Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ vs ಐರ್ಲೆಂಡ್, ಏಕೈಕ ಟೆಸ್ಟ್‌ ಪಂದ್ಯ 2ನೇ ದಿನದಾಟದ Live ಸ್ಕೋರ್ ಮಾಹಿತಿ

ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಇಂದು ಎರಡನೇ ದಿನದಾಟ ನಡೆಯುತ್ತಿದ್ದು ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿದೆ. ಮೊದಲ ದಿನದಾಟದಲ್ಲಿ ಅದ್ಭುತ ಬೌಲಿಂಗ್ ಮೂಲಕ ಐರ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿತ್ತು. ಇದೀಗ ಬ್ಯಾಟಿಂಗ್‌ನಲ್ಲಿಯೂ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ.

ಮೊದಲ ದಿನದಾಟದಲ್ಲಿ ಐರ್ಲೆಂಡ್ ತಂಡ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿ ಸ್ಟುವರ್ಟ್ ಬ್ರಾಡ್ ದಾಳಿಗೆ ನಲುಗಿತು. ಹೀಗಾಗಿ ಐರ್ಲೆಂಡ್ ತಂಡ 172 ರನ್‌ಗಳಿಗೆ ಆಲೌಟ್ ಆಗಿದೆ. ಅದಾದ ನಂತರ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡಡ್ 152 ರನ್‌ಗಳಿಸಿ 1 ವಿಕೆಟ್ ಕಳೆದುಕೊಂಡು ಮೊದಲ ದಿನದಾಟ ಮುಗಿಸಿತ್ತು. ಇದೀಗ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಮುನ್ನಡೆ ಸಾಧಿಸಿ ಮುನ್ನುಗ್ಗಿದೆ.

England vs Ireland, only test day 2 Live score and Highlights

ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ದಿನದಾಟದ ಆರಂಭದಲ್ಲಿಯೇ ಬ್ರಾಡ್ ಐರಿಷ್ ಪಡೆಯ ವಿರುದ್ಧ ಮೇಲುಗೈ ಸಾಧಿಸಲು ಆರಂಭಿಸಿದ್ದರು. ಬ್ರಾಡ್ ತೀಕ್ಷ್ಣ ದಾಳಿಕೆ ತತ್ತರಿಸಿದ ಐರ್ಲೆಂಡ್ ತಂಡ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 172 ರನ್‌ಗಳಿಸಿ ಆಲೌಟ್ ಆಗಿದೆ. ಉಳಿದ ಐದು ವಿಕೆಟ್‌ಗಳನ್ನು ಮ್ಯಾಥ್ಯೂ ಪಾಟ್ಸ್ ಹಾಗೂ ಜಾಕ್ ಲೀಚ್ ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್, ಜ್ಯಾಕ್ ಲೀಚ್
ಬೆಂಚ್: ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್, ಡೇನಿಯಲ್ ಲಾರೆನ್ಸ್

ಐರ್ಲಂಡ್ ಆಡುವ ಬಳಗ: ಜೇಮ್ಸ್ ಮೆಕಲ್ಲಮ್, ಪೀಟರ್ ಮೂರ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಪಾಲ್ ಸ್ಟಿರ್ಲಿಂಗ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಕರ್ಟಿಸ್ ಕ್ಯಾಂಫರ್, ಆಂಡಿ ಮೆಕ್‌ಬ್ರೈನ್, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಗ್ರಹಾಂ ಹ್ಯೂಮ್
ಬೆಂಚ್:ಜಾರ್ಜ್ ಡಾಕ್ರೆಲ್, ಕ್ರೇಗ್ ಯಂಗ್, ಮ್ಯಾಥ್ಯೂ ಫೋಸ್ಟರ್, ಥಾಮಸ್ ಮೇಯಸ್

Story first published: Friday, June 2, 2023, 16:04 [IST]
Other articles published on Jun 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+