
ಲಾರ್ಡ್ಸ್: ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್ ಆಡುತ್ತಿರುವ ಭಾರತ 154 ರನ್ ಮುನ್ನಡೆಯಲ್ಲಿದೆ. ಟೀಮ್ ಇಂಡಿಯಾದ ಪ್ರಮುಖ ವಿಕೆಟ್‌ಗಳು ಪತನಗೊಂಡಿದ್ದು, ರಿಷಭ್ ಪಂತ್ ಮತ್ತು ಇಶಾಂತ್ ಶರ್ಮಾ ಆಡುತ್ತಿದ್ದಾರೆ. ಭಾನುವಾರ (ಆಗಸ್ಟ್ 15) ದಿನದಾಟದ ಅಂತ್ಯಕ್ಕೆ ಭಾರತ 82 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದು 181 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಪೇರಿಸಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 128 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 391 ರನ್ ಗಳಿಸಿ 27 ರನ್ ಮುನ್ನಡೆ ಪಡೆದುಕೊಂಡಿತ್ತು. ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 181 ರನ್ ಗಳಿಸಿ ಆಡುತ್ತಿರುವುದರಿಂದ ದೊಡ್ಡ ಮೊತ್ತ ಸಂಪಾದಿಸುವುದು ಕಷ್ಟ ಸಾಧ್ಯವೆನಿಸಿದೆ.
ಆಸರೆಯಾದ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ
ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಬಿಟ್ಟು ಯಾರಿಂದಲೂ ಗಮನಾರ್ಹ ರನ್ ಬರಲಿಲ್ಲ. ಕೆಎಲ್ ರಾಹುಲ್ 5, ರೋಹಿತ್ ಶರ್ಮಾ 21, ಚೇತೇಶ್ವರ್ 45, ನಾಯಕ ವಿರಾಟ್ ಕೊಹ್ಲಿ 20, ಅಜಿಂಕ್ಯ ರಹಾನೆ 61, ರವೀಂದ್ರ ಜಡೇಜಾ 3 ರನ್ ಬಾರಿಸಿ ವಿಕೆಟ್ ನೀಡಿದ್ದಾರೆ. ರಿಷಭ್ ಪಂತ್ 14, ಇಶಾಂತ್ ಶರ್ಮಾ 4 ರನ್‌ನೊಂದಿಗೆ ಭಾನುವಾರ ನಾಲ್ಕನೇ ದಿನದಾಟದ ಅಂತ್ಯಕ್ಕೆ ಕ್ರೀಸ್‌ನಲ್ಲಿದ್ದರು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದಿಂದ ರೋಹಿತ್ ಶರ್ಮಾ 83, ಕೆಎಲ್ ರಾಹುಲ್ 129, ಚೇತೇಶ್ವರ್ ಪೂಜಾರ 9, ವಿರಾಟ್ ಕೊಹ್ಲಿ 42, ಅಜಿಂಕ್ಯ ರಹಾನೆ 1, ರಿಷಭ್ ಪಂತ್ 37, ರವೀಂದ್ರ ಜಡೇಜಾ 40, ಮೊಹಮ್ಮದ್ ಶಮಿ ೦, ಇಶಾಂತ್ ಶರ್ಮಾ 8 ರನ್ ಬಾರಿಸಿದರು. ಭಾರತ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಗಳಿಸಿತ್ತು. ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ ಪ್ರಮುಖ 5 ವಿಕೆಟ್ ಉರುಳಿಸಿ ಗಮನ ಸೆಳೆದರು. 29 ಓವರ್ ಎಸೆದಿದ್ದ ಆ್ಯಂಡರ್ಸನ್ 62 ರನ್ ನೀಡಿ 5 ವಿಕೆಟ್ ಮುರಿದಿದ್ದರು. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ ವಿಕೆಟ್ ಗಳನ್ನು ಆ್ಯಂಡರ್ಸನ್ ಕೆಡವಿದರು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಜೋ ರೂಟ್ ಭರ್ಜರಿ ಆಟ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 49, ಡೊಮಿನಿಕ್ ಸಿಬ್ಲಿ 11, ಹಸೀಬ್ ಹಮೀದ್ 0, ಜೋ ರೂಟ್ 180, ಜಾನಿ ಬೈರ್‌ಸ್ಟೊವ್ 57, ಜೋಸ್ ಬಟ್ಲರ್ 23, ಮೊಯೀನ್ ಅಲಿ 27, ಸ್ಯಾಮ್ ಕರನ್ , ಒಲ್ಲಿ ರಾಬಿನ್ಸನ್ 6, ಮಾರ್ಕ್ ವುಡ್ 5 ರನ್ ಬಾರಿಸಿದರು. ಇಂಗ್ಲೆಂಡ್ 128 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 391 ರನ್ ಗಳಿಸಿ 27 ರನ್ ಮುನ್ನಡೆ ಪಡೆದುಕೊಂಡಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಇಶಾಂತ್ ಶರ್ಮಾ 3, ಮೊಹಮ್ಮದ್ ಶಮಿ 2, ಮೊಹಮ್ಮದ್ ಸಿರಾಜ್ 4 ವಿಕೆಟ್‌ನಿಂದ ಗಮನ ಸೆಳೆದರು.
ಇಂಗ್ಲೆಂಡ್ ಪ್ಲೇಯಿಂಗ್ XI/ಭಾರತ ಪ್ಲೇಯಿಂಗ್ XI
ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ಸಿ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ಡಬ್ಲ್ಯೂ), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.
ಬೆಂಚ್: ಝ್ಯಾಕ್ ಕ್ರಾಲಿ, ಡೇನಿಯಲ್ ಲಾರೆನ್ಸ್, ಕ್ರೇಗ್ ಓವರ್‌ಟನ್, ಸಾಕಿಬ್ ಮಹಮೂದ್, ಓಲ್ಲಿ ಪೋಪ್, ಜ್ಯಾಕ್ ಲೀಚ್.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ಡಬ್ಲ್ಯೂ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಬೆಂಚ್: ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ.