Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

"ಸೋಲಿನ ನೋವಿಗಿಂತಲೂ ಸಂತೋಷವಿದೆ": ಕಿವೀಸ್ ವಿರುದ್ಧದ ಸೋಲಿಗೆ ಬೆನ್ ಸ್ಟೋಕ್ಸ್ ಅಚ್ಚರಿಯ ಪ್ರತಿಕ್ರಿಯೆ

England vs New Zealand: Ben Stokes statement After historical match against New Zealand

ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ರೋಚಕವಾಗಿ ಅಂತ್ಯಕಂಡಿದೆ. ಫಾಲೋ ಆನ್‌ಗೆ ಒಳಗಾದ ಬಳಿಕವೂ ಆತಿಥೇಯ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿದ ಬಳಿಕ ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿತು. ಬಹಳ ರೋಚಕವಾಗಿ ನಡೆದ ಈ ಸೆಣೆಸಾಟದಲ್ಲಿ ಅಂತಿಮವಾಗಿ ಆತಿಥೇಯ ನ್ಯೂಜಿಲೆಂಡ್ ತಂಡ ಕೇವಲ ಒಂದು ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಇದು ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ನಾಯಕನಾಗಿ ಅನುಭವಿಸಿದ ಮೊದಲ ಸೋಲಾಗಿದೆ. ಈ ಸೋಲಿನ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸೋಲಿನ ಬೇಸರಕ್ಕಿಂತಲೂ ಇಂಥಾ ಶ್ರೇಷ್ಠ ಪಂದ್ಯದಲ್ಲಿನ ನಾಟಕೀಯ ಏರಿಳಿತಗಳಲ್ಲಿ ತಾನು ಭಾಗಿಯಾಗಿರುವುದು ದೊಡ್ಡ ಸಂತಸ ನೀಡಿದೆ ಎಂದಿದ್ದಾರೆ.

ಬೆನ್ ಸ್ಟೋಕ್ಸ್ ನಾಯಕತ್ವ ವಹಿಸಿಕೊಂಡ ಬಳಿಕ ಹಾಗೂ ಬ್ರೆಂಡನ್ ಮೆಕ್ಕಲಮ್ ಕೋಚ್ ಆಗಿ ನೇಮಕಗೊಂಡ ಬಳಿಕ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಆಟವನ್ನು ಅಳವಡಿಸಿಕೊಂಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿಯೂ ವೈಟ್‌ಬಾಲ್ ಮಾದರಿಯಲ್ಲಿಯೇ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿ ತಂಡಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿಯೂ ಇಂಥಾದ್ದೇ ಪ್ರದರ್ಶನದಲ್ಲಿ ಇಂಗ್ಲೆಂಡ್ ಬಹುತೇಕ ಯಶಸ್ಸು ಸಾಧಿಸಿದರೂ ಅಂತಿಮ ಇನ್ನಿಂಗ್ಸ್‌ನಲ್ಲಿ ಮಾತ್ರವೇ ಎಡವಿ ಸೋಲು ಕಂಡಿತು.

ಈ ಸೋಲಿನ ಬಳಿಕ ಬೆನ್ ಸ್ಟೋಕ್ಸ್ "ಖಂಡಿತವಾಗಿಯೂ ಗೆಲುವು ಸಾಧ್ಯವಾಗದಿರುವುದು ಬೇಸರ ಮೂಡಿಸಿದೆ. ಆದರೆ ನಾವು ಈ ಪಂದ್ಯವನ್ನು ಎಲ್ಲರೂ ಆನಂದಿಸಿರುವ ರೀತಿಯಿಂದಾಗಿ ಇದನ್ನು ಉನ್ನತ ದೃಷ್ಟಿಕೋನದಿಂದ ನೋಡಲು ಬಯಸುತ್ತೇವೆ. ಸೋಲಿನ ಬೇಸರಕ್ಕಿಂತಲೂ ನಮಗೆ ಈ ಕ್ಷಣದಲ್ಲಿ ಅದು ಬಹಳ ಮುಖ್ಯವಾಗಿದೆ" ಎಂದಿದ್ದಾರೆ.

"ಸೋಲುವುದು ಬಹಳ ಬೇಸರದ ವಿಷಯ. ಅದಕ್ಕೇನೂ ಮಾಡಲಾಗುವುದಿಲ್ಲ. ಆದರೆ ಇಂಥಾ ಅದ್ಭುತ ಪಂದ್ಯದ ಭಾಗವಾಗಿರುವುದಕ್ಕೆ ನಾವು ಬಹಳ ಸಂತಸಗೊಂಡಿದ್ದೇವೆ. ನಾವು ಗೆಲುವಿನ ಬಹಳ ಸನಿಹದಲ್ಲಿದ್ದೆವು. ಕೊನೆಯ ದಿನದ ಅಂತಿ ಅರ್ಧ ಗಂಟೆಯ ಆಟ ಬಹಳದಲ್ಲಿ ಎಲ್ಲವೂ ವ್ಯತ್ಯಾಸವಾಗಿತು. ಇಂಥಾ ಆಟವನ್ನು ಎಲ್ಲರೂ ಬಯಸುತ್ತೇವೆ. ಸೋತ ತಂಡವಾಗಿ ನಾವು ಹೊರ ಬಂದರೂ ಇದು ನಮಗೆ ಸಂತಸವನಜ್ನುಂಟು ಮಾಡಿದೆ. ಇಂಥಾ ಅದ್ಭುತ ಪಂದ್ಯದ ಭಾಗವಾಗಿರುವುದಕ್ಕೆ ನಮಗೆ ಬಹಳ ಖುಷಿಯಿದೆ" ಎಂದಿದ್ದಾರೆ.

"ಟೆಸ್ಟ್ ಕ್ರಿಕೆಟ್ ಅಂದರೆ ಏನು ಎಂಬುದನ್ನು ಇದು ಸಾಬೀತುಪಡಿಸಿದೆ. ನಿಜಕ್ಕೂ ಅದ್ಭುತವಾದ ಪಂದ್ಯ. ಕಿವೀಸ್ ಆಟಗಾರರು ಸಹಜವಾಗಿಯೇ ಬಹಳ ಸಂತಸಗೊಂಡಿರುತ್ತಾರೆ. ಇಂಥಾ ಪಂದ್ಯದ ಭಾಗವಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಇದು ಪ್ರತಿಯೊಬ್ಬರೂ ನೀಡಿದ ಹಣಕ್ಕೆ ಅದ್ಭುತ ಮನರಂಜನೆ ನೀಡಿದೆ" ಎಂದಿದ್ದಾರೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್.

ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲುಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ನೀಲ್ ವ್ಯಾಗ್ನರ್
ಬೆಂಚ್: ಸ್ಕಾಟ್ ಕುಗ್ಗೆಲೀಜ್ನ್, ಬ್ಲೇರ್ ಟಿಕ್ನರ್, ಜಾಕೋಬ್ ಡಫಿ, ಇಶ್ ಸೋಧಿ

ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಆಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಆಲಿ ಸ್ಟೋನ್, ಡೇನಿಯಲ್ ಲಾರೆನ್ಸ್, ವಿಲ್ ಜ್ಯಾಕ್ಸ್, ಮ್ಯಾಥ್ಯೂ ಪಾಟ್ಸ್

Story first published: Tuesday, February 28, 2023, 16:30 [IST]
Other articles published on Feb 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+