For Quick Alerts
ALLOW NOTIFICATIONS  
For Daily Alerts
 

564 ದಿನಗಳ ಶಾಪ ಕಳಚಿದ ಆನಂದವಿದೆ: ಕೆಎಲ್ ರಾಹುಲ್

By Mahesh
England Vs India: Lokesh Rahul relieved to break 564-day jinx with sensational century

ಕಾರ್ಡಿಫ್, ಜುಲೈ 06: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದರ ಬಗ್ಗೆ ಮಾತನಾಡಿ, 564 ದಿನಗಳ ಕರಾಳ ನೆನಪು ಕಾಯುವಿಕೆ ನಂತರ 100ರನ್ ಗಡಿ ದಾಟಿದ್ದರ ಬಗ್ಗೆ ಖುಷಿಯಿದೆ ಎಂದಿದ್ದಾರೆ.

ಇಂಗ್ಲೆಂಡ್ ಹಾಗೂ ಭಾರತ ನಡುವಿನ ಟಿ20ಐ ಸರಣಿಯ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಕೆಎಲ್ ರಾಹುಲ್ ಅವರು ಮೊದಲ ಪಂದ್ಯದಲ್ಲಿ 54 ಎಸೆತಗಳಲ್ಲಿ ಭರ್ಜರಿ 101 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ಸರಣಿಯಲ್ಲಿ ಭಾರತ 1-0 ಮುನ್ನಡೆ ಕಳಿಸಲು ಸಾಧ್ಯವಾಯಿತು.

ಕಳೆದ ಮಂಗಳವಾರಕ್ಕೂ ಮುನ್ನ ರಾಹುಲ್ ಅವರು 564ದಿನಗಳ ಕಾಲ 100ರನ್ ಗಡಿ ದಾಟಲಾರದೆ ಹೆಣಗಿದ್ದರು.2016ರ ಡಿಸೆಂಬರ್ 16ರಂದು ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ 199ರನ್ ಗಳಿಸಿದ ಬಳಿಕ ಮತ್ತೊಮ್ಮೆ ಶತಕ ಗಳಿಸಲು ಇಷ್ಟು ಕಾಲ ಬೇಕಾಯಿತು.

ಆದರೆ, ಈ ಅವಧಿಯಲ್ಲಿ 10 ಟೆಸ್ಟ್ ಅರ್ಧ ಶತಕ, ಒಂದು ಏಕದಿನ ಅಂತಾರಾಷ್ಟ್ರೀಯ ಅರ್ಧಶತಕ, ಮೂರು ಟಿ20ಐ ಅರ್ಧಶತಕ ಗಳಿಸಿದರು. ಇದಲ್ಲದೆ 2017-18ರ ರಣಜಿ ಋತುವಿನಲ್ಲಿ ಕರ್ನಾಟಕ ಪರ 2 ಅರ್ಧಶತಕ, ಐಪಿಎಲ್ 2018ರಲ್ಲಿ ಕಿಂಗ್ಸ್ XI ಪಂಜಾಬ್ ಪರ 6 ಅರ್ಧಶತಕ ಬಾರಿಸಿದ್ದರು. ಅರ್ಧಶತಕಗಳನ್ನು ಶತಕವಾಗಿ ಪರಿವರ್ತಿಸಲಾಗದೆ ಇಂಗ್ಲೆಂಡಿನ ಜೋ ರೂಟ್ ನಂತಾಗಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಅನೇಕ ಮಂದಿ ಕಿಚಾಯಿಸಿದ್ದರು.

ಕೊನೆಗೂ, ತಮ್ಮ ಮೇಲಿದ್ದ ಶಾಪವನ್ನು ಮ್ಯಾಂಚೆಸ್ಟರ್ ನಲ್ಲಿ ರಾಹುಲ್ ಕಳೆದುಕೊಂಡಿದ್ದಾರೆ. 'ನಿಜ ಹೇಳಬೇಕೆಂದರೆ ನನಗೂ ನಂಬಲು ಆಗಿರಲಿಲ್ಲ ಇಷ್ಟು ದಿನ(564 ದಿನಗಳು) ಮತ್ತೊಮ್ಮೆ ಶತಕ ಬಾರಿಸಲು ತೆಗೆದುಕೊಂಡಿದ್ದೇಕೆ ಎಂದು, ಅರ್ಧಶತಕ ಗಳಿಸಿ ನಂತರ ಔಟಾಗುತ್ತಿದೆ. ಅನೇಕ ಬಾರಿ ಇದರಿಂದ ಕಿರಿಕಿರಿ ಅನುಭವಿಸಿದ್ದೆ, ಈ ಬಗ್ಗೆ ಯೋಚಿಸಿದರೆ ಇನ್ನಷ್ಟು ತಲೆ ಕೆಡುತ್ತಿತ್ತು ಎಂದು ರಾಹುಲ್ ಅವರು ಹೇಳಿಕೊಂಡಿದ್ದಾರೆ.

ಟಿ20ಐ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಆಗದೆ ಹೆಣಗಾಡುತ್ತಿದ್ದ ರಾಹುಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡುವಂತೆ ಮಾಡಿದ ನಾಯಕ ವಿರಾಟ್ ಕೊಹ್ಲಿ ಅವರ ಯೋಜನೆ ಫಲಕಾರಿಯಾಯಿತು. 2019ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಬದಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಕೆಎಲ್ ರಾಹುಲ್ ರನ್ನು ತಂಡದಲ್ಲಿ ಖಾಯಂ ಆಗಿ ಉಳಿಸಿಕೊಳ್ಳಲು ಇದು ಸಹಕಾರಿಯಾಗುವ ಲಕ್ಷಣಗಳು ಕಂಡು ಬಂದಿದೆ.

ಆದರೆ, ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಬಗ್ಗೆ ತಂಡದ ಎಲ್ಲಾ ಸದಸ್ಯರಿಗೂ ಮುಂಚಿತವಾಗಿ ತಿಳಿಸಲಾಗಿದೆ, ಒಳ್ಳೆ ಆರಂಭ ಪಡೆದುಕೊಂಡರೆ, ಮೂರನೇ ಕ್ರಮಾಂಕದಲ್ಲಿ ಧೋನಿ ಅಥವಾ ಹಾರ್ದಿಕ್ ಪಾಂಡ್ಯ ಆಡಲು ಕಳಿಸಬಹುದು. ಐಪಿಎಲ್ ನಲ್ಲಿ ಆಡಿದ ಅನುಭವ ಇಲ್ಲಿ ಉಪಯೋಗಕ್ಕೆ ಬರುತ್ತಿದೆ ಎಂದರು.

Story first published: Friday, July 6, 2018, 17:32 [IST]
Other articles published on Jul 6, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+