ಇಂಗ್ಲೆಂಡ್ vs ನೆದರ್ಲೆಂಡ್ಸ್: ಏಕದಿನ ಸರಣಿ, ಮೊದಲ ಪಂದ್ಯ Live ಸ್ಕೋರ್ ಹಾಗೂ ಪ್ಲೇಯಿಂಗ್ XI

ಇಂಗ್ಲೆಂಡ್ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವಿನ ಏಕದಿನ ಸರಣಿ ಆರಂಭವಾಗಿದ್ದು ಮೊದಲ ಪಂದ್ಯಕ್ಕೆ ಚಾಲನೆ ದೊರೆತಿದೆ. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಈ ಪಂದ್ಯ ನಡೆಯುತ್ತಿದ್ದು ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿರುವ ನೆದರ್ಲೆಂಡ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮೂರು ಏಕದಿನ ಪಂದ್ಯಗಳ ಸರಣಿ ಇದಾಗಿದ್ದು ಮೂರು ಪಂದ್ಯಗಳು ಕೂಡ ಆಮ್‌ಸ್ಟರ್‌ಡ್ಯಾಮ್‌ನ ಅಮ್ಸ್ಟಲ್ವೀನ್‌ನ್ಲಲಿ ನಡೆಯಲಿದೆ. ಇಂಗ್ಲೆಂಡ್ ತಂಡ ಅನುಭವ ಹಾಗೂ ಯುವ ಆಟಗಾರರ ಉತ್ತಮ ಸಂಯೋಜನೆಯೊಂದಿಗೆ ಈ ಸರಣಿಗೆ ಆಗಮಿಸಿದ್ದು ಉತ್ತಮ ಪ್ರದರ್ಶನ ನಿಡುವ ನಿರೀಕ್ಷೆಯಲ್ಲಿದೆ. ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ಕಣಕ್ಕಿಳಿದಿದ್ದರೆ ನೆದರ್ಲೆಂಡ್ಸ್ ತಂಡಕ್ಕೆ ಪೀಟರ್ ಸೀಲಾರ್ ನಾಯಕತ್ವವಿದೆ.
Live ಸ್ಕೋರ್ ಹೀಗಿದೆ
ಇನ್ನು ಇಂಗ್ಲೆಂಡ್ ತಂಡ ಕೂಡ ಎರಡು ಪ್ರತ್ಯೇಕ ಸರಣಿಗಳಲ್ಲಿ ಭಾಗಿಯಾಗುತ್ತಿದ್ದು ಒಂದು ತಂಡ ಟೆಸ್ಟ್ ಸರಣಿಯಲ್ಲಿ ಆಡುತ್ತಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ ಎರಡು ಪಂದ್ಯಗಳಲ್ಲಿ ಗೆದ್ದು ಸರಣಿ ವಶಕ್ಕೆ ಪಡೆದುಕೊಂಡಿದೆ. ಮೂರನೇ ಟೆಸ್ಟ್ ಪಂದ್ಯ ಹೆಡಿಂಗ್ಲೆಯಲ್ಲಿ ನಡೆಯಲಿದ್ದು ಜೂನ್ 23ರಿಂದ ಆರಂಭವಾಗಲಿದೆ.
ನೆದರ್ಲೆಂಡ್ಸ್ ಆಡುವ ಬಳಗ: ವಿಕ್ರಮ್‌ಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಮೂಸಾ ಅಹ್ಮದ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ವಾಕ್), ಪೀಟರ್ ಸೀಲಾರ್ (ಸಿ), ಲೋಗನ್ ವ್ಯಾನ್ ಬೀಕ್, ಫಿಲಿಪ್ ಬೋಯಿಸೆವೈನ್, ಶೇನ್ ಸ್ನೇಟರ್, ಆರ್ಯನ್ ದತ್
ಬೆಂಚ್: ವಿವಿಯನ್ ಕಿಂಗ್ಮಾ, ಫ್ರೆಡ್ ಕ್ಲಾಸೆನ್, ಟಿಮ್ ಪ್ರಿಂಗಲ್, ಕ್ಲೇಟನ್ ಫ್ಲಾಯ್ಡ್, ರಿಯಾನ್ ಕ್ಲೈನ್, ಶರೀಜ್ ಅಹ್ಮದ್, ತೇಜಾ ನಿಡಮನೂರು
ಇಂಗ್ಲೆಂಡ್ ಆಡುವ ಬಳಗ: ಜೇಸನ್ ರಾಯ್, ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಇಯಾನ್ ಮಾರ್ಗನ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ
ಬೆಂಚ್: ಬ್ರೈಡನ್ ಕಾರ್ಸ್, ಡೇವಿಡ್ ಪೇನ್, ಲ್ಯೂಕ್ ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications