ಆಸ್ಟ್ರೇಲಿಯಾ vs ಇಂಗ್ಲೆಂಡ್: ಏಕದಿನ, ಟಿ20 ಸರಣಿಯ ಸಂಪೂರ್ಣ ವೇಳಾಪಟ್ಟಿ

ಲಂಡನ್: ಸೆಪ್ಟೆಂಬರ್ 19ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಹಬ್ಬ ಆರಂಭಗೊಳ್ಳುವುದಕ್ಕೂ ಮುನ್ನ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ಟಿ20ಐ ಮತ್ತು ಏಕದಿನ ಸರಣಿ ನಡೆಯಲಿದೆ. ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ತಂಡ ಪ್ರವಾಸ ಹೋಗಲಿದ್ದು, ಸೆಪ್ಟೆಂಬರ್ 4ರಿಂದ ಪ್ರವಾಸ ಸರಣಿ ಆರಂಭವಾಗಲಿದೆ. ಪ್ರವಾಸವು ಮೂರು ಪಂದ್ಯಗಳ ಟಿ20ಐ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಒಳಗೊಂಡಿರಲಿದೆ. ಈ ಪ್ರವಾಸ ಸರಣಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಿದೆ.
ಸದ್ಯ ಇಂಗ್ಲೆಂಡ್‌ನಲ್ಲಿ ಪಾಕಿಸ್ತಾನ ಮತ್ತು ಆತಿಥೇಯ ಇಂಗ್ಲೆಂಡ್ ಮಧ್ಯೆ ಟೆಸ್ಟ್ ಸರಣಿ ನಡೆಯುತ್ತಿದೆ. ಇದಾಗಿ ಇತ್ತಂಡಗಳ ಮಧ್ಯೆ 3 ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಸೆಪ್ಟೆಂಬರ್ 4ರಿಂದ ಆಸ್ಟ್ರೇಲಿಯಾ vs ಇಂಗ್ಲೆಂಡ್ ಸರಣಿಗಳು ಆರಂಭವಾಗಿ ಸೆಪ್ಟೆಂಬರ್ 16ರಂದು ಕೊನೆಗೊಳ್ಳಲಿದೆ.
ಇಂಗ್ಲೆಂಡ್ vs ಆಸ್ಟ್ರೇಲಿಯಾ ಪ್ರವಾಸ ಸರಣಿಯ ಸಂಪೂರ್ಣ ವೇಳಾಪಟ್ಟಿ, ಮಾಹಿತಿ ಇಲ್ಲಿದೆ.

3 ಪಂದ್ಯಗಳ ಟಿ20ಐ ಸರಣಿ
ಸೆಪ್ಟೆಂಬರ್ 04, ಶುಕ್ರವಾರ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ, 1ನೇ ಟಿ20ಐ, ದಿ ರೋಸ್ ಬೌಲ್, ಸೌತಾಂಪ್ಟನ್, 10:30 PM
ಸೆಪ್ಟೆಂಬರ್ 06, ಭಾನುವಾರ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ, 2ನೇ ಟಿ20ಐ, ದಿ ರೋಸ್ ಬೌಲ್, ಸೌತಾಂಪ್ಟನ್, 6:30 PM
ಸೆಪ್ಟೆಂಬರ್ 08, ಮಂಗಳವಾರ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ, 3ನೇ ಟಿ20ಐ, ದಿ ರೋಸ್ ಬೌಲ್, ಸೌತಾಂಪ್ಟನ್, ರಾತ್ರಿ 10:30 PM

ಐಪಿಎಲ್‌ಗೆ ಹೊಡೆತ ಕೊಟ್ಟ ಪ್ರವಾಸ
ಆಸ್ಟ್ರೇಲಿಯಾ-ಇಂಗ್ಲೆಂಡ್ ಪ್ರವಾಸ ಸರಣಿ ಮುಗಿದು ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭವಾಗಲಿರುವುದರಿಂದ ಐಪಿಎಲ್ ಮೊದಲ ವಾರದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ಆಡುತ್ತಿಲ್ಲ ಎನ್ನಲಾಗುತ್ತಿದೆ. ಐಪಿಎಲ್‌ಗೂ ಮುನ್ನ ಆಟಗಾರರು 14 ದಿನಗಳ ಕ್ವಾರಂಟೈನ್ ಪಾಲಿಸಬೇಕಿರುವುದರಿಂದ ಐಪಿಎಲ್ ಮೊದಲ ವಾರ ಆಸೀಸ್-ಇಂಗ್ಲೆಂಡ್ ಆಟಗಾರರಿಗೆ ಆಡಲಾಗುತ್ತಿಲ್ಲ.

3 ಪಂದ್ಯಗಳ ಏಕದಿನ ಸರಣಿ
ಸೆಪ್ಟೆಂಬರ್ 11, ಶುಕ್ರವಾರ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ, 1ನೇ ಏಕದಿನ, ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್, 5:30 PM
ಸೆಪ್ಟೆಂಬರ್ 13, ಭಾನುವಾರ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ, 2ನೇ ಏಕದಿನ, ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್, 5:30 PM
ಸೆಪ್ಟೆಂಬರ್ 16, ಬುಧವಾರ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ, 3ನೇ ಏಕದಿನ, ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್, 5:30 PM

ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ
ಆ್ಯರನ್ ಫಿಂಚ್, ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಝಲ್ವುಡ್, ಶೇನ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್ , ಆಂಡ್ರ್ಯೂ ಟೈ, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಮ್ ಜಂಪಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications