For Quick Alerts
ALLOW NOTIFICATIONS  
For Daily Alerts
 

Engl vs NZ: ರೂಟ್, ಸ್ಟೋಕ್ಸ್ ಭರ್ಜರಿ ಆಟ: ಸೋಲಿನ ಸುಳಿಯಲ್ಲಿ ಕಿವೀಸ್ ಪಡೆ: Highlights

England vs New Zealand test series 2022, 1st Test day 3, Lords, Highlights

ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆ ಸೋಲಿನ ಸುಳಿಗೆ ಸಿಲುಕಿದೆ. ಸಾಕಷ್ಟು ಏರಿಳಿತಳನ್ನು ಕಂಡಿರುವ ಈ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟದ ಅಂತ್ಯದಲ್ಲಿ ಆತಿಥೆಯ ಇಂಗ್ಲೆಂಡ್ ತಂಡ ಸ್ಪಷ್ಟ ಮೇಲುಗೈ ಸಾಧಿಸಿದ್ದು ಗೆಲುವಿನ ಸನಿಹದಲ್ಲಿದೆ. ಬೌಲರ್‌ಗಳೇ ಮೇಲುಗೈ ಸಾಧಿಸಿರುವ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಪರವಾಗಿ ಡ್ಯಾರೆಲ್ ಮಿಚೆಲ್ ಹಾಗೂ ಟಾಮ್ ಬ್ಲಾಂಡೆಲ್ ಜೋಡಿಯಿಂದ ಅದ್ಭುತ ಜೊತೆಯಾಟ ಬಂದರೆ ಇಂಗ್ಲೆಂಡ್ ತಂಡದ ಪರವಾಗಿ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಪ್ರವಾಸಿಗರಿಗೆ ಅಡ್ಡಿಯಾಗಿ ನಿಂತರು.

ಎರಡನೇ ಇನ್ನಿಂಗ್ಸ್‌ನಲ್ಲಿ ಡ್ಯಾರೆಲ್ ಮಿಚೆಲ್ ಅವರ ಭರ್ಜರಿ ಶತಕ ಹಾಗೂ ಟಾಮ್ ಬ್ಲಾಂಡೆಲ್ ಸಿಡಿಸಿದ 96 ರನ್‌ಗಳ ಅಮೂಲ್ಯ ಕೊಡುಗೆಯ ಕಾರಣದಿಂದಾಗಿ ನ್ಯೂಜಿಲೆಂಡ್ ತಂಡ 285 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಈ ಆಟಗಾರರು ಬೇರ್ಪಟ್ಟ ನಂತರ ಉಳಿದ ಆಟಗಾರರ್ಯಾರು ಕೂಡ ಕಿವೀಸ್ ಪಡೆಗೆ ಬೆಂಬಲವಾಗಲಿಲ್ಲ. ಹೀಗಾಗಿ 276 ರನ್‌ಗಳ ಗುರಿಯನ್ನು ಮುಂದಿಟ್ಟಿತ್ತು ಕಿವೀಸ್ ಪಡೆ.

ಇನ್ನು ನ್ಯೂಜಿಲೆಂಡ್ ನೀಡಿದ ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕುಸಿತ ಕಾಣಲು ಆರಂಭಿಸಿತ್ತು. ತಂಡದ ಮೊತ್ತ 69 ಆಗುವಷ್ಟರಲ್ಲಿ ಆತಿಥೇಯ ತಂಡದ ನಾಲ್ಕು ವಿಕೆಟ್‌ಗಳು ಉರುಳಿತ್ತು. ಹೀಗಾಗಿ ನ್ಯೂಜಿಲೆಂಡ್ ಪಂದ್ಯದಲ್ಲಿ ಮೇಲುಗೈ ಸಾಧಿಸುತ್ತಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಸಂದರ್ಬದಲ್ಲಿ ಜೊತೆಯಾದ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಅದ್ಭುತ ಜೊತೆಯಾಟವೊಂದನ್ನು ನೀಡಿದ್ದಾರೆ. 90 ರನ್‌ಗಳ ಮಹತ್ವದ ಜೊತೆಯಾ ಈ ಜೋಡಿಯಿಂದ ಬಂತು. ಬಳಿಕ 54 ರನ್‌ಗಳಿಸಿದ್ದ ಬೆನ್ ಸ್ಟೋಕ್ಸ್ ವಿಕೆಟ್ ಕಳೆದುಕೊಂಡರು.

ಮತ್ತೊಂದೆಡೆ ಬ್ಯಾಟಿಂಗ್ ಮುಂದುವರಿಸಿರುವ ಮಾಝಿ ನಾಯಕ ಜೋ ರೂಟ್ 77 ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದು ಅವರಿಕೆ ಬೆನ್ ಫೋಕ್ಸ್ ಸಾಥ್ 9 ರನ್‌ಗಳೊಂದಿಗೆ ಸಾಥ್ ನೀಡುತ್ತಿದ್ದಾರೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು ಇಂಗ್ಲೆಂಡ್ ತಂಡದ ಗೆಲುವಿಗೆ ಇನ್ನು 61 ರನ್‌ಗಳಷ್ಟೇ ಅಗತ್ಯವಿದೆ. ಇನ್ನು ಪ್ರವಾಸಿ ಕಿವಿಸ್ ತಂಡಕ್ಕೆ 5 ವಿಕೆಟ್‌ಗಳನ್ನು ಸಂಪಾದಿಸಿದರೆ ಮಾತ್ರವೇ ಗೆಲುವು ಸಾಧ್ಯ. ಹೀಗಾಗಿ ನಾಲ್ಕನೇ ದಿನದಾಟ ಕುತೂಹಲ ಮೂಡಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡ ಕೇವಲ 132 ರನ್‌ಗಳನ್ನು ಮಾತ್ರವೇ ಗಳಿಸಿ ಆಲೌಟ್ ಆಯಿತು. ಅದಾದ ಬಳಿಕ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಕೂಡ ಕುಸಿತ ಕಂಡಿದ್ದು 141 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ 9 ರನ್‌ಗಳ ಮುನ್ನಡೆಯನ್ನು ಪಡೆಯಲು ಮಾತ್ರವೇ ಯಶಸ್ವಿಯಾಯಿತು.

ಆಡುವ ಬಳಗ:ಇಂಗ್ಲೆಂಡ್: ಝಾಕ್ ಕ್ರಾಲಿ, ಅಲೆಕ್ಸ್ ಲೀಸ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

ಬೆಂಚ್: ಹ್ಯಾರಿ ಬ್ರೂಕ್, ಕ್ರೇಗ್ ಓವರ್ಟನ್

ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ಟಿಮ್ ಸೌಥಿ, ಅಜಾಜ್ ಪಟೇಲ್, ಟ್ರೆಂಟ್ ಬೌಲ್ಟ್
ಬೆಂಚ್: ಹೆನ್ರಿ ನಿಕೋಲ್ಸ್, ಮೈಕೆಲ್ ಬ್ರೇಸ್ವೆಲ್, ಕ್ಯಾಮ್ ಫ್ಲೆಚರ್, ನೀಲ್ ವ್ಯಾಗ್ನರ್, ಮ್ಯಾಟ್ ಹೆನ್ರಿ

Story first published: Saturday, June 4, 2022, 23:55 [IST]
Other articles published on Jun 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+