಟ್, ಓಲಿ ಸ್ಟೋನ್, ಜೇಮ್ಸ್ ವಿನ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಲ್ಯೂಕ್ ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications