4ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ಸಂಭಾವ್ಯ XI

ಸೌಥಾಂಪ್ಟನ್, ಆಗಸ್ಟ್ 29: ಅತಿಥೇಯ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿಯಾಗಿ ಜಯಭೇರಿ ಬಾರಿಸಿರುವ ಟೀಂ ಇಂಡಿಯಾ, ಆತ್ಮವಿಶ್ವಾಸದಿಂದ ಸೌಂಥಾಪ್ಟನ್ ಟೆಸ್ಟ್ ಪಂದ್ಯಕ್ಕೆ ಅಣಿಯಾಗಿದೆ. ಐದು ಟೆಸ್ಟ್ ಪಂದ್ಯಗಳ ಸರಣಿ 2-1ಯಲ್ಲಿದ್ದು, ಸರಣಿ ಸಮ ಮಾಡಿಕೊಳ್ಳಲು ಪ್ರವಾಸಿ ತಂಡ ಉತ್ಸುಕವಾಗಿದೆ. ಆದರೆ, ಕಳೆದ ಪಂದ್ಯದ ನೋವಿನ ಆಘಾತ ಮರೆತು ಪುಟಿದೇಳಲು ಆಂಗ್ಲರ ಪಡೆ ಸಜ್ಜಾಗಿದೆ.
ಟೆಸ್ಟ್ ಸರಣಿಯಲ್ಲಿ ತಂಡದ ಆಯ್ಕೆ ವಿಷಯದಲ್ಲಿ ಭಾರಿ ಚರ್ಚೆ ನಡೆಯುತ್ತಲೇ ಇದೆ. ಆರಂಭಿಕ ಆಟಗಾರರು ಸೇರಿದಂತೆ ಬೌಲಿಂಗ್ ವಿಭಾಗದಲ್ಲೂ ಬದಲಾವಣೆಗಳಾಗಿವೆ. ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಕೆಲ ಬದಲಾವಣೆಗಳು ನಿರೀಕ್ಷಿತವಾಗಿದೆ.
ಗಾಯಾಳುವಾಗಿರುವ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಲಭ್ಯತೆ ಬಗ್ಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ.
ನಾಲ್ಕನೇ ಟೆಸ್ಟ್: ಹುಮ್ಮಸ್ಸಿನಲ್ಲಿರುವ ಭಾರತಕ್ಕೆ ಮತ್ತೊಂದು ಪರೀಕ್ಷೆ
ಅಶ್ವಿನ್ ಬದಲಿಗೆ ರವೀಂದ್ರ ಜಡೇಜ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಭುವನೇಶ್ವರ್ ಕುಮಾರ್ ಅವರು ಫಿಟ್ ಆಗಿದ್ದರೂ ತಂಡಕ್ಕೆ ಸೇರಲು ಆಗುತ್ತಿಲ್ಲ, ಕರುಣ್ ನಾಯರ್, ಪೃಥ್ವಿ ಶಾ ಹಾಗೂ ಹನುಮ ವಿಹಾರಿಗೆ ಅವಕಾಶ ಸಿಗುವುದೆ ಕಾದು ನೋಡಬೇಕಿದೆ.
ಸೌಂಥಾಪ್ಟಾನ್ ನಲ್ಲಿ ಆಗಸ್ಟ್ 30ರಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಸಂಭಾವ್ಯ ತಂಡ ಇಂತಿದೆ :

ಆರಂಭಿಕ ಆಟಗಾರರು
ಮುರಳಿ ವಿಜಯ್ ತಂಡದಲ್ಲಿಲ್ಲದ ಕಾರಣ, ಆರಂಭಿಕ ಆಟಗಾರರಾಗಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಅವರು ಕಣಕ್ಕಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲಿ ಮೊದಲ ವಿಕೆಟ್ ಗೆ ಎಚ್ಚರಿಕೆ ಜೊತೆಯಾಟ ಸಾಧಿಸಿದರು. ಆದರೆ, ಇಬ್ಬರೂ ಆಟಗಾರರು ಆರಂಭ ಪಡೆದರೂ ಇನ್ನಿಂಗ್ಸ್ ಕಟ್ಟಿ ಬೆಳೆಸುವಲ್ಲಿ ವಿಫಲರಾಗುತ್ತಿದ್ದಾರೆ. ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ಸಾಧಿಸಿದರೆ ಭಾರತಕ್ಕೆ ಪಂದ್ಯದ ಮೇಲೆ ಹಿಡಿತ ಪಡೆಯಲು ನೆರವಾಗುತ್ತದೆ.

ಮಧ್ಯಮ ಕ್ರಮಾಂಕದಲ್ಲಿ
ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರಿಷಬ್ ಪಂತ್ ಆಡುವ ಸಾಧ್ಯತೆಯಿದೆ. ಪೂಜರಾ ಅವರು ಉತ್ತಮ ಜೊತೆಯಾಟ ಸಾಧಿಸಿದ್ದು, ಮೂರನೇ ಕ್ರಮಾಂಕಕ್ಕೆ ಬೆಲೆ ತರುವ ನಿರೀಕ್ಷೆಯಿದೆ. ಕೊಹ್ಲಿ ಏಕಾಂಗಿಯಾಗಿ ಮತ್ತೊಮ್ಮೆ ಹೋರಾಟಕ್ಕಿಳಿಯುವ ಸಂದರ್ಭ ಬರಬಹುದು. ರಹಾನೆ ತಮ್ಮ ಲಯ ಕಾಯ್ದುಕೊಳ್ಳಬೇಕಿದೆ. ರಿಷಬ್ ಪಂತ್ ಅವರು ಟೆಸ್ಟ್ ಕ್ರಿಕೆಟ್ ಉತ್ತಮ ಆರಂಭ ಪಡೆದಿದ್ದು, ಇನ್ನೂ ಕಲಿಕೆಯ ದಿನಗಳಾಗಿವೆ.

ಆಲ್ ರೌಂಡರ್ಸ್
ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಅವರು ಮಾತ್ರ ಆಲ್ ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಆರ್ ಅಶ್ವಿನ್ ಅವರ ಬದಲಿಗೆ ರವೀಂದ್ರ ಜಡೇಜ ಅವರನ್ನು ಕಣಕ್ಕಿಳಿಸಿ, ಬ್ಯಾಟಿಂಗ್ ಇನ್ನಷ್ಟು ಬಲ ಪಡಿಸುವ ಸಾಧ್ಯತೆಯಿದೆ. ಆದರೆ, ಅಶ್ವಿನ್ ಅವರ ಅನುಪಸ್ಥಿತಿ, ನಿಜಕ್ಕೂ ಕಾಡಲಿದೆ.

ಬೌಲಿಂಗ್ ವಿಭಾಗ
ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಜಸ್ ಪ್ರೀತ್ ಬೂಮ್ರಾ ಅವರಿರುವ ಬೌಲಿಂಗ್ ಪಡೆಗೆ ಭುವನೇಶ್ವರ್ ಕುಮಾರ್ ಅನುಪಸ್ಥಿತಿ ಕಾಡಲಿದೆ. ಆದರೆ, ಜಡೇಜ ಅವರು ತಂಡ ಸೇರಿದರೆ ಹೆಚ್ಚಿನ ಬಲ ಸಿಗಲಿದೆ ಹೆಚ್ಚುವರಿ ಬ್ಯಾಟ್ಸ್ ಮನ್ ಬೇಕೆಂದು ಕರುಣ್, ಪೃಥ್ವಿ ಅಥವಾ ಹನುಮ ವಿಹಾರಿ ಪೈಕಿ ಒಬ್ಬರು ತಂಡಕ್ಕೆ ಆಯ್ಕೆಯಾದರೆ, ಇಶಾಂತ್ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications