Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್ vs ಇಂಗ್ಲೆಂಡ್: 2ನೇ ಟೆಸ್ಟ್ ಪಂದ್ಯದ Live ಸ್ಕೋರ್ ಹಾಗೂ ಆಡುವ ಬಳಗ

England vs New Zealand 2nd Test, Live score, playing XI and Live score details

ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸುವಲ್ಲಿ ಯಶಸ್ವುಯಾಗಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಈ ಎರಡು ತಂಡಳು ಮತ್ತೊಮ್ಮೆ ಮುಖಾಮುಖಿಯಾಗಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಮೊದಲ ಪಂದ್ಯದಲ್ಲಿ ಎಂದಿನಂತೇ ಸ್ಪೋಟಕ ಪ್ರದರ್ಶನ ನೀಡಿ ಮತ್ತೊಮ್ಮೆ ಮೇಲುಗೈ ಸಾಧಿಸಿರುವ ಇಂಗ್ಲೆಂಡ್ ತಂಡ ಭಾರೀ ಅಂತರದ ಗೆಲುವು ಸಾಧಿಸಿತು. ಬ್ಯಾಟಿಂಗ್ ಹಾಘೂ ಬೌಲಿಂಗ್ ಎರಡೂ ವಿಭಾಗದಲ್ಲಿಯ ಅದ್ಭುತ ಯಶಸ್ಸು ಸಾಧಿಸಿತು. ಈ ಮೂಲಕ ತಮ್ಮ ಆಕ್ರಮಣಕಾರಿ ಪ್ರದರ್ಶನವನ್ನು ತವರಿನ ಆಚೆಯೂ ಪ್ರದರ್ಶಿಸುವಲ್ಲಿ ಬೆನ್ ಸ್ಟೋಕ್ಸ್ ಪಡೆ ಯಶಸ್ವಿಯಾಗುತ್ತಿದೆ.

Live Score ಹೀಗಿದೆ

1
54252

ಇನ್ನು ಎರಡನೇ ಟೆಸ್ಟ್ ಪಂದ್ಯದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್‌ನ ಆರಂಭಿಕ ಮೂರು ವಿಕೆಟ್‌ಗಳನ್ನು 21 ರನ್‌ಗಳಿಸುವಷ್ಟರಲ್ಲಿ ಇಂಗ್ಲೆಂಡ್ ಕಳೆದುಕೊಂಡಿತು. ಆದರೆ ಅದಾದ ಬಳಿಕ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಅದ್ಭುತ ಜೊತೆಯಾ ನೀಡುತ್ತಾ ಮುನ್ನುಗ್ಗಿದ್ದಾರೆ. ಈ ಜೋಡಿಯಿಂದ ಈಗಾಗಲೇ ದ್ವಿಶತಕದ ಜೊತೆಯಾಟ ಬಂದಿದ್ದು ದೊಡ್ಡ ಮೊತ್ತದತ್ತ ಮುನ್ನುಗ್ಗುತ್ತಿದೆ ಸ್ಟೋಕ್ಸ್ ಪಡೆ. ಹ್ಯಾರಿ ಬ್ರೂಕ್ ಅಮೋಘ ಶತಕ ಸಿಡಿಸಿದ್ದಾರೆ.

ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲುಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ನೀಲ್ ವ್ಯಾಗ್ನರ್
ಬೆಂಚ್: ಸ್ಕಾಟ್ ಕುಗ್ಗೆಲೀಜ್ನ್, ಬ್ಲೇರ್ ಟಿಕ್ನರ್, ಜಾಕೋಬ್ ಡಫಿ, ಇಶ್ ಸೋಧಿ

ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಆಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಆಲಿ ಸ್ಟೋನ್, ಡೇನಿಯಲ್ ಲಾರೆನ್ಸ್, ವಿಲ್ ಜ್ಯಾಕ್ಸ್, ಮ್ಯಾಥ್ಯೂ ಪಾಟ್ಸ್

Story first published: Friday, February 24, 2023, 8:33 [IST]
Other articles published on Feb 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+