ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯಕ್ಕೆ ಸ್ಟೀವ್ ಸ್ಮಿತ್ ಅನುಮಾನ

ಲಂಡನ್: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಆಡೋದು ಅನುಮಾನವಾಗಿದೆ. ಅಭ್ಯಾಸದ ವೇಳೆ ಸ್ಮಿತ್ ತಲೆಗೆ ಗಾಯವಾಗಿತ್ತು. ಹೀಗಾಗಿ ಸ್ಮಿತ್ ಎರಡನೇ ಬಾರಿಗೆ ಪರೀಕ್ಷೆಗೆ ಓಳಗಾಗಬೇಕಿರುವುದರಿಂದ ಮುಂದಿನ ಒಡಿಐಗೆ ಅಲಭ್ಯರಾಗುವ ಸಾಧ್ಯತೆಯಿದೆ.
ಮ್ಯಾನ್ಚೆಸ್ಟರ್‌ನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಿಂದ ಸ್ಮಿತ್ ಕೊನೇ ಘಳಿಗೆಯಲ್ಲಿ ಹಿಂದೆ ಸರಿದಿದ್ದರು. ಈ ಪಂದ್ಯದಲ್ಲಿ ಆಸೀಸ್ 19 ರನ್ ರೋಚಕ ಜಯ ದಾಖಲಿಸುವುದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.
ಸದ್ಯ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಸ್ಮಿತ್ ಅವರನ್ನು ಮೊದಲ ಒಡಿಐನಿಂದ ಹೊರಗಿಡಲಾಗಿತ್ತು. 'ಮುನ್ನೆಚ್ಚರಿಕಾ ಕ್ರಮವಾಗಿ ಸ್ಮಿತ್ ರನ್ನು ಪಂದ್ಯದಿಂದ ಕೈ ಬಿಡಲಾಗಿದೆ,' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿತ್ತು. ನೆಟ್ ಅಭ್ಯಾಸದ ವೇಳೆ ಸ್ಮಿತ್ ತಲೆಗೆ ಸಣ್ಣಗೆ ಗಾಯವಾಗಿತ್ತು.
'ಅಭ್ಯಾಸದ ವೇಳೆ ಸ್ಮಿತ್ ತಲೆಗೆ ಏಟು ಬಿದ್ದಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಗಿದೆ,' ಎಂದು ಆಸ್ಟ್ರೇಲಿಯಾದ ಲಿಮಿಟೆಡ್ ಓವರ್‌ನ ನಾಯಕ ಆ್ಯರನ್ ಫಿಂಚ್ ಮಾಹಿತಿ ನೀಡಿದ್ದಾರೆ. ಇಂಗ್ಲೆಂಡ್ vs ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯ ಸೆಪ್ಟೆಂಬರ್ 13ರಂದು ಮ್ಯಾನ್ಚೆಸ್ಟರ್‌ನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications