For Quick Alerts
ALLOW NOTIFICATIONS  
For Daily Alerts
 

ಒಂದೂ ಎಸೆತ ಕಾಣದೆ ರದ್ದಾಯಿತು ಇಂಗ್ಲೆಂಡ್ ಐರ್ಲೆಂಡ್ ಪಂದ್ಯ

ವಿಶ್ವಕಪ್‌ ಟೂರ್ನಿ ಸನಿಹದಲ್ಲಿರುವಾಗ ಸಿದ್ಧತೆಯ ಭಾಗವಾಗಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಇಂದು ಮೊದಲ ಪಂದ್ಯ ಆಯೋಜನೆಯಾಗಬೇಕಾಗಿತ್ತು. ಆದರೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಒಂದೂ ಎಸೆತವನ್ನು ಕಾಣದೆ ಪಂದ್ಯ ರದ್ದಾಗುವಂತಾಗಿದೆ.

ಇಂಗ್ಲೆಂಡ್ ಆತಿಥ್ಯದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಮೊದಲ ಪಂದ್ಯ ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಆಯೋಜನೆಯಾಗಿತ್ತು. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದ ಕಾರಣ ಪಂದ್ಯ ತಡವಚಾಗಿ ಆರಂಬವಾಗುವ ನಿರೀಕ್ಷೆಯಿತ್ತು. ಆದರೆ ಮಳೆ ಪಂದ್ಯ ನಡೆಯುವುದಕ್ಕೆ ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ.

England vs Ireland 1st ODI match abandoned due to rain without a ball being bowled

ನ್ಯೂಜಿಲೆಂಡ್ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ಅನುಭವಿ ಆಟಗಾರ ಜೋ ರೂಟ್ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ವಿಶ್ವಕಪ್‌ಗೆ ಮುಂಚಿತವಾಗಿ ಅಂಗಳದಲ್ಲಿ ಜೋ ರೂಟ್‌ಗೆ ಹೆಚ್ಚಿನ ಸಮಯವನ್ನು ನೀಡಲು ಇಂಗ್ಲೆಂಡ್ ಆಟವನ್ನು ಬಳಸಲು ಯೋಜಿಸಿತ್ತು. ಆದರೆ ಈ ಪಂದ್ಯಕ್ಕೆ ಮಳೆ ಅವಕಾಶ ನೀಡಿಲ್ಲ. ವಿಶ್ವಕಪ್‌ಗೆ ತನ್ನ ಸಿದ್ಧತೆಯ ಭಾಗವಾಗಿ ತನ್ನನ್ನು ಲಭ್ಯಗೊಳಿಸಿದ ನಂತರ ರೂಟ್ ಇಂದಿನ ಪಂದ್ಯದಲ್ಲಿ ಆಡಲು ಸಿದ್ಧರಾಗಿದ್ದರು. ಆದರೆ ಅವರು ಎರಡನೇ ಏಕದಿನ ಪಂದ್ಯಕ್ಕೆ ಲಭ್ಯವಿರುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇಂಗ್ಲೆಂಡ್ ತಂಡ: ಝಾಕ್ ಕ್ರಾಲಿ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಬೆನ್ ಡಕೆಟ್, ಜೋ ರೂಟ್, ಫಿಲಿಪ್ ಸಾಲ್ಟ್, ರೆಹಾನ್ ಅಹ್ಮದ್, ವಿಲ್ ಜ್ಯಾಕ್ಸ್, ಲ್ಯೂಕ್ ವುಡ್, ಬ್ರೈಡನ್ ಕಾರ್ಸೆ, ಟಾಮ್ ಹಾರ್ಟ್ಲಿ, ಜಾರ್ಜ್ ಸ್ಕ್ರಿಮ್ಶಾ, ಮ್ಯಾಥ್ಯೂ ಪಾಟ್ಸ್, ಸ್ಯಾಮ್ ಹೈನ್

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್ (ವಕೆಟ್ ಕೀಪರ್), ಆಂಡ್ರ್ಯೂ ಬಾಲ್ಬಿರ್ನಿ, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಕ್ರೇಗ್ ಯಂಗ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್, ನೀಲ್ ರಾಕ್, ಗ್ರಹಾಂ ಹ್ಯೂಮ್, ಆಂಡಿ ಮೆಕ್‌ಬ್ರೈನ್, ಥಿಯೋ ವ್ಯಾನ್ ವೋರ್‌ಕಾಮ್

Story first published: Wednesday, September 20, 2023, 23:25 [IST]
Other articles published on Sep 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+