Engl vs NZ: ಬೌಲರ್‌ಗಳ ಆರ್ಭಟಕ್ಕೆ ಅಡ್ಡಿಯಾಗುವವರಾರು? 2ನೇ ದಿನದ Live ಸ್ಕೋರ್

ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಬೌಲರ್‌ಗಳ ಅಬ್ಬರ ಜೋರಾಗಿದೆ. ಮೊದಲ ದಿನದಾಟದಲ್ಲಿ ಒಟ್ಟು 17 ವಿಕೆಟ್‌ಗಳು ಉರುಳಿದ್ದು ಎರಡು ತಂಡಗಳ ಬ್ಯಾಟರ್‌ಗಳು ಕೂಡ ಕ್ರೀಸ್‌ನಲ್ಲಿ ನೆಲೆಯೂರಲು ಹರಸಾಹಸ ಪಡುತ್ತಿದ್ದಾರೆ. ಎರಡನೇ ದಿನದಾಟ ಆರಂಭವಾಗಿದ್ದು ಇಂದು ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಎರಡನೇ ಸರದಿಯಲ್ಲಿ ಬ್ಯಾಟಿಂಗ್ ನಡೆಸಿರುವ ಇಂಗ್ಲೆಂಡ್ ತಂಡ ಸಾಧಾರಣ ಆರಂಭವನ್ನು ಪಡೆದ ಹೊರತಾಗಿಯೂ ಸಂಕಷ್ಟದಲ್ಲಿ ಸಿಲುಕಿದೆ. ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು 132 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ಪಡೆ ಊಹಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಕುಸಿತಕ್ಕೆ ಒಳಗಾಯಿತು.
Live ಸ್ಕೋರ್ ಹೀಗಿದೆ
ಕಿವೀಸ್ ಬ್ಯಾಟಿಂಗ್‌ಗೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ ಒಂದು ಹಂತದಲ್ಲಿ 92 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಕಿವೀಸ್ ಬೌಲರ್‌ಗಳು ಇಂಗ್ಲೆಂಡ್ ದಾಂಡಿಗರ ಮೇಲೆ ಸವಾರಿ ಮಾಡಲು ಆರಂಭಿಸಿದರು. ತಂಡದ ಮೊತ್ತ 100 ರನ್‌ಗಳಾಗುವಷ್ಟರಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡಿ 121 ರನ್‌ಗಳಿಸಿದೆ.
ಇನ್ನು ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಪ್ರವಾಸಿ ನ್ಯೂಜಿಲೆಂಡ್ ಪಡೆ ಬ್ಯಾಟಿಂಗ್‌ನಲ್ಲಿ ಭಾರೀ ಆಘಾತವನ್ನು ಅನುಭವಿಸಿತ್ತು. ಸಂಪೂರ್ಣ ಬ್ಯಾಟಿಂಗ್ ವಿಭಾಗ ಹೀನಾಯ ಪ್ರದರ್ಶನ ನೀಡಿದ್ದು ಕನಿಷ್ಠ ಮೊತ್ತಕ್ಕೆ ಕುಸಿಯುವ ಭೀತಿಯನ್ನು ಎದುರಿಸಿತ್ತು. ಆದರೆ ಅಂತಿಮ ಹಂತದಲ್ಲಿ ಗ್ರಾಂಡ್‌ಹೋಮೆ ಹಾಗೂ ಟಿಮ್ ಸೌಥಿ ಅವರಿಂದ ಮಹತ್ವದ ಜೊತೆಯಾಟವೊಂದು ಬಂದ ಕಾರಣ ತಂಡದ ಮೊತ್ತ 100ರ ಗಡಿ ದಾಟಿತು. ಅಂತಿಮವಾಗಿ ನ್ಯೂಜಿಲೆಂಡ್ ಬಳಗ 132 ರನ್‌ಗಳಿಗೆ ಆಲೌಟ್ ಆಯಿತು.
ಇಂಗ್ಲೆಂಡ್ ತಂಡದ ಪರವಾಗಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಯುವ ವೇಗಿ ಮ್ಯಾಟಿ ಪಾಟ್ಸ್ ಈ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಅದ್ಭುತ ಆರಂಭವನ್ನು ಪಡೆದಿದ್ದಾರೆ. ಇನ್ನು ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಕುಡ ನಾಲ್ಕು ವಿಕೆಟ್ ಪಡೆದುಕೊಂಡರು. ಸ್ಟುವರ್ಟ್ ಬ್ರಾಡ್ ಹಾಗೂ ಬೆನ್ ಸ್ಟೋಕ್ಸ್ ತಲಾ ಒಂದು ವಿಕೆಟ್ ಸಂಪಾದಿಸಿದ್ದಾರೆ.
ಆಡುವ ಬಳಗ: ಝಾಕ್ ಕ್ರಾಲಿ, ಅಲೆಕ್ಸ್ ಲೀಸ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಬೆಂಚ್: ಹ್ಯಾರಿ ಬ್ರೂಕ್, ಕ್ರೇಗ್ ಓವರ್ಟನ್
ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ಟಿಮ್ ಸೌಥಿ, ಅಜಾಜ್ ಪಟೇಲ್, ಟ್ರೆಂಟ್ ಬೌಲ್ಟ್
ಬೆಂಚ್: ಹೆನ್ರಿ ನಿಕೋಲ್ಸ್, ಮೈಕೆಲ್ ಬ್ರೇಸ್ವೆಲ್, ಕ್ಯಾಮ್ ಫ್ಲೆಚರ್, ನೀಲ್ ವ್ಯಾಗ್ನರ್, ಮ್ಯಾಟ್ ಹೆನ್ರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications