Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪೂರ್ಣ ಪ್ರಮಾಣದ ಪ್ರೇಕ್ಷಕರ ಮಧ್ಯೆ ನಡೆಯಲಿದೆ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ

England vs India: five-match Test series will be held in front of capacity crowd

ಭಾರತ ಹಾಗೂ ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಮುಂದಿನ ತಿಂಗಳು ಆರಂಭವಾಗಲಿದೆ. ಆಗಸ್ಟ್ 4ರಿಂದ ಆರಂಭವಾಗುವ ಈ ಸರಣಿಯನ್ನು ಪೂರ್ಣ ಪ್ರಮಾಣದ ಪ್ರೇಕ್ಷಕರ ಉಪಸ್ಥಿತಿಯಲ್ಲಿ ನಡೆಸಸಲು ವೇದಿಕೆ ಸಜ್ಜಾಗಿದೆ. ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಕೊರೊನಾ ಸಂಬಂಧಿತ ನಿರ್ಬಂಧಗಳನ್ನು ತೆಗೆಯುವುದಾಗಿ ಮಂಗಳವಾರ ಪ್ರಕಟಿಸಿದರು.

ಇತ್ತೀಚೆಗಷ್ಟೇ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಇಂಗ್ಲೆಂಡ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯಕ್ಕೆ ಗರಿಷ್ಟ 4,000 ಪ್ರೇಕ್ಷಕರಿಗೆ ಮಾತ್ರವೇ ಅವಕಾಶವನ್ನು ನೀಡಲಾಗಿತ್ತು. ಈ ಪಂದ್ಯವನ್ನು ಭಾರತ 8 ವಿಕೆಟ್‌ಗಳಿಂದ ಸೋಲುಕಂಡಿತ್ತು.

ಸದ್ಯ ಟೀಮ್ ಇಂಡಿಯಾ ಆಟಗಾರರಿಗೆ ವಿರಾಮವನ್ನು ನೀಡಲಾಗಿದ್ದು ಕುಟುಂಬ ಸಹಿತ ಯುಕೆ ಸುತ್ತಾಟವನ್ನು ನಡೆಸುತ್ತಿದ್ದಾರೆ ಭಾರತೀಯ ಕ್ರಿಕೆಟಿಗರು. ಜುಲೈ 14ರಿಂದ ಮತ್ತೆ ತಂಡ ಒಗ್ಗೂಡಲಿದ್ದು ಮುಂದಿನ ಸರಣಿಗೆ ಸಿದ್ಧತೆಯನ್ನು ಆರಂಭಿಸಲಿದೆ.

ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದ್ದು ಅದಕ್ಕೂ ಮುನ್ನ ಭಾರತ ಅಭ್ಯಾಸಪಂದ್ಯವೊಂದರಲ್ಲಿ ಭಾಗಿಯಾಗಲಿದೆ. 'ಸೆಲೆಕ್ಟ್ ಕೌಂಟಿ XI' ವಿರುದ್ಧ ವಿರಾಟ್ ಕೊಹ್ಲಿ ಬಳಗ ಅಭ್ಯಾಸ ಪಂದ್ಯವನ್ನು ಆಡಲಿದೆ. ಮೂರು ದಿನಗಳ ಈ ಈ ಅಭ್ಯಾಸ ಪಂದ್ಯ ಜುಲೈ 20-22ರ ವರೆಗೆ ನಡೆಯುವ ಸಾಧ್ಯತೆಯಿದೆ.

ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಭಾರತ ತಂಡ ಸರಿಯಾದ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ ಎಂಬ ಮಾತುಗಳನ್ನು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸೇರಿದಂತೆ ಸಾಕಷ್ಟು ಕ್ರಿಕೆಟಿಗರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರತಕ್ಕಿಂತ ಒಣದು ತಿಂಗಳು ಮುನ್ನವೇ ಇಂಗ್ಲೆಂಡ್‌ಗೆ ತೆರಳಿ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿತ್ತು. ಇದು ಇಂಗ್ಲೆಂಡ್ ನೆಲದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡದ ಮೇಲುಗೈಗೆ ಕಾರಣವಾಯಿತು ಎಂಬ ವಿಶ್ಲೇಷಣೆಗಳು ಕೂಡ ನಡೆಯುತ್ತಿದೆ.

ದ್ರಾವಿಡ್ ಸರ್ ಜೊತೆ ಸಿಕ್ಕಿರುವ ಅವಕಾಶವನ್ನು ಬಾಚಿಕೊಳ್ತೀನಿ ಎಂದ ಪೃಥ್ವಿ ಶಾ | Oneindia Kannada

Story first published: Tuesday, July 6, 2021, 9:12 [IST]
Other articles published on Jul 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+