For Quick Alerts
ALLOW NOTIFICATIONS  
For Daily Alerts
 

3ನೇ ಟೆಸ್ಟ್‌ ಪಂದ್ಯ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು

England vs India, 3rd Test Match, England won by an innings and 76 runs

ಲೀಡ್ಸ್‌: ಲೀಡ್ಸ್‌ನ ಹೆಡಿಂಗ್ಲಿ ಸ್ಟೇಡಿಯಂನಲ್ಲಿ ಶನಿವಾರ (ಆಗಸ್ಟ್ 28) ಮುಕ್ತಾಯಗೊಂಡಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಇನ್ನಿಂಗ್ಸ್‌ ಸಹಿತ 76 ರನ್ ಜಯ ಗಳಿಸಿದೆ. ಟೀಮ್ ಇಂಡಿಯಾದ ಕಳಪೆ ಬ್ಯಾಟಿಂಗ್‌ನಿಂದಾಗಿ ಭಾರತ ಹೀನಾಯ ಸೋಲನುಭವಿಸಿದೆ. ದ್ವಿತೀಯ ಪಂದ್ಯದ ಸೋಲಿಗೆ ಜೋ ರೂಟ್ ಪಡೆ ಸರಿಯಾಗೇ ತಿರುಗೇಟು ನೀಡಿದೆ. ಈ ಪಂದ್ಯಗೊಂದಿಗೆ ಐದು ಪಂದ್ಯಗಳ ಟೆಸ್ಟ್‌ ಸರಣಿ 1-1ರಿಂದ ಸಮಬಲಗೊಂಡಿದೆ.

ಟೀಮ್ ಇಂಡಿಯಾದ ಆರಂಭಿಕ ಇನ್ನಿಂಗ್ಸ್‌ ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್ ವಿಭಾಗದ ವೈಫಲ್ಯ ಎದ್ದು ತೋರಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಸ್ವಲ್ಪ ರನ್ ಗಳಿಸಿ ಸ್ಪರ್ಧೆ ನೀಡುವ ಮುನ್ಸೂಚನೆ ನೀಡಿತ್ತಾದರೂ ಆಂಗ್ಲ ಬೌಲರ್‌ಗಳ ಮಾರಕ ಬೌಲಿಂಗ್‌ ದಾಳಿಗೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತತ್ತರಿಸಿ ಹೋದರು.

ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ ಕೆಟ್ಟ ಬ್ಯಾಟಿಂಗ್

ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ ಕೆಟ್ಟ ಬ್ಯಾಟಿಂಗ್

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಯಾವುದೇ ಬ್ಯಾಟ್ಸ್‌ಮನ್‌ 20ಕ್ಕೂ ಅಧಿಕ ರನ್ ಗಳಿಸದೆ ದುರ್ಬಲ ಬ್ಯಾಟಿಂಗ್‌ಗೆ ಸಾಕ್ಷಿ ಹೇಳಿತ್ತು. ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ ಗಳಿಸಿದ್ದೆಂದರೆ ರೋಹಿತ್ ಶರ್ಮಾ 19, ಅಜಿಂಕ್ಯ ರಹಾನೆ 18. ಉಳಿದಂತೆ ಎಲ್ಲರೂ 10ರೊಳಗಿನ ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ದರು. ರೋಹಿತ್ ಶರ್ಮಾ 19, ಕೆಎಲ್ ರಾಹುಲ್ 0, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ಅಜಿಂಕ್ಯ ರಹಾನೆ 18, ರಿಷಭ್ ಪಂತ್ 2, ರವೀಂದ್ರ ಜಡೇಜಾ 4, ಮೊಹಮ್ಮದ್ ಶಮಿ 0, ಇಶಾಂತ್ ಶರ್ಮಾ 8, ಜಸ್ಪ್ರೀತ್ ಬೂಮ್ರಾ ೦, ಮೊಹಮ್ಮದ್ ಸಿರಾಜ್ 3 ರನ್‌ನೊಂದಿಗೆ ಭಾರತ 40.4 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 78 ರನ್ ಗಳಿಸಿತ್ತು. ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳಾದ ಜೇಮ್ಸ್ ಆ್ಯಂಡರ್ಸನ್ 6 ರನ್‌ಗೆ 3, ಕ್ರೆಗ್ ಓವರ್‌ಟನ್ 14 ರನ್‌ಗೆ 3, ಆಲಿ ರಾಬಿನ್ಸನ್ 2, ಸ್ಯಾಮ್ ಕರನ್ 2 ವಿಕೆಟ್‌ನೊಂದಿಗೆ ಪಾರಮ್ಯ ಮೆರೆದರು.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಭರ್ಜರಿ ಮುನ್ನಡೆ

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಭರ್ಜರಿ ಮುನ್ನಡೆ

ಆರಂಭಿಕ ಇನ್ನಿಂಗ್ಸ್‌ ನಲ್ಲಿ ಇಂಗ್ಲೆಂಡ್ ಭರ್ಜರಿ ಮುನ್ನಡೆ ಗಳಿಸಿತ್ತು. ರೋರಿ ಬರ್ನ್ಸ್ 61, ಹಸೀಬ್ ಹಮೀದ್ 68, ಡೇವಿಡ್ ಮಲನ್ 70, ಜೋ ರೂಟ್ 121, ಜಾನಿ ಬೈರ್‌ಸ್ಟೊ 29, ಜೋಸ್ ಬಟ್ಲರ್ 7, ಮೊಯೀನ್ ಅಲಿ 8, ಸ್ಯಾಮ್ ಕರನ್ 15, ಕ್ರೇಗ್ ಓವರ್‌ಟನ್ 32 ರನ್‌ ನೊಂದಿಗೆ 132.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 432 ರನ್ ಬಾರಿಸಿತ್ತು. ಎರಡೂ ತಂಡಗಳ ಆರಂಭಿಕ ಇನ್ನಿಂಗ್ಸ್ ಮುಗಿಯುವಾಗ ಇಂಗ್ಲೆಂಡ್ 354 ರನ್ ಮುನ್ನಡೆ ಸಾಧಿಸಿತ್ತು. ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ಭಾರತದ ಜಸ್‌ಪ್ರೀತ್‌ ಬೂಮ್ರಾ 2, ಮೊಹಮ್ಮದ್ ಶಮಿ 4, ಮೊಹಮ್ಮದ್ ಸಿರಾಜ್ 2, ರವೀಂದ್ರ ಜಡೇಜಾ 2 ವಿಕೆಟ್ ಪಡೆದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಇಷ್ಟು ಹೆಚ್ಚು ಮುನ್ನಡೆ ಪಡೆದುಕೊಂಡಿದ್ದು ಅಪರೂಪ. ಹೀಗಾಗಿ ಈ ಮುನ್ನಡೆಯ ರನ್, ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಪಡೆದುಕೊಂಡ ಐದನೇ ಅತೀ ಹೆಚ್ಚಿನ ಮುನ್ನಡೆಯ ರನ್ ಆಗಿ ಗುರುತಿಸಿಕೊಂಡಿತ್ತು. ಅಷ್ಟೇ ಅಲ್ಲ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಮುನ್ನಡೆ ಪಡೆದ ಬಹುತೇಕ ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದೆ.

ಭಾರತದ ದ್ವಿತೀಯ ಇನ್ನಿಂಗ್ಸ್‌ ಸ್ಕೋರ್‌

ಭಾರತದ ದ್ವಿತೀಯ ಇನ್ನಿಂಗ್ಸ್‌ ಸ್ಕೋರ್‌

ಆರಂಭಿಕ ಇನ್ನಿಂಗ್ಸ್‌ನಲ್ಲಿ ನೀರಸ ಬ್ಯಾಟಿಂಗ್ ತೋರಿದ್ದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸ್ವಲ್ಪ ಚೇತರಿಕೆಯ ಬ್ಯಾಟಿಂಗ್ ತೋರಿಸಿತ್ತು. ರೋಹಿತ್ ಶರ್ಮಾ 59, ಕೆಎಲ್ ರಾಹುಲ್ 8, ಚೇತೇಶ್ವರ ಪೂಜಾರ 91, ವಿರಾಟ್ ಕೊಹ್ಲಿ 55, ಅಜಿಂಕ್ಯ ರಹಾನೆ 10, ರಿಷಭ್ ಪಂತ್ 1, ರವೀಂದ್ರ ಜಡೇಜಾ 30, ಮೊಹಮ್ಮದ್ ಶಮಿ 6, ಇಶಾಂತ್ ಶರ್ಮಾ 2, ಜಸ್ಪ್ರೀತ್ ಬೂಮ್ರಾ 1 ರನ್‌ನೊಂದಿಗೆ ಭಾರತ 99.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 278 ರನ್ ಗಳಿಸಿತು. ಭಾರತದ ದ್ವಿತೀಯ ಇನ್ನಿಂಗ್ಸ್‌ ವೇಳೆ ಆಲಿ ರಾಬಿನ್ಸನ್ ಮತ್ತು ಕ್ರೇಗ್ ಓವರ್‌ಟನ್ ಮಾರಕ ಬೌಲಿಂಗ್ ನಡೆಸಿದ್ದು ಕಂಡು ಬಂತು. ಜೇಮ್ಸ್ ಆ್ಯಂಡರ್ಸನ್ 1, ಆಲಿ ರಾಬಿನ್ಸನ್ 5, ಕ್ರೇಗ್ ಓವರ್‌ಟನ್ 3, ಮೊಯೀನ್ ಅಲಿ 1 ವಿಕೆಟ್‌ ಪಡೆದರು. ನಾಲ್ಕನೇ ಟೆಸ್ಟ್‌ ಪಂದ್ಯ ಸೆಪ್ಟೆಂಬರ್‌ 2ರಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿವೆ. ಈ ಪಂದ್ಯಕ್ಕಾದರೂ ಭಾರತ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎನ್ನುವ ಮಾತುಗಳು ಕ್ರಿಕೆಟ್ ವಲಯದಿಂದ ಕೇಳಿ ಬರುತ್ತಿವೆ.

ಅತಿ ಹೆಚ್ಚು ನೋಬಾಲ್ ಎಸೆದು ಕೆಂಗಣ್ಣಿಗೆ ಗುರಿಯಾದ ಟೀಮ್ ಇಂಡಿಯಾ ಬೌಲರ್ಸ್ | Oneindia Kannada
ಭಾರತ ವಿರುದ್ಧ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದುಕೊಂಡ ದಾಖಲೆಗಳು

ಭಾರತ ವಿರುದ್ಧ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದುಕೊಂಡ ದಾಖಲೆಗಳು

(ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಆರಂಭಿಕ ಇನ್ನಿಂಗ್ಸ್‌ನಲ್ಲಿ ಪಡೆದುಕೊಂಡ ಐದನೇ ದೊಡ್ಡ ಸಂಖ್ಯೆಯ ಮುನ್ನಡೆಯಾಗಿ ಇಂಗ್ಲೆಂಡ್ ಸಾಧನೆ ದಾಖಲೆ ಪಟ್ಟಿ ಸೇರಿದೆ. ಅಂದ್ಹಾಗೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆ ಪಡೆದಿದ್ದಾಗ ಹೆಚ್ಚಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದೆ)
* 486 ಎಜ್‌ಬಾಸ್ಟನ್ 2011 (ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿತ್ತು)
* 380 ಚೆನ್ನೈ 1984/85 (ಇಂಗ್ಲೆಂಡ್‌ಗೆ ಜಯ)
* 386 ಲೀಡ್ಸ್ 1967 (ಇಂಗ್ಲೆಂಡ್‌ಗೆ ಜಯ)
* 368 ಓಲ್ಡ್ ಟ್ರಾಫರ್ಡ್ (ಪಂದ್ಯ ಡ್ರಾ)
* 354 ಲೀಡ್ಸ್ 2021 (ಇಂಗ್ಲೆಂಡ್‌ಗೆ ಇನ್ನಿಂಗ್ಸ್‌ ಸಹಿತ ಜಯ)

Story first published: Saturday, August 28, 2021, 18:33 [IST]
Other articles published on Aug 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+