For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್, 2ನೇ ಟೆಸ್ಟ್‌, Live: ಇಂಗ್ಲೆಂಡ್‌ಗೆ ನಾಯಕ ರೂಟ್ ಆಸರೆ

England vs India, 2nd Test Mtach, day 3, Live Score

ಲಂಡನ್: ಲಂಡನ್‌ನ ಲಾರ್ಡ್ಸ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ದ್ವಿತೀಯ ಟೆಸ್ಟ್‌ ಪಂದ್ಯ ನಡೆಯುತ್ತಿದ್ದು, ಇಂಗ್ಲೆಂಡ್ ತಂಡ ಮೊದಲನೇ ಇನ್ನಿಂಗ್ಸ್‌ ಆಡುತ್ತಿದೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ ಉತ್ತಮ ರನ್ ಕಲೆ ಹಾಕಿತ್ತು. ಭಾರತದಿಂದ ಕೆಎಲ್ ರಾಹುಲ್ ಶತಕ, ರೋಹಿತ್ ಶರ್ಮಾ ಅರ್ಧ ಶತಕ ಮತ್ತು ವಿರಾಟ್ ಕೊಹ್ಲಿ, ರಿಷಭ್ ಪಂತ್‌, ರವೀಂದ್ರ ಜಡೇಜಾ ರನ್ ಕೊಡುಗೆ ನೀಡಿದ್ದಾರೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಗಳಿಸಿದೆ.

ಮೊದಲ ಇನ್ನಿಂಗ್ಸ್‌ ಆಡುತ್ತಿರುವ ಇಂಗ್ಲೆಂಡ್‌ನಿಂದ ಪ್ರಮುಖ ವಿಕೆಟ್‌ಗಳು ಉರುಳಿವೆ. 60 ಓವರ್‌ ಮುಕ್ತಾಯಕ್ಕೆ ಇಂಗ್ಲೆಂಡ್ 3 ವಿಕೆಟ್ ಕಳೆದು 173 ರನ್ ಗಳಿಸಿತ್ತು. ರೋರಿ ಬರ್ನ್ಸ್ 49, ಡೊಮಿನಿಕ್ ಸಿಬ್ಲಿ 11, ಹಸೀಬ್ ಹಮೀದ್ 0 ರನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ಜೋ ರೂಟ್ ಮತ್ತು ಜಾನಿ ಬೇರ್ಸ್ಟೋವ್ ಆಡುತ್ತಿದ್ದರು. ರೂಟ್ 67+ ರನ್ ಗಳಿಸಿದ್ದರು.

ಭಾರತ vs ಇಂಗ್ಲೆಂಡ್, 2ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌

1
49713
ರೋಹಿತ್ ಶರ್ಮಾ, ಕೆಎಲ್ ರಾಹುಲ್ ಉತ್ತಮ ಜೊತೆಯಾಟ

ರೋಹಿತ್ ಶರ್ಮಾ, ಕೆಎಲ್ ರಾಹುಲ್ ಉತ್ತಮ ಜೊತೆಯಾಟ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಉತ್ತಮ ಜೊತೆಯಾಟ ನೀಡಿದರು. ಇಬ್ಬರೂ 126 ರನ್‌ ಜತೆಯಾಟ ನೀಡಿದರು. ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಜೊತೆಯಾಟಕ್ಕಾಗಿ ರೋಹಿತ್ ಮತ್ತು ರಾಹುಲ್ ದಾಖಲೆ ಪಟ್ಟಿ ಕೂಡ ಸೇರಿಸಿಕೊಂಡಿದ್ದಾರೆ. ಇಂಗ್ಲೆಂಡ್‌ಗೆ ಪ್ರವಾಸ ಬಂದು ಟೆಸ್ಟ್ ಪಂದ್ಯ ಆಡುವಾಗ ಮೊದಲ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚಿಗೆ ಆರಂಭಿಕ ಜೊತೆಯಾಟ ನೀಡಿದ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಗುರುತಿಸಿಕೊಂಡಿದ್ದಾರೆ. 126 ರನ್ ಸಾಧನೆಯೊಂದಿಗೆ ರೋಹಿತ್, ರಾಹುಲ್ ಈ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಮತ್ತು ಮಾರ್ಕ್ ಟೇಲರ್ ಇದ್ದಾರೆ. 1993ರಲ್ಲಿ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 128 ರನ್ ಗಳಿಸಿದ್ದರು.

ಭಾರತದ ಇನ್ನಿಂಗ್ಸ್‌ನಲ್ಲಿ ಸ್ಕೋರ್‌ ಪಟ್ಟಿ, ಬೌಲಿಂಗ್

ಭಾರತದ ಇನ್ನಿಂಗ್ಸ್‌ನಲ್ಲಿ ಸ್ಕೋರ್‌ ಪಟ್ಟಿ, ಬೌಲಿಂಗ್

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ರೋಹಿತ್ ಶರ್ಮಾ 83, ಕೆಎಲ್ ರಾಹುಲ್ 129, ಚೇತೇಶ್ವರ್ ಪೂಜಾರ 9, ವಿರಾಟ್ ಕೊಹ್ಲಿ 42, ಅಜಿಂಕ್ಯ ರಹಾನೆ 1, ರಿಷಭ್ ಪಂತ್ 37, ರವೀಂದ್ರ ಜಡೇಜಾ 40, ಮೊಹಮ್ಮದ್ ಶಮಿ ೦, ಇಶಾಂತ್ ಶರ್ಮಾ 8, ಜಸ್‌ಪ್ರೀತ್‌ ಬೂಮ್ರಾ 0, ಮೊಹಮ್ಮದ್ ಸಿರಾಜ್ 0 ರನ್‌ನೊಂದಿಗೆ ಭಾರತ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಗಳಿಸಿತು. ಇದು ರಾಹುಲ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಾರಿಸಿದ 6ನೇ ಶತಕ. ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ ಪ್ರಮುಖ 5 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದಾರೆ. 29 ಓವರ್‌ ಎಸೆದಿದ್ದ ಆ್ಯಂಡರ್ಸನ್ 62 ರನ್ ನೀಡಿ 5 ವಿಕೆಟ್ ಮುರಿದಿದ್ದಾರೆ. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಮತ್ತು ಜಸ್‌ಪ್ರೀತ್‌ ಬೂಮ್ರಾ ವಿಕೆಟ್ ಗಳನ್ನು ಆ್ಯಂಡರ್ಸನ್ ಕೆಡವಿದರು. ಇನ್ನು ಆಲಿ ರಾಬಿನ್ಸನ್ 73 ರನ್‌ಗೆ 2, ಮಾರ್ಕ್ ವುಡ್ 91 ರನ್‌ಗೆ 2, ಮೊಯೀನ್ ಅಲಿ 53 ರನ್‌ ಗೆ 1 ವಿಕೆಟ್ ಪಡೆದರು. ಈಗ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ ಆಡುತ್ತಿದೆ. ಅಂದ್ಹಾಗೆ ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 300+ ರನ್‌ ಗಳಿಸಿದವತ್ತು ಪಂದ್ಯ ಸೋತಿದ್ದೇ ಇಲ್ಲ. ಹೀಗಾಗಿ ದ್ವಿತೀಯ ಟೆಸ್ಟ್‌ನಲ್ಲಿ ಭಾರತ ಗೆಲ್ಲುವ ನಿರೀಕ್ಷೆಯಿದೆ.

ಭಾರತ ಗೆಲ್ಲದೆ 15 ವರ್ಷಗಳ ಕಳೆದಿವೆ

ಭಾರತ ಗೆಲ್ಲದೆ 15 ವರ್ಷಗಳ ಕಳೆದಿವೆ

ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯೊಂದನ್ನು ಗೆಲ್ಲದೆ ಭಾರತ ತಂಡ ಬರೋಬ್ಬರಿ 14 ವರ್ಷಗಳನ್ನು ಕಳೆದಿದೆ. ಕಳೆದ ಬಾರಿ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದೆಂದರೆ 2007ರಲ್ಲಿ. 2007ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ಗೆದ್ದಿತ್ತು. ಈ ವೇಳೆ ಎರಡು ಪಂದ್ಯಗಳು ಡ್ರಾ ಅನ್ನಿಸಿದ್ದವು. ದ್ವಿತೀಯ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್ ಜಯ ಗಳಿಸಿತ್ತು. ಅದಾದ ಬಳಿಕ 2011, 2014 ಮತ್ತು 2018ರಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಿತ್ತು. ಇದರಲ್ಲಿ ಯಾವುದರಲ್ಲೂ ಗೆದ್ದಿಲ್ಲ. ಹೀಗಾಗಿ ಈ ಬಾರಿ ಗೆಲ್ಲಲು ತಂಡಕ್ಕೆ ಅವಕಾಶವಿದೆ. ಮುಂಬರಲಿರುವ ಟೆಸ್ಟ್‌ ಸರಣಿಯಲ್ಲಾದರೂ ವಿರಾಟ್ ಕೊಹ್ಲಿ ಪಡೆ ಗೆಲ್ಲುತ್ತಾ ಕಾದು ನೋಡಬೇಕಿದೆ.

ಇಂಗ್ಲೆಂಡ್ ಪ್ಲೇಯಿಂಗ್ XI/ಭಾರತ ಪ್ಲೇಯಿಂಗ್ XI

ಇಂಗ್ಲೆಂಡ್ ಪ್ಲೇಯಿಂಗ್ XI/ಭಾರತ ಪ್ಲೇಯಿಂಗ್ XI

ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ಸಿ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ಡಬ್ಲ್ಯೂ), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.
ಬೆಂಚ್: ಝ್ಯಾಕ್ ಕ್ರಾಲಿ, ಡೇನಿಯಲ್ ಲಾರೆನ್ಸ್, ಕ್ರೇಗ್ ಓವರ್‌ಟನ್, ಸಾಕಿಬ್ ಮಹಮೂದ್, ಓಲ್ಲಿ ಪೋಪ್, ಜ್ಯಾಕ್ ಲೀಚ್.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ಡಬ್ಲ್ಯೂ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಬೆಂಚ್: ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ.

Story first published: Saturday, August 14, 2021, 16:59 [IST]
Other articles published on Aug 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+