ರೋಹಿತ್ ಭರ್ಜರಿ ಶತಕ, ಆಂಗ್ಲರ ವಿರುದ್ಧ ಟಿ20 ಸರಣಿ ಕೈವಶ

ಬ್ರಿಸ್ಟಲ್, ಜುಲೈ 08: ಅತಿಥೇಯ ಇಂಗ್ಲೆಂಡ್ ವಿರುದ್ಧ ಟಿ20ಐ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಭಾರತ ತಂಡವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ತಪ್ಪಾಯಿತೇ? ಕುಲದೀಪ್ ತಂಡದಲ್ಲಿರಬೇಕಿತ್ತೆ? ಅಭಿಮಾನಿಗಳ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಭಾರತ ಸುಲಭವಾಗಿ ಮೂರನೇ ಟಿ20ಐ ಪಂದ್ಯ ಗೆದ್ದು, ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಭಾರತದ ಚೇಸ್ : ರೋಹಿತ್ ಶರ್ಮ 56 ಎಸೆತಗಳಲ್ಲಿ 101 ಅಜೇಯ, 11 ಬೌಂಡರಿ, 5 ಸಿಕ್ಸರ್,
* ಕೊಹ್ಲಿ 29 ಎಸೆತಗಳಲ್ಲಿ 43, ರಾಹುಲ್ 10ಎಸೆತಗಳಲ್ಲಿ 19, ಹಾರ್ದಿಕ್ ಪಾಂಡ್ಯ 14 ಎಸೆತಗಳಲ್ಲಿ 34ರನ್ ಗಳಿಸಿ, ಭಾರತಕ್ಕೆ 7 ವಿಕೆಟ್ ಗಳ ಜಯ ತಂದಿತ್ತರು. 18.4 ಓವರ್ ಗಳಲ್ಲಿ ಭಾರತ 201/3 ಸ್ಕೋರ್ ಮಾಡಿತು.
ಇಂಗ್ಲೆಂಡ್ ಇನ್ನಿಂಗ್ಸ್: ಇಂಗ್ಲೆಂಡಿಗೆ ಮೊದಲು ಬ್ಯಾಟಿಂಗ್ ಅವಕಾಶ ಪಡೆದುಕೊಂಡು, ಉತ್ತಮ ಆರಂಭ ಪಡೆದುಕೊಂಡಿತು. ಅಂತಿಮವಾಗಿ 20 ಓವರ್ ಗಳಲ್ಲಿ 198/9 ಸ್ಕೋರ್ ಮಾಡಿದೆ.
* ಜಾಸನ್ ರಾಯ್ 7 ಸಿಕ್ಸರ್, 4 ಬೌಂಡರಿ ಚೆಚ್ಚಿ 31 ಎಸೆತಗಳಲ್ಲಿ 67ರನ್ ಗಳಿಸಿದರು.
* ವಿಕೆಟ್ ಕೀಪರ್ ಜೋಸ್ ಬಟ್ಲರ್ 7 ಬೌಂಡರಿ ಇದ್ದ 21 ಎಸೆತಗಳಲ್ಲಿ 34ರನ್ ಬಾರಿಸಿದರು.
* ಆದರೆ, 94ರನ್ ಆಗಿದ್ದಾಗ ಬಟ್ಲರ್, 103 ಸ್ಕೋರ್ ಆಗಿದ್ದಾಗ ರಾಯ್ ಔಟಾದರು.
* ಹಾರ್ದಿಕ್ ಪಾಂಡ್ಯ 4, ಉಮೇಶ್ 1, ದೀಪಕ್ ಚಾಹರ್ 1, ಸಿದ್ದಾರ್ಥ್ ಕೌಲ್ 2 ವಿಕೆಟ್ ಕಿತ್ತರು.
ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಅವರ ಮೇಲೆ ಹೆಚ್ಚು ಅವಲಂಬಿಸಿತ್ತು. ಆದರೆ, ಇಂದಿನ ಪಂದ್ಯದಲ್ಲಿ ಮೂವರು ಸ್ಪಿನ್ನರ್ ಗಳು ಆಡುತ್ತಿದ್ದು, ಭುವನೇಶ್ವರ್ ಕುಮಾರ್ ಗಾಯಗೊಂಡು ಹೊರಗುಳಿದಿದ್ದರೆ, ಕುಲದೀಪ್ ತಂಡಕ್ಕೆ ಆಯ್ಕೆಯಾಗಿಲ್ಲ. ದೀಪಕ್ ಚಾಹಲ್, ಉಮೇಶ್ ಯಾದವ್, ಸಿದ್ದಾರ್ಥ್ ಕೌಲ್ ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ.
ಭಾರತದ ಸ್ಪಿನ್ನರ್ ಗಳು ಈ ಪಂದ್ಯದಲ್ಲಿ ಯಶಸ್ವಿಯಾದರೆ, ಭಾರತ ಸತತ 6 ಟಿ20ಐ ಸರಣಿ ಗೆಲ್ಲಬಹುದಾಗಿದೆ. ಸೆಪ್ಟೆಂಬರ್ 2017ರಿಂದ ಭಾರತದ ಗೆಲುವಿನ ನಾಗಲೋಟವನ್ನು ಮುಂದುವರೆಸಿದೆ. ಜುಲೈ 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋಲು ಕಂಡಿತ್ತು.

ಸ್ಪಿನ್ನರ್ ಗಳ ಮೇಲೆ ಅವಲಂಬಿತ ಭಾರತ
ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಕುಲದೀಪ್ ಯಾದವ್ ಮತ್ತು ಯಜುರ್ವೇಂದ್ರ ಚಾಹಲ್ ಸ್ಪಿನ್ ಜೋಡಿ ಎದುರು ಮಂಕಾಗಿದ್ದವು. ಆದರೆ, ಇಂಗ್ಲೆಂಡ್ ಈ ಇಬ್ಬರನ್ನೂ ಎದುರಿಸಲು ಬಹುಬೇಗನೆ ತನ್ನ ಆಟದ ಶೈಲಿಯನ್ನು ಬದಲಿಸಿಕೊಂಡಿದೆ.
ಮೊದಲ ಪಂದ್ಯದಲ್ಲಿ ಭಾರತದ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ವಿಫಲವಾಗಿದ್ದ ಇಂಗ್ಲೆಂಡ್ ಪಡೆ, ಎರಡನೆಯ ಪಂದ್ಯದಲ್ಲಿ ಅದಕ್ಕೆ ತಾವು ಸನ್ನದ್ಧರಾಗಿದ್ದೇವೆ ಎಂಬ ಸಂದೇಶ ನೀಡಿದೆ.

ಕೊಹ್ಲಿ ನಂತರ ದಾಖಲೆ ಹಿಂದೆ ಬಿದ್ದ ರೋಹಿತ್
ಟಿ20ಯಲ್ಲಿ ಕೊಹ್ಲಿ ಬಳಿಕ 2000 ರನ್ ಗಡಿ ಮುಟ್ಟಿದ ಎರಡನೆಯ ಭಾರತೀಯ ಎನಿಸಿಕೊಳ್ಳಲು ರೋಹಿತ್ ಶರ್ಮಾ ಅವರಿಗೆ 14 ರನ್‌ಗಳ ಅವಶ್ಯಕತೆಯಿದೆ. ಒಂದು ವೇಳೆ ಭಾರತ ಪಂದ್ಯವನ್ನು ಸೋತರೆ, ಇದೇ ಮೊದಲ ಬಾರಿಗೆ ಮೂರು ಪಂದ್ಯಗಳ ದ್ವಿ ರಾಷ್ಟ್ರೀಯ ಸರಣಿಯನ್ನು ಸೋತಂತೆ ಆಗಲಿದೆ.
ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ
ದ್ವೀ ರಾಷ್ಟ್ರೀಯ ಸರಣಿಗಳಲ್ಲಿ ಭಾರತ ಇದುವರೆಗೂ ಮೂರನೇ ಪಂದ್ಯವನ್ನು ಸೋತಿಲ್ಲ. ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆರಂಭಿಕ ಜೋಡಿ ಎನಿಸಿಕೊಳ್ಳಲು ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರಿಗೆ 38 ರನ್‌ಗಳ ಅವಶ್ಯಕತೆ ಇದೆ.
ದೀಪಕ್ ಚಾಹರ್ ಗೆ ಮೊದಲ ಪಂದ್ಯ
ವೇಗಿ ದೀಪಕ್ ಚಾಹರ್ ಅವರು ತಮ್ಮ ಚೊಚ್ಚಲ ಟಿ20 ಪಂದ್ಯವನ್ನಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರು ಬೆನ್ನುಹುರಿ ನೋವಿಗೆ ತುತ್ತಾಗಿದ್ದರಿಂದ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಪಿಚ್ ಗೆ ತಕ್ಕಂತೆ ಚೈನಾಮನ್ ಕುಲದೀಪ್ ಯಾದವ್ ಬದಲಿಗೆ ದೀಪಕ್ ಚಾಹರ್ ಹಾಗೂ ಸಿದ್ದಾರ್ಥ್ ಕೌಲ್ ಗೆ ಅವಕಾಶ ನೀಡಲಾಗಿದೆ.
ಟಾಸ್ ಗೆದ್ದು ಫೀಲ್ಡಿಂಗ್
ವಿರಾಟ್ ಕೊಹ್ಲಿ ಅವರು ಟಾಸ್ ಗೆದ್ದ ಬಳಿಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಚರ್ಚೆ ನಡೆದಿದೆ. ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂಬ ಕೂಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications