Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ವಿರುದ್ಧ ಇಂಗ್ಲೆಂಡ್ ದಿಢೀರ್ ಕುಸಿತದ ಬಗ್ಗೆ ಫನ್ನಿ ಟ್ವೀಟ್ಸ್

ಬರ್ಮಿಂಗ್ ಹ್ಯಾಂ, ಆಗಸ್ಟ್ 01: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭವಾಗಿದ್ದು, ವಿರಾಟ್ ಕೊಹ್ಲಿ ಪಡೆ ಮೊದಲ ದಿನದ ಗೌರವ ಪಡೆದುಕೊಂಡಿದೆ. ಮೊದಲ ದಿನದ ಚಹಾ ವಿರಾಮದ ತನಕ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಇಂಗ್ಲೆಂಡ್, ದಿಢೀರ್ ಕುಸಿತ ಕಂಡಿದ್ದರ ಬಗ್ಗೆ ಥರಾವರಿ ಟ್ವೀಟ್ಸ್ ಬಂದಿವೆ.

2014ರ ಇಂಗ್ಲೆಂಡ್-ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ, ಭಾರತ ಹಾಗೂ ವಿರಾಟ್ ಕೊಹ್ಲಿ ಪಾಲಿಗೆ ಕಹಿ ನೆನಪಾಗಿ ಉಳಿದಿದೆ. ಆ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ, ಕೊಹ್ಲಿ ಕೇವಲ 134 ರನ್ ಗಳಿಸಿದ್ದರು.

ಇಂಗ್ಲೆಂಡಿನ ಬ್ಯಾಟಿಂಗ್ ಕುಸಿತದ ಜತೆಗೆ ಅಜಿಂಕ್ಯ ರಹಾನೆ ಅವರು ಸ್ಲಿಪ್ ನಲ್ಲಿ ಆರಂಭಿಕ ಆಟಗಾರ ಕೀಟೊನ್ ಜೆನ್ನಿಂಗ್ಸ್ ಅವರ ಕ್ಯಾಚ್ ಬಿಟ್ಟಿದ್ದರ ಬಗ್ಗೆ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. 2014ರಲ್ಲಿ ಇದೇ ರೀತಿ ಕ್ಯಾಚ್ ಹಿಡಿಯಲು ವಿಫಲರಾಗಿದ್ದಕ್ಕೆ ಸರಣಿ ಕಳೆದುಕೊಳ್ಳಬೇಕಾಯಿತು ಎಂದಿದ್ದಾರೆ.

ಟೆಸ್ಟ್ ಆಡುವ ದೇಶಗಳ ಪೈಕಿ ಸ್ಲಿಪ್ ನಲ್ಲಿ ಉತ್ತಮ ಕ್ಯಾಚ್ ಹಿಡಿಯುವ ಟಾಪ್ ದೇಶಗಳ ಪೈಕಿ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ. ಆದರೆ, ಭಾರತ ಟಾಪ್ 5ನಲ್ಲೂ ಇಲ್ಲ,

ನಾಸರ್ ಹುಸೇನ್ ಹೇಳದೆ ನಂಬುವಂತಿಲ್ಲ

ವಿರಾಟ್ ಕೊಹ್ಲಿ ಅವರು ನೀರಿನ ಮೇಲೆ ನಡೆದಾಡಿದರು ನಾನು ನಂಬುವುದಿಲ್ಲ. ನಾಸರ್ ಹುಸೇನ್ ಹೇಳಿದರೆ ಮಾತ್ರ ನಂಬಿಕೆ ಬರುತ್ತದೆ.

ಇಂಗ್ಲೆಂಡ್ ಬ್ಯಾಟಿಂಗ್

ಇಂಗ್ಲೆಂಡ್ ಬ್ಯಾಟಿಂಗ್ ಕುಸಿತದಂತೆ ಇನ್ನು ಯಾವ ತಂಡದ ಬ್ಯಾಟಿಂಗ್ ಕುಸಿಯುವುದಿಲ್ಲ. ಚಹಾ ವಿರಾಮಕ್ಕೂ ಮುನ್ನ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್, ದಿನದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡಿದ್ದು ಅಚ್ಚರಿ!

ಇಶಾಂತ್ ಶರ್ಮ ಹೇರ್ ಸ್ಟೈಲ್ ಬಗ್ಗೆ

ಇಶಾಂತ್ ಶರ್ಮ ಹೇರ್ ಸ್ಟೈಲ್ ಬಗ್ಗೆ ಕೂಡಾ ಟ್ವೀಟ್ಸ್ ಬಂದಿತ್ತು. ಇನ್ನು ಹೇರ್ ಕಟ್ ಮಾಡಿಸಿಲ್ಲ ಏಕೆ ಎಂದು ಪೋಷಕರು ಪ್ರಶ್ನಿಸುತಿದ್ದಾರೆ.

ಕಟ್ಟಡ ಕುಸಿತದ ಜಿಫ್ ಮೂಲಕ ಟ್ರಾಲ್

ಇಂಗ್ಲೆಂಡ್ ಬ್ಯಾಟಿಂಗ್ ಕುಸಿತದ ಬಗ್ಗೆ ಕಟ್ಟಡ ಕುಸಿತದ ಜಿಫ್ ಮೂಲಕ ಟ್ರಾಲ್ ಮಾಡಲಾಗಿದೆ.

ಇಂಗ್ಲೆಂಡ್ ಈ ಪಂದ್ಯ ಸೋತರೆ ರನೌಟ್ ಕಾರಣ

ಇಂಗ್ಲೆಂಡ್ ಈ ಪಂದ್ಯ ಸೋತರೆ ಅದಕ್ಕೆ ಜೋ ರೂಟ್ ರನೌಟ್ ಕಾರಣ.

Story first published: Thursday, August 2, 2018, 11:58 [IST]
Other articles published on Aug 2, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+