For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್, ಓವಲ್ ಟೆಸ್ಟ್, 4ನೇ ದಿನ, Live ಸ್ಕೋರ್

England vs India, Oval Test Match, fourth Day, Live Score

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ದಿನದಾಟ ನಡೆಯುತ್ತಿದೆ. ಮೂರನೇ ದಿನ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ಉತ್ತಮ ಮೊತ್ತಗಳಿಸುವ ಸೂಚನೆ ನೀಡಿತ್ತು. ಅನುಭವಿ ರೋಹಿತ್ ಶರ್ಮಾ ಭರ್ಜರಿ ಶತಕವನ್ನು ಗಳಿಸಿದರೆ ಚೇತೇಶ್ವರ್ ಪೂಜಾರ ಕೂಡ ಅತ್ಯುತ್ತಮ ಆಟದ ಮೂಲಕ ಅರ್ಧ ಶತಕದ ಕೊಡುಗೆಯನ್ನು ನೀಡಿದ್ದರು. ಈ ಮೂಲಕ ಭಾರತ 99 ರನ್‌ಗಳ ಹಿನ್ನಡೆಯನ್ನು ಹಿಂದಿಕ್ಕಿ ಮುನ್ನಡೆಯನ್ನು ಪಡೆಯುತ್ತಾ ಸಾಗಿದೆ.

ಮೂರನೇ ದಿನದಾಟವನ್ನು ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಆರಂಭಿಸಿದರು. ರವೀಂದ್ರ ಜಡೇಜಾ 17 ರನ್‌ಗಳ ಕೊಡುಗೆಯನ್ನು ನೀಡಿ ಔಟಾಗಿ ನಿರ್ಗನಿಸಿದರು. ನಂತರ ಬಂದ ಉಪನಾಯಕ ಅಜಿಂಕ್ಯ ರಹಾನೆ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಬಳಿಕ ಸ್ವತಃ ನಾಯಕ ವಿರಾಟ್ ಕೊಹ್ಲಿ ಕೂಡ 44 ರನ್‌ಗಳನ್ನು ಗಳಿಸಿ ಔಟಾಗಿ ನಿರ್ಗಮಿಸಿದ್ದಾರೆ. ಆರನೇ ವಿಕೆಟ್‌ಗೆ ರಿಷಬ್ ಪಂತ್ ಹಾಗೂ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ನಡೆಸುತ್ತಿದ್ದು ಭೋಜನ ವಿರಾಮದ ವೇಳೆಗೆ ಮತ್ತೊಂದು ಉತ್ತಮ ಜೊತೆಯಾಟವನ್ನು ನೀಡುವ ಭರವಸೆ ಮೂಡಿಸಿದ್ದಾರೆ.

Live ಸ್ಕೋರ್‌ಪಟ್ಟಿ ಹೀಗಿದೆ:

1
49715

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 11, ಚೇತೇಶ್ವರ ಪೂಜಾರ 4, ಕೆಎಲ್ ರಾಹುಲ್ 17, ವಿರಾಟ್ ಕೊಹ್ಲಿ 50, ಅಜಿಂಕ್ಯ ರಹಾನೆ 14, ರಿಷಭ್ ಪಂತ್ 9, ರವೀಂದ್ರ ಜಡೇಜಾ 10, ಶಾರ್ದೂಲ್ ಠಾಕೂರ್ 57, ಉಮೇಶ್ ಯಾದವ್ 10, ಮೊಹಮ್ಮದ್ ಸಿರಾಜ್ 1 ರನ್‌ನೊಂದಿಗೆ 61.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 191 ರನ್ ಗಳಿಸಿತ್ತು.

ಮೊದಲ ಇನ್ನಿಂಗ್ಸ್‌ಗೆ ಇಳಿದ ಇಂಗ್ಲೆಂಡ್, ರೋರಿ ಬರ್ನ್ಸ್ 5, ಹಸೀಬ್ ಹಮೀದ್ 0, ಡೇವಿಡ್ ಮಲನ್ 31, ಆಲಿ ಪೋಪ್ 81, ಜೋ ರೂಟ್ 21, ಜಾನಿ ಬೈರ್‌ಸ್ಟೋ 37, ಮೊಯೀನ್ ಅಲಿ 35, ಕ್ರಿಸ್ ವೋಕ್ಸ್ 50, ಕ್ರೇಗ್ ಓವರ್‌ಟನ್ 1, ಆಲಿ ರಾಬಿನ್ಸನ್ 5, ಜೇಮ್ಸ್ ಆಂಡರ್ಸನ್ 1 ರನ್‌ನೊಂದಿಗೆ 84 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 290 ರನ್ ಗಳಿಸಿ 99 ರನ್ ಮುನ್ನಡೆ ಸಾಧಿಸಿತ್ತು.

ಭಾರತದ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 1, ಆಲಿ ರಾಬಿನ್ಸನ್ 3, ಕ್ರಿಸ್ ವೋಕ್ಸ್ 4, ಕ್ರೇಗ್ ಓವರ್‌ಟನ್ 1 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಉಮೇಶ್ ಯಾದವ್ 3, ಜಸ್‌ಪ್ರೀತ್‌ ಬೂಮ್ರಾ 2, ಶಾರ್ದೂಲ್ ಠಾಕೂರ್ 1, ಮೊಹಮ್ಮದ್ ಸಿರಾಜ್ 1 ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಆರಂಭಿಕ ಆಟಗಾರ ರೋಹಿತ್ ಶರ್ಮಾ 127, ಕೆಎಲ್ ರಾಹುಲ್ 46, ಚೇರೇಶ್ವರ್ ಪೂಜಾರ 61, ವಿರಾಟ್ ಕೊಹ್ಲಿ 44, ರವೀಂದ್ರ ಜಡೇಜಾ 17, ಅಜಿಂಕ್ಯಾ ರಹಾನೆ 0 ರನ್‌ಗಳಿಸಿ ಔಟಾಗಿದ್ದಾರೆ. ರಿಷಭ್ ಪಂತ್ ಹಾಗೂ ಶಾರ್ದೂಲ್ ಠಾಕೂರ್ 50 ರನ್‌ಗಳ ಜೊತೆಯಾಟವನ್ನು ಆಡಿ ಮುನ್ನುಗ್ಗುತ್ತಿದ್ದಾರೆ.

ಇತ್ತಂಡಗಳ ಆಡುವ ಬಳಗ
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ಡಬ್ಲ್ಯೂ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಕೊಹ್ಲಿಯ ಈ ನಿರ್ಧಾರದಿಂದ 4ನೇ ಟೆಸ್ಟ್ ನಲ್ಲಿ ಭಾರತ ಸೋಲೋದು ಗ್ಯಾರೆಂಟಿ | Oneindia Kannada

ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್ (ಸಿ), ಆಲ್ಲಿ ಪೋಪ್, ಜಾನಿ ಬೈರ್‌ಸ್ಟೊ (ಡಬ್ಲ್ಯೂ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರೇಗ್ ಓವರ್‌ಟನ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್.

Story first published: Sunday, September 5, 2021, 18:42 [IST]
Other articles published on Sep 5, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+