ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕಲು ಬಲಾಢ್ಯ ಅಸ್ತ್ರ ಪ್ರಯೋಗ ಸಾಧ್ಯತೆ

England vs India: team india likely to face england with 3 spinners

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ಗೆ ಭಾರರ ರಣತಂತ್ರಗಳನ್ನು ಹೆಣೆಯುತ್ತಿದೆ. ಭಾರತದಲ್ಲಿ ಈ ಸರಣಿ ನಡೆಯುತ್ತಿರುವ ಕಾರಣ ಈಗ ಸ್ಪಿನ್ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ. ಆಸ್ಟ್ರೇಲಿಯಾದಲ್ಲಿ ವೇಗದ ಬೌಲಿಂಗ್ ವಿಭಾಗದ ಯಶಸ್ಸಿನ ನಂತರ ತವರಿನಲ್ಲಿ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮಂಗಳವಾರ ಚೆನ್ನೈನಲ್ಲಿ ಮೊದಲ ಬಾರಿಗೆ ಅಭ್ಯಾಸಕ್ಕಿಳಿದಾಗ ಪಿಚ್ ಗಮನಿಸಿದ ಬಳಿಕ ಟೀಮ್ ಇಂಡಿಯಾ ಇದು 'ಸಾಂಪ್ರದಾಯಿಕ ಚೆಪಾಕ್ ಪಿಚ್' ಎಂಬುದನ್ನು ಅರ್ಥ ಮಾಡಿಕೊಂಡಿದೆ. ಅಂದರೆ ಮೊದಲ ದಿನ ಬೌನ್ಸ್ ಎರಡು ಹಾಗೂ ಮೂರನೇ ದಿನ ಬ್ಯಾಟಿಂಗ್‌ಗೆ ಅತ್ಯಂತ ಸೂಕ್ತವಾಗಿದ್ದು ಅಂತಿಮ ಎರಡು ದಿನಗಳು ಚೆಂಡು ಹೆಚ್ಚಾಗಿ ತಿರುವು ಪಡೆದುಕೊಳ್ಳುತ್ತದೆ.

ಭಾರತ vs ಇಂಗ್ಲೆಂಡ್: ಟೆಸ್ಟ್ ಇತಿಹಾಸದಲ್ಲಿ ಸೋಲು ಗೆಲುವಿನ ಲೆಕ್ಕಾಚಾರಭಾರತ vs ಇಂಗ್ಲೆಂಡ್: ಟೆಸ್ಟ್ ಇತಿಹಾಸದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ

ಮೂವರು ಸ್ಪಿನ್ನರ್‌ಗಳೊಂದಿಗೆ ದಾಳಿ

ಮೂವರು ಸ್ಪಿನ್ನರ್‌ಗಳೊಂದಿಗೆ ದಾಳಿ

ಅನುಭವಿ ಆರ್ ಅಶ್ವಿನ್ ಪ್ರಮುಖ ಸ್ಪಿನ್ನರ್ ಆಗಿ ಕಣಕ್ಕಿಳಿದರೆ ಚೈನಾಮನ್ ಕುಲ್ದೀಪ್ ಯಾದವ್ ಎರಡನೇ ಆಯ್ಕೆಯಾಗಿ ದಾಳಿಗಳಿಯಲಿದ್ದಾರೆ. ಮೂರನೇ ಸ್ಪಿನ್ನರ್ ಆಗಿ ವಾಶಿಂಗ್ಟನ್ ಸುಂದರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇಂಗ್ಲೆಂಡ್‌ನ ಶ್ರೀಲಂಕಾ ಪ್ರವಾಸದಲ್ಲಿ ಲಂಕಾದ ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ಡೇನಿಯ ಅದ್ಭುತ ಯಶಸ್ಸು ಸಾಧಿಸಿರುವುದು ದೃಷ್ಟಿಯಲ್ಲಿಟ್ಟುಕೊಂಡು ಅಕ್ಷರ್ ಪಟೇಲ್‌ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.

ಬ್ಯಾಟಿಂಗ್ ವಿಭಾಗ

ಬ್ಯಾಟಿಂಗ್ ವಿಭಾಗ

ಇನ್ನು ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ ವಿರಾಟ್ ಕೊಹ್ಲಿ ಅಜಿಂಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿ ಸಹಜವಾಗಿಯೇ ಮೊದಲ ಆಯ್ಕೆಯಾಗಿರಲಿದ್ದಾರೆ. ಹೀಗಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಆಡುವ ಬಳಗದಲ್ಲಿ ಅವಕಾಶ ಪಡೆಯುವುದು ಕಠಿಣವೆನಿಸಿದೆ.

ಬೂಮ್ರಾಗೆ ಸಾಥ್ ಯಾರು?

ಬೂಮ್ರಾಗೆ ಸಾಥ್ ಯಾರು?

ಮತ್ತೊಂದೆಡೆ ವೇಗಿಗಳಲ್ಲಿ ಗಾಯದ ಸಮಸ್ಯೆಯಿಂದ ಹೊರ ಬಂದು ತಂಡವನ್ನು ಸೇರಿಕೊಂಡಿರುವ ಇಶಾಂತ್ ಶರ್ಮಾ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚಿರುವ ಮೊಹಮ್ಮದ್ ಸಿರಾಜ್ ಮಧ್ಯೆ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಮೂಲಗಳ ಮಾಹಿತಿಯ ಪ್ರಕಾರ ಇಶಾಂತ್ ಶರ್ಮಾಗೆ ಫಿಟ್‌ನೆಸ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದಾದರೆ ಅನುಭವದ ಹಿನ್ನೆಲೆಯಲ್ಲಿ ಇಶಾಂತ್ ಶರ್ಮಾನೆ ಜಸ್ಪ್ರಿತ್ ಬೂಮ್ರಾಗೆ ವೇಗದ ಬೌಲಿಂಗ್‌ನಲ್ಲಿ ಸಾಥ್ ನೀಡಲಿದ್ದಾರೆ.

Story first published: Thursday, February 4, 2021, 13:59 [IST]
Other articles published on Feb 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X